WTC ಫೈನಲ್​ಗೆ ಮತ್ತೆ ಮಳೆರಾಯನ ಕಾಟ.. 4ನೇ ದಿನದ ಮೊದಲ ಸೆಷನ್ ಮಳೆಗೆ ಆಹುತಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ 4ನೇ ದಿನದಾಟದ ಮೊದಲ ಸೆಷನ್ ಮಳೆಗೆ ಆಹುತಿಯಾಗಿದೆ. ಬೆಳಗ್ಗೆಯಿಂದ ಸೌತ್​​ಹ್ಯಾಂಪ್ಟನ್​​ನಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, 4ನೇ ದಿನದಾಟದ ಬಹುಪಾಲು ಸಮಯ ಮಳೆಗೆ ತುತ್ತಾಗ ಅನುಮಾನ ವ್ಯಕ್ತವಾಗಿದೆ.

ಆರಂಭಿಕ ದಿನದಿಂದಲೂ ಐತಿಹಾಸಿಕ ಪಂದ್ಯಕ್ಕೆ ಮಳೆ ಭಾರೀ ಹಿನ್ನಡೆಯುಂಟು ಮಾಡುತ್ತಿದ್ದು, ಮೊದಲ ದಿನ ಸಂಪೂರ್ಣ ವ್ಯರ್ಥವಾದರೆ, 2ನೇ ದಿನ ಮಂದಬೆಳಕಿನ ಕಾರಣ ಬೇಗ ಮುಕ್ತಾಯವಾಯ್ತು. 3ನೇ ದಿನದಾಟವೂ ಮಳೆಯ ಕಾರಣ ಅರ್ಧಗಂಟೆ ತಡವಾಗಿ ಆರಂಭವಾಗಿತ್ತು.

ಆದರೆ ಅಂತಿಮ ಹಂತದಲ್ಲಿ ಮಂದಬೆಳಕಿನ ಕಾರಣ 80 ಓವರ್‌ಗಳಷ್ಟು ಪಂದ್ಯ ನಡೆಯಲು ಮಾತ್ರವೇ ಸಾಧ್ಯವಾಗಿತ್ತು. ಇನ್ನೂ ಇಂದಿನ ಸೌತ್​ ಹ್ಯಾಂಪ್ಟನ್ ಹವಾಮಾನದಂತೆ ಮಧ್ಯಾಹ್ನ 12 ಗಂಟೆವರೆಗೆ ಭಾರೀ ಮಳೆಯ ಸಾಧ್ಯತೆ ಹೊಂದಿದೆ. ಸಂಜೆ 4 ಗಂಟೆಗೆ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ ಇದೆ. ಸದ್ಯ ಬ್ಯಾಟಿಂಗ್​ ಮಾಡಿರುವ ನ್ಯೂಜಿಲೆಂಡ್​, 2 ವಿಕೆಟ್​ ಕಳೆದುಕೊಂಡು 101 ರನ್​ಗಳಿಸಿದೆ.

The post WTC ಫೈನಲ್​ಗೆ ಮತ್ತೆ ಮಳೆರಾಯನ ಕಾಟ.. 4ನೇ ದಿನದ ಮೊದಲ ಸೆಷನ್ ಮಳೆಗೆ ಆಹುತಿ appeared first on News First Kannada.

Source: newsfirstlive.com

Source link

ಶಾಸಕ ಜಮೀರ್​​​ಗೆ AICC ವಾರ್ನಿಂಗ್

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಪದೇ ಪದೇ ಹೇಳಿಕೆ ನೀಡುತ್ತಿದ್ದ ಜಮೀರ್ ಅಹಮ್ಮದ್ ಖಾನ್ ಗೆ ಬಹಿರಂಗ ಹೇಳಿಕೆ ನೀಡದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಬೆನ್ನಲ್ಲೇ ಶಾಸಕ ಜಮೀರ್ ಅಹಮ್ಮದ್ ಖಾನ್ ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಕರೆ ಮಾಡಿದ್ದಾರೆ. ಇಂದು ಬೆಳಗ್ಗೆ ಕರೆ ಮಾಡಿ ಮಾತನಾಡಿದ ಸುರ್ಜೆವಾಲಾ, ಪಕ್ಷದ ಶಿಸ್ತು ಮೀರದಂತೆ ಎಚ್ಚರಿಕೆ ನೀಡಿದ್ದಾರೆ. ಬಹಿರಂಗ ಹೇಳಿಕೆ ಕೊಡದಂತೆ ಜಮೀರ್ ಅಹಮ್ಮದ್ ಖಾನ್ ಗೆ ಸೂಚನೆ ನೀಡಿದ್ದಾರೆ. ಪಕ್ಷದಲ್ಲಿ ಶಿಸ್ತು ಮುಖ್ಯ, ಯಾವ ಕಾರಣಕ್ಕೂ ಬಹಿರಂಗ ಹೇಳಿಕೆ ಕೊಡದಂತೆ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ಎಚ್ಚರಿಕೆಗೂ ಬಗ್ಗದೆ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದು ಜಮೀರ್ ಅಹಮ್ಮದ್ ಖಾನ್ ಪದೇ ಪದೇ ಹೇಳಿಕೆ ಕೊಡುತ್ತಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲರಿಂದಲೆ ಜಮೀರ್ ಗೆ ಎಚ್ಚರಿಕೆ ರವಾನಿಸುವ ಮೂಲಕ ಜಮೀರ್ ಅಹಮ್ಮದ್ ಖಾನ್ ಹೇಳಿಕೆಗೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

The post ಶಾಸಕ ಜಮೀರ್​​​ಗೆ AICC ವಾರ್ನಿಂಗ್ appeared first on Public TV.

Source: publictv.in

Source link

ಬಣ ರಾಜಕೀಯ ಬಂದ್ ಮಾಡಿ.. ಮುಂದಿನ ಸಿಎಂ ಬಗ್ಗೆ ಮಾತನಾಡಬೇಡಿ..’ಕೈ’ ಹೈ ಕಮಾಂಡ್ ಕಟ್ಟಪ್ಪಣೆ

ರಾಜ್ಯ ಕಾಂಗ್ರೆಸ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಣಗಳ ಗದ್ದಲ ದೊಡ್ಡದಾಗುತ್ತಿದೆ. ಒಂದು ಬಣ ಪದೇ ಪದೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾ ಇದ್ದರೆ, ಡಿ.ಕೆ ಶಿವಕುಮಾರ್ ಮಾತ್ರ ನಮ್ಮದು ಸಾಮೂಹಿಕ ನಾಯಕತ್ವ.. ಅಂತಾ ಡ್ಯಾಮೇಜ್ ಕಂಟ್ರೋಲ್​ ಮಾಡ್ತಿದ್ದಾರೆ. ಹೇಳಿಕೆಗಳನ್ನ ಕೊಡುವ ಮೊದಲು ನಾಯಕರು ಹದ್ದು ಬಸ್ತಿನಲ್ಲಿರಬೇಕು ಅಂತ ಡಿ.ಕೆ ಶಿವಕುಮಾರ್ ಹೇಳಿದ ಬಳಿಕವೂ, ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯರನ್ನ ಮಾಜಿ ಸಿಎಂ ಅನ್ನಲು ಮನಸ್ಸು ಒಪ್ಪಲ್ಲ.. ಅದಕ್ಕಾಗಿ ಭಾವಿ ಸಿಎಂ ಅಂತೀನಿ.. ಇದು ನನ್ನ ವೈಯಕ್ತಿಕ ಅಂತಾ ಹೇಳಿ ಸೆಡ್ಡು ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಹೈ ಕಮಾಂಡ್ ಮಧ್ಯಪ್ರವೇಶಿಸಿದ್ದು, ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡದಂತೆ ಖಡಕ್ ಸೂಚನೆಯನ್ನ ನೀಡಿದೆ..

ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ.. ಮುಂದೆ ಸಿಎಂ ಯಾರು ಆಗಬೇಕು ಅನ್ನೋದನ್ನ ಜನರು ನಿರ್ಧರಿಸುತ್ತಾರೆ. ಕರ್ನಾಟಕದ ಅಭಿವೃದ್ಧಿಗೆ ಸದ್ಯ ಬಿಜೆಪಿ ಮುಳ್ಳಾಗಿದೆ.. ಹೀಗಾಗಿ ಯಾರೂ ಮುಂದಿನ ಸಿಎಂ ಬಗ್ಗೆ ಹೇಳಿಕೆ ನೀಡಬಾರದು.. ಆದ್ರೆ ಹೋರಾಟ ಮುಂದುವರೆಸಬೇಕು ಅಂತಾ ಕಟ್ಟಪ್ಪಣೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನಾಯಕತ್ವ, ಸರ್ಕಾರ ರಚನೆ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಇಂಥ ಹೇಳಿಕೆ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ.. ಕಾಂಗ್ರೆಸ್ ಪಕ್ಷದ ಹೈಕಮ್ಯಾಂಡ್, ಶಾಸಕರು ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಎಲ್ಲ ಕಾಂಗ್ರೆಸ್ ನಾಯಕರು ಜನರ ಹಿತಾಸಕ್ತಿಗಾಗಿ ಒಗ್ಗೂಡಿ ಹೋರಾಡಬೇಕು..ಮಹಾಭಾರತದ ಅರ್ಜುನನಂತೆ ಹೋರಾಟ ನಮ್ಮ ಗುರಿ ಅಂತ ಕೂಡ ಅವರು ಕಟುವಾಗಿಯೇ ಹೇಳಿದ್ದಾರೆ.

The post ಬಣ ರಾಜಕೀಯ ಬಂದ್ ಮಾಡಿ.. ಮುಂದಿನ ಸಿಎಂ ಬಗ್ಗೆ ಮಾತನಾಡಬೇಡಿ..’ಕೈ’ ಹೈ ಕಮಾಂಡ್ ಕಟ್ಟಪ್ಪಣೆ appeared first on News First Kannada.

Source: newsfirstlive.com

Source link

ಯೋಗ ದಿನದಂದು ಸಾರಾ ಅಲಿ ಖಾನ್ ಪರ್ಫೆಕ್ಟ್​ ಯೋಗ 

ನವದೆಹಲಿ: ‘ಉತ್ತಮ ಆರೋಗ್ಯಕ್ಕಾಗಿ ಯೋಗ’ ಅನ್ನೋ ಥೀಮ್​​ನಡಿ ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನ ಆಚರಿಸಲಾಗ್ತಿದೆ. ಸ್ಟಾರ್​ ನಟ, ನಟಿಯರು ಸೇರಿದಂತೆ ಎಲ್ಲೆಡೆ ಯೋಗದಿನವನ್ನ ಆಚರಿಸಲಾಗ್ತಿದೆ. ಅದ್ರಂತೆ ಬಾಲಿವುಡ್​ ಬೆಡಗಿ ಸಾರಾ ಅಲಿ ಖಾನ್ ಕೂಡ ಯೋಗ ಡೇ ಆಚರಿಸಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಯೋಗ ಮಾಡುತ್ತಿರುವ ಫೋಟೋವನ್ನ ಅಪ್​ಲೋಡ್ ಮಾಡಿದ್ದಾರೆ. ಪ್ರಶಾಂತವಾದ ವಾತಾವರಣದಲ್ಲಿ ನಿಂತು ಪ್ರಣಾಮಾಸನ ಮಾಡ್ತಿರುವ ಫೋಟೋ ಇದಾಗಿದೆ. ಅಲ್ಲದೇ ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳನ್ನ ಕೋರಿದ್ದಾರೆ.

ಸಾರಾ ಅಲಿ ಖಾನ್, ಅವರು ಅಕ್ಷಯ್ ಕುಮಾರ್ ಹಾಗೂ ಧನುಷ್ ಅಭಿನಯದ ‘ಅತ್ರಂಗಿ ರೆ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 2020 ಡಿಸೆಂಬರ್​​ನಲ್ಲಿ ತೆರೆ ಕಂಡ ಕೂಲಿ ನಂಬರ್ 1 ಚಿತ್ರದಲ್ಲಿ ಸಾರಾ ಅಲಿ ಖಾನ್ ನಟಿಸಿದ್ದರು. ಅದಾದ ಬಳಿಕ ಅತ್ರಂಗಿ ರೆ ಪ್ರಾಜೆಕ್ಟ್​​ನಲ್ಲಿ ಕೆಲಸ ಮಾಡುತ್ತಿದ್ದಾರೆ.

 

View this post on Instagram

 

A post shared by Sara Ali Khan (@saraalikhan95)

The post ಯೋಗ ದಿನದಂದು ಸಾರಾ ಅಲಿ ಖಾನ್ ಪರ್ಫೆಕ್ಟ್​ ಯೋಗ  appeared first on News First Kannada.

Source: newsfirstlive.com

Source link

ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಜಾಗ್ವರ್ ನಿಖಿಲ್ ಕುಮಾರ್ ಸ್ವಾಮಿ ಪ್ರೀತಿಯ ಪತ್ನಿ ರೇವತಿಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಿಖಿಲ್ ಕುಮಾರ್ ಸ್ವಾಮಿಯವರು ಪತ್ನಿ ರೇವತಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿಯವರು ತಮ್ಮ ಪತ್ನಿ ರೇವತಿ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಿಖಿಲ್ ತಮ್ಮ ಮಡದಿ ಜೊತೆ ತುಗುಯ್ಯಲೆ ಮೇಲೆ ಒಟ್ಟಿಗೆ ಕುಳಿತುಕೊಂಡಿದ್ದು, ರೇವತಿಯವರು ತಮ್ಮ ಎರಡು ಕೈಗಳಿಗೆ ಮೆಹಂದಿ ಹಾಕಿಕೊಂಡು ಕುಳಿತುಕೊಂಡಿದ್ದಾರೆ. ಹ್ಯಾಪಿ ಹ್ಯಾಪಿ ಬರ್ತ್‍ಡೇ ಟೂ ಯು ಮೈ ಲವ್ (ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು) ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್‍ನಲ್ಲಿ ಆಪ್ತ ಬಂಧುಗಳ ಸಮ್ಮುಖದಲ್ಲಿ 2021ರ ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹ ನಂತರ ಪ್ರಣಯ ಪಕ್ಷಿಗಳಂತೆ ಇರುವ ಈ ಮುದ್ದಾದ ಜೋಡಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ.

ಇತ್ತೀಚೆಗಷ್ಟೇ ನಿಖಿಲ್‍ಕುಮಾರಸ್ವಾಮಿಯರು ಲಾಕ್‍ಡೌನ್ ವೇಳೆ ಸಂಕಷ್ಟದಲ್ಲಿದ್ದ ಅನೇಕ ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ದಿನಗಳ ಹಿಂದೆ ನಿಖಿಲ್ ಕುಮಾರಸ್ವಾಮಿಯವರು ರಾಮನಗರದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದರು.

The post ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ appeared first on Public TV.

Source: publictv.in

Source link

ಮುಂಬೈನಲ್ಲಿ ಸಾಹುಕಾರ ಸ್ಕೆಚ್; ಇದ್ದಕ್ಕಿದ್ದಂತೆ ದೇವೇಂದ್ರ ಫಡ್ನವಿಸ್ ಭೇಟಿಯಾದ ರಮೇಶ್

ಮುಂಬೈ: ಮುಂಬೈನಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ರನ್ನು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಭೇಟಿಯಾಗಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನಲಾಗಿದೆ. ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ಸದ್ಯ ಎಸ್‌ಐಟಿ ತಂಡದ ಮುಂದೆ ಆರೋಪಿಗಳು ಹಾಜರಾದ ಕಾರಣ.. ಆದಷ್ಟು ಬೇಗ, ಪ್ರಕರಣದಿಂದ ಹೊರ ಬಂದು ಮತ್ತೆ ಸಂಪುಟ ಸೇರಲು ಸರ್ಕಾರದ ಮೇಲೆ ಪರೋಕ್ಷವಾಗಿ ಒತ್ತಡ ಹೇರಲು ಸಾಹುಕಾರ್ ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಬೆನ್ನಲ್ಲೇ ಮುಂಬೈಗೆ ತೆರಳಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.

ಫಡ್ನವಿಸ್ ಭೇಟಿ ವೇಳೆ ಪ್ರಕರಣದ ವಿಚಾರವನ್ನ ಪ್ರಸ್ತಾಪಿಸಿದ ರಮೇಶ್ ಜಾರಕಿಹೊಳಿ.. ಸದ್ಯ ನನ್ನ ವಿರುದ್ಧದ ಪ್ರಕರಣದಲ್ಲಿ ಆರೋಪಿಗಳು ಎಸ್‌ಐಟಿ ತಂಡದ ಮುಂದೆ ಉಪಸ್ಥಿತರಿದ್ದಾರೆ. ಕಳೆದ 5 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಈಗ ಬಂದಿದ್ದಾರೆ. ಎಸ್‌ಐಟಿ ತಂಡದಿಂದ ನನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದೇನೆ. ಈಗ ಪ್ರಕರಣದಲ್ಲಿ ನಾನು ನಿರಾಪರಾಧಿ. ಈ ನಿಟ್ಟಿನಲ್ಲಿ ಮತ್ತೆ ನನ್ನನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕು. ಈ ವಿಚಾರವನ್ನು ನೀವು ನೇರವಾಗಿ ಹೈಕಮಾಂಡ್ ನಾಯಕರಿಗೆ ತಲುಪಿಸಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.

The post ಮುಂಬೈನಲ್ಲಿ ಸಾಹುಕಾರ ಸ್ಕೆಚ್; ಇದ್ದಕ್ಕಿದ್ದಂತೆ ದೇವೇಂದ್ರ ಫಡ್ನವಿಸ್ ಭೇಟಿಯಾದ ರಮೇಶ್ appeared first on News First Kannada.

Source: newsfirstlive.com

Source link

ವರ್ಗಾವಣೆಯಾದರೂ IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಪ್ಪದ ಸಂಕಷ್ಟ

ಮೈಸೂರು: ವರ್ಗಾವಣೆಯಾದರೂ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ತಪ್ಪುತ್ತಿಲ್ಲ. ಇದೀಗ ಜಿಲ್ಲಾಧಿಕಾರಿ ನಿವಾಸ ಅನಧಿಕೃತ ನವೀಕರಣ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ನಡೆಸಿ ವರದಿ ನೀಡಲು ಕಂದಾಯ ಇಲಾಖೆ ನಿರ್ದೇಶನ ನೀಡಿದೆ.

ಪ್ರಾದೇಶಿಕ ಆಯುಕ್ತರಿಗೆ 7 ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶ‌ ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಅಧಿಕೃತ ನಿವಾಸ, ಜಲಸನ್ನಿಧಿ ಪಾರಂಪರಿಕ ಕಟ್ಟಡವನ್ನು ಅನಧಿಕೃತವಾಗಿ ನವೀಕರಿಸಿರೋ ಆರೋಪ ರೋಹಿಣಿ ಸಿಂಧೂರಿ ಮೇಲೆ ಇದೆ.

ಶಾಸಕ ಸಾ.ರಾ. ಮಹೇಶ್ ದೂರು ಆಧರಿಸಿ ತನಿಖೆಗೆ ಆದೇಶ ನೀಡಲಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ಬಂದಿದೆ. ಮೈಸೂರು ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಅವಧಿಯಲ್ಲಿ ನೆಲಹಾಸು ನವೀಕರಣ ನಡೆದಿತ್ತು. ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿಯಿಂದ ಅನುಮತಿ ಪಡೆಯದೇ ನೆಲಹಾಸು ನವೀಕರಣಕ್ಕೆ 16.50 ಲಕ್ಷ ಖರ್ಚು ಮಾಡಿರುವ ಆರೋಪ ಇದೆ.

The post ವರ್ಗಾವಣೆಯಾದರೂ IAS ಅಧಿಕಾರಿ ರೋಹಿಣಿ ಸಿಂಧೂರಿಗೆ ತಪ್ಪದ ಸಂಕಷ್ಟ appeared first on News First Kannada.

Source: newsfirstlive.com

Source link

SSLC ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿಕೊಟ್ಟ ಸರ್ಕಾರ.. ಊರುಗಳಲ್ಲೇ ಪರೀಕ್ಷೆ

ಬೆಂಗಳೂರು: ಪರೀಕ್ಷೆ ಬರೆಯುವ ಟೆನ್ಷನ್​​ನಲ್ಲಿರುವ SSLC ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರ ಊರುಗಳಲ್ಲೇ ಪರೀಕ್ಷೆ ಬರೆಯಲು ಎಸ್​ಎಸ್​ಎಲ್​​ಸಿ ಬೋರ್ಡ್ ಅವಕಾಶ ಮಾಡಿಕೊಟ್ಟಿದೆ.

ವಿದ್ಯಾರ್ಥಿಗಳೇ ಆಯ್ಕೆ ಮಾಡುವ ಕೇಂದ್ರ, ಆಸನದ ವ್ಯವಸ್ಥೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಶಿಕ್ಷಣ ಇಲಾಖೆ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪರೀಕ್ಷೆ ಬರೆಸಲು ನಿರ್ಧರಿಸಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೇರೆ ಬೇರೆ ಕೇಂದ್ರಗಳಿಗೆ ಹೋಗಿ ಪರೀಕ್ಷೆಗಳನ್ನ ಬರೆಯೋದು ವಿದ್ಯಾರ್ಥಿಗಳಿಗೆ ಕಷ್ಟವಾಗಿತ್ತು. ಕೊರೊನಾ ಭಯದ ನಡುವೆ ಹೆಂಗಪ್ಪಾ ಪರೀಕ್ಷೆ ಬರೆಯೋದು ಅಂತಾ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು. ಇದೀಗ ವಿದ್ಯಾರ್ಥಿಗಳ ಟೆನ್ಷನ್​​ಗೆ ಸರ್ಕಾರ ಮುಕ್ತಿ ಹಾಡಿದೆ.

ಇದನ್ನೂ ಓದಿ: SSLC ಪರೀಕ್ಷಾ ವಿಧಾನದ ಬಗ್ಗೆ ಗೈಡ್​ಲೈನ್ಸ್​ ಪ್ರಕಟ; ಹೇಗೆ ನಡೆಯುತ್ತೆ ಎಕ್ಸಾಂ? 

The post SSLC ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿಕೊಟ್ಟ ಸರ್ಕಾರ.. ಊರುಗಳಲ್ಲೇ ಪರೀಕ್ಷೆ appeared first on News First Kannada.

Source: newsfirstlive.com

Source link

ಹೈಕೋರ್ಟ್ ನೋಟಿಸ್ ಪಡೆಯದ ರಮೇಶ್ ಜಾರಕಿಹೊಳಿ – ವಿಚಾರಣೆ ಬಳಿಕ ನೋಟಿಸ್ ರಿಸೀವ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿ ಎಸ್‍ಐಟಿ ಬದ್ಧತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿ ಶ್ರೀ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

ಹೈಕೋರ್ಟ್ ನಿಂದ ನೋಟಿಸ್ ಪಡೆದು ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ಹಾಜರಾಗಿದ್ದರು. ಆದ್ರೆ ಹೈಕೋರ್ಟ್ ನೋಟಿಸ್ ಈವರೆಗೂ ರಮೇಶ್ ಜಾರಕಿಹೊಳಿ ಪಡೆದಿಲ್ಲ. ಹೈಕೋರ್ಟ್ ಜಾರಿ ಮಾಡಿದ ಹ್ಯಾಂಡ್ ಸಮನ್ಸ್ ಪಡೆಯಲು ರಮೇಶ್ ಜಾರಕಿಹೊಳಿ ನಿರಾಕರಿಸಿದ ವಿಷಯದೆಡೆ ನ್ಯಾಯಾಲಯದ ಗಮನ ಸೆಳೆದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ರಮೇಶ್ ಜಾರಕಿಹೊಳಿ ಅವರ ಪರವಾಗಿ ಕಾಲಾವಕಾಶ ಕೇಳಿದ ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಎಸ್‍ಐಟಿ ಪರ ನ್ಯಾಯವಾದಿಗಳು ರಮೇಶ್ ಜಾರಕಿಹೊಳಿ ಪರವಲ್ಲ ಎಂದು ಪ್ರಸನ್ನಕುಮಾರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ರಚಿತವಾದ ವಿಶೇಷ ಪೀಠಕ್ಕೆ ಈ ಪ್ರಕರಣವನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ರು.

ಸಂತ್ರಸ್ತೆ ಪರ ವಕೀಲ ಸಂಕೇತ ಏಣಗಿ ಮನವಿ ಪುರಸ್ಕರಿಸಿ, ಪ್ರಕರಣವನ್ನು ವಿಶೇಷ ಪೀಠಕ್ಕೆ ವರ್ಗಾವಣೆ ಮಾಡಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠ, ಪ್ರಕರಣ ವಿಚಾರಣೆಯನ್ನು ಇದೇ ತಿಂಗಳು 23ನೇ ದಿನಾಂಕದಂದು ನಿಗದಿ ಮಾಡಿ ವಿಚಾರಣೆ ಮುಂದೂಡಿದರು.

ಏಕಸದಸ್ಯ ಪೀಠದಲ್ಲಿ ವಿಚಾರಣೆ ಮುಗಿದ ನಂತರ ಧಿಡೀರ್ ಆಗಿ ರಮೇಶ್ ಜಾರಕಿಹೊಳಿ ಕುಟುಂಬ ನೋಟಿಸ್ ಸ್ವೀಕರಿಸಿದೆ. ಜೂನ್ 23ಕ್ಕೆ ಸಂತ್ರಸ್ತೆಯ ಮದ್ಯಂತರ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯಪೀಠದಲ್ಲಿ ನಡೆಯಲಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಸಿಕ್ಕಿಲ್ಲ ಮುಕ್ತಿ

The post ಹೈಕೋರ್ಟ್ ನೋಟಿಸ್ ಪಡೆಯದ ರಮೇಶ್ ಜಾರಕಿಹೊಳಿ – ವಿಚಾರಣೆ ಬಳಿಕ ನೋಟಿಸ್ ರಿಸೀವ್ appeared first on Public TV.

Source: publictv.in

Source link

ಶಿವಣ್ಣ ಫ್ಯಾನ್ಸ್​ಗೆ ಇಲ್ಲಿದೆ ಸೂಪರ್​​ ಸುದ್ದಿ​; ಭಜರಂಗಿ-2 ರಿಲೀಸ್​​​ ಯಾವಾಗ ಗೊತ್ತಾ?

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಭಜರಂಗಿ-2. ಲಾಕ್ ಡೌನ್ ಆಗದೆ ಇದ್ದಿದ್ರೇ ಇಷ್ಟೊತ್ತಿಗಾಗಲೇ ಎರಡನೇ ಭಜರಂಗಿ ಸಿನಿಮಾ ಪ್ರೇಕ್ಷಕರ ಮನೆ-ಮನ ತಲುಪಿ ಆಗಿರುತ್ತಿತ್ತು. ಆದ್ರೆ ಲಾಕ್ ಡೌನ್ ಆದ ಕಾರಣ ಭಜರಂಗಿ ಎಡಿಟಿಂಗ್ ಟೇಬಲ್​​ನಲ್ಲೆ ಬೆಚ್ಚಗೆ ಕುಳಿತು ಬಿಟ್ಟಿದೆ.​

ಹಾಗಾದ್ರೆ ಶಿವಣ್ಣನ ನಿರೀಕ್ಷಿತ ಭಜರಂಗಿ-2 ಸಿನಿಮಾದ ಕೆಲಸ ಕಾರ್ಯಗಳು ಎಷ್ಟರ ಮಟ್ಟಿಗೆ ಬಾಕಿ ಇವೆ ಅನ್ನೋದನ್ನ ಕ್ಲಿಯರ್ ಕಟ್​​ಆಗಿ ಹೇಳ್ತಿವಿ ಕೇಳಿ.

ಭಜರಂಗಿ-2 ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಆದ್ರೆ ಗಾಂಧಿನಗರದಲ್ಲಿ ಇನ್ನು 40 ಪರ್ಸೆಂಟ್ ಬಾಕಿ ಇದೆ ಅನ್ನೋ ಟಾಕ್ ಕೇಳಿಬಂದಿತ್ತು. ಆದ್ರೆ ಈ ಬಗ್ಗೆ ನಿರ್ದೇಶಕ ಎ.ಹರ್ಷ ನ್ಯೂಸ್ ಫಸ್ಟ್​ಗೆ ಮಾಹಿತಿ ಕೊಟ್ಟಿದ್ದು ಭಜರಂಗಿ 2 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಪೊಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದ್ದು 40 ಪರ್ಸೆಂಟ್ ಕೆಲಸ ಬಾಕಿ ಇದೆ. ಮ್ಯಾಜಿಕಲ್​ ಕಂಪೋಸರ್​​ ಅರ್ಜುನ್ ಜನ್ಯ ಸಾರಥ್ಯದಲ್ಲಿ ಡಿಟಿಎಸ್, ರಿರೆಕಾರ್ಡಿಂಗ್ ನಡೆಯುತ್ತಿದೆ.

ಹಾಗಾದ್ರೆ ಯಾವಾಗ ಎರಡನೇ ಭಜರಂಗಿಯ ದರ್ಶನ ಅನ್ನೋ ಪ್ರಶ್ನೆಗೆ ಉತ್ತರ ಆಗಸ್ಟ್ ತಿಂಗಳು. ಶೇಖಡ 100 ಪರಸೆಂಟ್​​ ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಆಗಸ್ಟ್ ತಿಂಗಳನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹನುಮ ಭಕ್ತ ನಿರ್ದೇಶಕ ಎ.ಹರ್ಷ ಮಾಹಿತಿ ಕೊಟ್ಟಿದ್ದಾರೆ. ಶಿವಣ್ಣ, ಭಾವನ, ಶೃತಿ, ಲೋಕಿ ಮುಂತಾದ ಪ್ರತಿಭವಂತ ಕಲಾವಿದರುಳ್ಳ ಭಜರಂಗಿ-2 ಟೀಸರ್​​ ಈಗಾಗಲೇ ನೋಡುಗರನ್ನ ಇಂಪ್ರೇಸ್ ಮಾಡಿದೆ. ಇನೇನಿದ್ರು ಸಿನಿಮಾ ರಿಲೀಸ್ ಆಗಬೇಕು ಜನ-ಮನ ನೋಡಿ ಮೆಚ್ಚಿಕೊಳ್ಳೊದೊಂದೆ ಬಾಕಿ.

The post ಶಿವಣ್ಣ ಫ್ಯಾನ್ಸ್​ಗೆ ಇಲ್ಲಿದೆ ಸೂಪರ್​​ ಸುದ್ದಿ​; ಭಜರಂಗಿ-2 ರಿಲೀಸ್​​​ ಯಾವಾಗ ಗೊತ್ತಾ? appeared first on News First Kannada.

Source: newsfirstlive.com

Source link