-
ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯಾದ್ಯಂತ ಹೆದ್ದಾರಿ ತಡೆದು ಪ್ರತಿಭಟನೆಗೆ ನಿಂತ ರೈತರು
ಕೃಷಿ ಕಾಯ್ದೆಯನ್ನ ಅಧಿಕೃತವಾಗಿ ಹಿಂಪಡೆಯೋದ್ರಾ ಜೊತೆಗೆ ಬೆಂಬಲ ಬೆಲೆ ಖಾತ್ರಿಪಡಿಸುವಂತೆ ಆಗ್ರಹಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ದೆಹಲಿ ಪ್ರತಿಭಟನೆ ಬೆಂಬಲಿಸಿ, ರಾಜ್ಯದಲ್ಲೂ ರೈತರು ವಿವಿಧ ಬೇಡಿಕೆಗಳಿಗಾಗಿ ರಾಜ್ಯ ಹೆದ್ದಾರಿ ಬಂದ್ಗೆ ಕರೆ ಕೊಟ್ಟಿದ್ದಾರೆ. ರಾಮನಗರ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಚಳುವಳಿಗೆ ವರ್ಷ ತುಂಬಿದ ಹಿನ್ನೆಲೆ ರಾಮನಗರದ ಎಪಿಎಂಸಿ ವೃತ್ತದ ಬಳಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಬೆಂಗಳೂರು-ಮೈಸೂರು […]
-
Bengaluru Earthquake: ಬೆಂಗಳೂರಿನಲ್ಲಿ ಭೂಕಂಪದ ಅನುಭವ; ಎರಡೆರಡು ಬಾರಿ ಕಂಪಿಸಿದ ಭೂಮಿ! | Breaking News 2 times earthquake happened in Bengaluru today on November 26th here is details
ಬೆಂಗಳೂರು: ಬೆಂಗಳೂರಿನ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ, ಮೈಸೂರು ರಸ್ತೆಯ ಕೆಲ ಏರಿಯಾದಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಎರಡು ಸಲ ಭೂಮಿ ಕಂಪಿಸಿದ ಅನುಭವವಾಗಿದೆ. ಮೊದಲ ಸಲ ಲಘುವಾಗಿ ಕಂಪಿಸಿದ ಅನುಭವವಾಗಿದ್ದು, ನಂತರ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಈ ಸುದ್ದಿ ಇದೀಗ ಬ್ರೇಕ್ ಆಗಿದ್ದು, ಹೆಚ್ಚಿನ ಮಾಹಿತಿಗೆ ಪುಟವನ್ನು ರೀಫ್ರೆಶ್ ಮಾಡಿ. ಇದನ್ನೂ ಓದಿ: Earthquake: ಭಾರತ- ಮ್ಯಾನ್ಮಾರ್ ಗಡಿಯಲ್ಲಿ 6 ತೀವ್ರತೆಯ ಭೂಕಂಪ; ಕೋಲ್ಕತ್ತಾ, ಗುವಾಹಟಿಯಲ್ಲೂ […]
-
ಪ್ರೊ| ಕೆ.ಎಸ್.ನಾರಾಯಣಾಚಾರ್ಯ ನಿಧನ -ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರಿಂದ ಸಂತಾಪ
ಬೆಂಗಳೂರು: ಪ್ರಕಾಂಡ ಪಂಡಿತರೂ.. ಖ್ಯಾತ ವಿದ್ವಾಂಸರೂ ಹಾಗೂ ಲೇಖಕರೂ ಆಗಿದ್ದಂಥ ಪ್ರೊಫೆಸರ್ ನಾರಾಯಣಾಚಾರ್ಯ ಅವರು ನಿಧನರಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಖ್ಯಾತ ಚಿಂತಕರು, ಸುಪ್ರಸಿದ್ಧ ಲೇಖಕರು, ಮೇರು ವಿದ್ವಾಂಸರಾಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದು, ಅತೀವ ದುಃಖ ತಂದಿದೆ. ಅವರು ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದರು. ಅವರ ನಿಧನವು ಕನ್ನಡ ಸಾರಸ್ವತ ಹಾಗೂ ವಿದ್ವತ್ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಕೃತಿಗಳ […]
-
ಪರ್ಸೆಂಟೇಜ್ ಯಾವ ಕಾಲದಲ್ಲಿ ಆಗಿದೆ ಮಾಹಿತಿ ಇಲ್ಲ, ಕಾಂಗ್ರೆಸ್ ಅವಧಿಯ ಟೆಂಡರೂ ತನಿಖೆ ಮಾಡಿಸ್ತೇವೆ: ಬೊಮ್ಮಾಯಿ ಘೋಷಣೆ | Percentage allegations by contractor will investigate congress administration also says cm basavaraj bommai in davanagere
ಸಿದ್ದರಾಮಯ್ಯ- ಬಸವರಾಜ ಬೊಮ್ಮಾಯಿ ದಾವಣಗೆರೆ: ಗುತ್ತಿಗೆದಾರರ ಪತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ರಾಜ್ಯಪಾಲರಿಗೆ ನೀಡಿರುವ ದೂರು ಅತ್ಯಂತ ಹಾಸ್ಯಾಸ್ಪದ ಮನವಿಯಾಗಿದೆ ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಕಾಂಟ್ರಕ್ಟರುಗಳಿಗೆ ಯಾವ ಅವಧಿಯಲ್ಲಿ ಪರ್ಸೆಂಟೇಜ್ ಅನುಭವ ಆಗಿದೆ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿಲ್ಲ. ಪರ್ಸೆಂಟ್ ಜನಕರಿದ್ದರೇ ಅದು ಕಾಂಗ್ರೆಸ್ ನವರು. ಆ ಪರ್ಸೆಂಟ್ ಜಾಸ್ತಿಯಾಗಿದ್ದರೇ ಅದು ಕಾಂಗ್ರೆಸ್ ಕಾಲದಲ್ಲಿಯೇ. ಇತ್ತೀಚೆಗೆ ಪರ್ಸೆಂಟೇಜ್ ಬಗ್ಗೆ ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು ಎಲ್ಲರಿಗೂ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದ್ದಾರೆ. ಗುತ್ತಿಗೆದಾರರು […]
-
ಕಾನ್ಪುರ ಟೆಸ್ಟ್ ; ಮೊದಲ ಇನ್ನಿಂಗ್ಸ್ನಲ್ಲಿ ಭಾರತ 345 ರನ್ಗಳಿಗೆ ಆಲೌಟ್
ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ 345 ರನ್ಗಳಿಗೆ ಆಲ್ಔಟ್ ಆಗಿದೆ. 258 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು 2ನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, ಸತತ ವಿಕೆಟ್ ಕಳೆದುಕೊಂಡು ಕುಸಿತ ಕಂಡಿತು. ನಿನ್ನೆ ಶತಕದ ಜೊತೆಯಾಟವಾಡಿ ಕ್ರೀಸ್ ಕಾಯ್ದುಕೊಂಡಿದ್ದ ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಇಂದು ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಅಜೇಯ 50 ರನ್ಗಳೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಜಡ್ಡು, 2ನೇ […]
-
Constitution Day 2021: ಸಂವಿಧಾನ ದಿನದ ವಿಶೇಷ ಹಾಗೂ ಆಚರಣೆಯ ಉದ್ದೇಶವೇನು?; ಇಲ್ಲಿದೆ ಮಾಹಿತಿ | Here is details about Constitution Day and Why Do We Celebrate constitution day on November 26
ಭಾರತ ಸಂವಿಧಾನ ಭಾರತವು ಇಂದು ಅಂದರೆ ಶುಕ್ರವಾರ (ನವೆಂಬರ್ 26) ಸಂವಿಧಾನ ದಿನವನ್ನು (Constitution day) ಆಚರಿಸುತ್ತಿದೆ. ಸಂವಿಧಾನದ ದಿನದ ಮಹತ್ವ, ಆಚರಣೆಯ ಹಿನ್ನೆಲೆ ಮತ್ತು ಉದ್ದೇಶ, ಇಂದು ದೇಶದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ನವೆಂಬರ್ 26, 1949 ರಂದು ಭಾರತದ ಸಂವಿಧಾನ ಸಭೆಯು ಔಪಚಾರಿಕವಾಗಿ ಅತ್ಯುನ್ನತ ಕಾನೂನು ದಾಖಲೆಯಾದ ಸಂವಿಧಾನವನ್ನು ಅಂಗೀಕರಿಸಿತು. ಆದ್ದರಿಂದಲೇ ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನದ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದಿದ್ದು, ಜನವರಿ […]
-
ಪ್ರಕಾಂಡ ವಿದ್ವಾಂಸ, ಲೇಖಕ ಪ್ರೊ. ಕೆ.ಎಸ್ ನಾರಾಯಣಾಚಾರ್ಯ ಇನ್ನಿಲ್ಲ
ಬೆಂಗಳೂರು: ಪ್ರಕಾಂಡ ಪಂಡಿತರೂ.. ಖ್ಯಾತ ವಿದ್ವಾಂಸರೂ ಹಾಗೂ ಲೇಖಕರೂ ಆಗಿದ್ದಂಥ ಪ್ರೊಫೆಸರ್ ನಾರಾಯಣಾಚಾರ್ಯ ಅವರು ನಿಧನರಾಗಿದ್ದಾರೆ. ವಯೋಸಹಜವಾಗಿ ಕೆಲ ಸಮಯ ಅನಾರೋಗ್ಯಕ್ಕೆ ಒಳಗಾಗಿದ್ದ ಪ್ರೊ. ನಾರಾಯಣಾಚಾರ್ಯ ತಮ್ಮ 88ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. ನಿನ್ನೆ ತಡರಾತ್ರಿ ಸುಮಾರು 2 ಗಂಟೆಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಖ್ಯಾತ ಅಂಕಣಕಾರರೂ ಆಗಿದ್ದ ಪ್ರೊ.ನಾರಾಯಣಾಚಾರ್ಯ, 1933ರಲ್ಲಿ ಕನಕಪುರದ ವೈದಿಕ ಶ್ರೀವೈಷ್ಣವ ಕುಟಂಬದಲ್ಲಿ ಜನಿಸಿದ್ದರು. ಖ್ಯಾತ ಕವಿ, ಚಿಂತಕ ದ.ರಾ ಬೇಂದ್ರೆಯವರಿಂದ ಪ್ರೇರೇಪಿತರಾಗಿದ್ದ ಶ್ರೀಯುತರು, ತಮ್ಮ ಪ್ರಖರ […]
-
ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾದ್ಯಂತ ಹೆದ್ದಾರಿ ತಡೆದು ರೈತರ ಧರಣಿ, ಎಲ್ಲೆಲ್ಲಿ ಹೆದ್ದಾರಿ ಬಂದ್? ಇಲ್ಲಿದೆ ಮಾಹಿತಿ | Farmers stage protest by closing highways over various demands in Karnataka
ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾದ್ಯಂತ ಹೆದ್ದಾರಿ ತಡೆದು ರೈತ ಧರಣಿ ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯಾದ್ಯಂತ ಹೆದ್ದಾರಿ ತಡೆದು ರೈತ ಸಂಘಟನೆಗಳು ಧರಣಿ ನಡೆಸುತ್ತಿವೆ. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು, ರಾಮನಗರ ಹಾಗೂ ಮಂಡ್ಯ, ಹಾವೇರಿ, ಬೆಳಗಾವಿಯಲ್ಲಿ ಹೆದ್ದಾರಿ ತಡೆದು ಅಧಿವೇಶನದಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಹಸುಗಳನ್ನು ನಿಲ್ಲಿಸಿ ರಸ್ತೆ ತಡೆವಿವಿಧ ಬೇಡಿಕೆಗಳ ಈಡೇರಿಕೆಗೆ […]
-
ಧಾರವಾಡ ಕಾಲೇಜಿನಲ್ಲಿ ಕೊರೊನಾ ಸ್ಫೋಟ -182 ವಿದ್ಯಾರ್ಥಿಗಳಿಗೆ ಪಾಸಿಟವ್
ಧಾರವಾಡ: ಮಹಾಮಾರಿ ಕೊರೊನಾ ಸೋಂಕಿನಿಂದ ರಿಲೀಫ್ ಸಿಕ್ಕಿತು ಎಂದು ಕೊಳ್ಳುತ್ತಿರುವಾಗಲೇ ಧಾರವಾಡದ ಎಸ್.ಡಿ.ಎಂ ಕಾಲೇಜಿನಲ್ಲಿ ಕೋವಿಡ್ 19 ಸೋಂಕು ಸ್ಫೋಟಗೊಂಡಿದೆ. ಕಾಲೇಜಿನ 182 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಕಳೆದ ವಾರವಷ್ಟೇ ಕಾಲೇಜಿನಲ್ಲಿ ಗೆಟ್ ಟು ಗ್ಯಾದರ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದ್ದು, ಕಾರ್ಯಕ್ರಮದಲ್ಲಿ ಹಲವು ಮೆಡಿಕಲ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ಬಹಳಷ್ಟು ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ 669 ವಿದ್ಯಾರ್ಥಿಗಳಲ್ಲಿ ಸ್ವಾಬ್ ಟೆಸ್ಟ್ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು. […]
-
ಅಕಾಲಿಕ ಮಳೆಯಿಂದ ರೈತರು ಕಂಗಾಲು; ಬೆಳೆ ಹಾನಿಯಾದ 72 ಗಂಟೆಯೊಳಗೆ ಅರ್ಜಿ ಕೊಡಲು ಹೇಳಿದ ವಿಮೆ ಕಂಪನಿಗಳು | Insurance companies claim to apply within 72 hours of crop damage to farmers in dharwad
ಮಳೆ ಹಾನಿ (ಸಂಗ್ರಹ ಚಿತ್ರ) ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಮತ್ತೆ ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಈಗಾಗಲೇ ರೈತ ವರ್ಗ (Farmers) ನಲುಗಿದೆ. ಅಪಾರ ಪ್ರಮಾಣದ ಬೆಳೆ ನಾಶದಿಂದ(Crop loss) ಒಂದೆಡೆ ರೈತರು ಕಣ್ಣೀರು ಸುರಿಸ್ತಾ ಇದ್ದರೆ. ಇತ್ತ ರೈತರ ಕಣ್ಣೀರು ಒರೆಸಬೇಕಾದ ರಾಜ್ಯ ಸರ್ಕಾರ ಹಾಗೂ ಬೆಳೆ ವಿಮೆ ಕಂಪೆನಿಗಳು ರೈತರ ಜೊತೆ ಚೆಲ್ಲಾಟವಾಡುತ್ತಿವೆ. ಬೆಳೆ ವಿಮೆ ಬೇಕಾದರೆ ಹಾನಿಯಾದ […]
-
India vs New Zealand 1st Test: ಅಯ್ಯರ್ ಶತಕದ ಫಲ: ಬೋಜನ ವಿರಾಮದ ವೇಳೆಗೆ ಭಾರತ 339-8 | India vs New Zealand 1st Test Day 2 Shreyas Iyer Century help Team India reach 339 8 at lunch break
Shreyas Iyer Century IND vs NZ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ (India vs New Zealand 1st Test) ಉತ್ತಮ ಮೊತ್ತ ಕಲೆಹಾಕಿದೆ. ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಶತಕದ ನೆರವಿನಿಂದ ಟೀಮ್ ಇಂಡಿಯಾ ಸದ್ಯ ಬೋಜನ ವಿರಾಮದ ಹೊತ್ತಿಗೆ 8 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ. ಶ್ರೇಯಸ್ ಅಯ್ಯರ್ (Shreyas Iyer) ಶತಕ ಸಿಡಿಸಿ ಔಟ್ ಆಗಿದ್ದು ಸದ್ಯ ಕ್ರೀಸ್ನಲ್ಲಿ ರವಿಂದ್ರನ್ ಅಶ್ವಿನ್ […]
-
ಅಗರಬತ್ತಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ- ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿ
ರಾಯಚೂರು: ಮಾನ್ವಿ ಪಟ್ಟಣದ ಶ್ರೀ ಓಂ ಸಾಯಿ ಅಗರಬತ್ತಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಪಟ್ಟಣದ ಪಂಪ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಈ ಅವಘಡ ನಡೆದಿದ್ದು ಕಾಂಪ್ಲೆಕ್ಸ್‌ನಲ್ಲಿದ್ದ ಶ್ರೀ ಓಂ ಸಾಯಿ ಅಗರಬತ್ತಿ ಅಂಗಡಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವುದರೊಳಗೆ ಎಲ್ಲೆಡೆ ಬೆಂಕಿ ಹರಡಿದ್ದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. News First Live Kannada
-
ಪರಿಷತ್ ಸಭಾಪತಿ ಶ್ವಾನ ಪ್ರೇಮ; ಶ್ವಾನ ದಳದ ಜೊತೆ ಸಮಯ ಕಳೆದ ಬಸವರಾಜ ಹೊರಟ್ಟಿ | Legislative Council Chairman Basavaraj horatti shows love for police dogs in bengaluru
ಆತ್ಮೀಯತೆ ತೋರಿದ ಬಸವರಾಜ ಹೊರಟ್ಟಿ ಅವರಿಗೆ ಶ್ವಾನದಳದ ತಂಡ ಗೌರವ ಸಲ್ಲಿಸಿದೆ ಬೆಂಗಳೂರು: ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಬಳಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶ್ವಾನ ಪ್ರೇಮ ತೋರಿದ್ದಾರೆ. ಸಂವಿಧಾನ ದಿವಸದ ಅಂಗವಾಗಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಸವರಾಜ ಹೊರಟ್ಟಿ ಆಗಮಿಸಿದ್ದು, ಈ ವೇಳೆ ಶ್ವಾನ ದಳದ ಜೊತೆ ಬಸವರಾಜ ಹೊರಟ್ಟಿ ಸಮಯ ಕಳೆದಿದ್ದಾರೆ. ಪೊಲೀಸ್ ಇಲಾಖೆ ಶ್ವಾನ ದಳದ ಶ್ವಾನಗಳನ್ನು ನೋಡಿ ಹತ್ತಿರ ತೆರಳಿದ ಹೊರಟ್ಟಿಗೆ ತರಬೇತಿ ಪಡೆದ ಶ್ವಾನಗಳು ಸೆಲ್ಯೂಟ್ ಮಾಡಿದ್ದು, ಅವರ […]
-
ವಿಚ್ಛೇದನ ಬೆನ್ನಲ್ಲೇ ಹಾಲಿವುಡ್ಗೆ ಹಾರಿದ ಸಮಂತಾ- ಶಾಕಿಂಗ್ ಬೋಲ್ಡ್ ಅವತಾರ..!
ಟಾಲಿವುಡ್ ನಟ ಅಕ್ಕಿನೇನಿ ನಾಗ ಚೈನತ್ಯರೊಂದಿಗೆ ವಿಚ್ಛೇದನ ಪಡೆದುಕೊಂಡ ಬಳಿಕ ನಟಿ ಸಮಂತಾ ಸಂಪೂರ್ಣವಾಗಿ ತಮ್ಮ ದೃಷ್ಟಿಯನ್ನು ಸಿನಿಮಾ ಕಡೆ ಹರಿಸಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ಓಕೆ ಎಂದಿರೋ ಸಮಂತಾ, ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ರ ಪುಷ್ಪ ಸಿನಿಮಾದ ಹಾಡಿನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿದೆ. ಈ ನಡುವೆ ಹಾಲಿವುಡ್ ಸಿನಿಮಾಗೆ ಓಕೆ ಹೇಳಿರುವುದಾಗಿ ಸಮಂತಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹಾಲಿವುಡ್ ಸಿನಿಮಾ ನಿರ್ದೇಶಕ ಫಿಲಿಪ್ ಜಾನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ‘ದಿ ಅರೇಂಜ್ […]
-
ಪೈಪ್ ನೋಟ್ ಶಾಂತನಗೌಡ ಮನೆಯಲ್ಲಿ ಸಿಕ್ತು ದುಬೈನಿಂದ ಚಿನ್ನದ ಗಟ್ಟಿ ಖರೀದಿಸಿದ ರಶೀದಿ, ಮತ್ತಷ್ಟು ಬಯಲಾಗಿದೆ ಭ್ರಷ್ಟ ಕುಬೇರನ ವಿವರ | Dubai gold purchase receipt found in culprit shantha gowda residence in bengaluru
ಕಲಬುರಗಿ ಜಿಲ್ಲೆ ಜೇವರ್ಗಿ PWD ಕಚೇರಿ ಜೆಇ ಶಾಂತಗೌಡ ಬಿರಾದರ್ ಕಲಬುರಗಿ: ಕೋಟಿ ಕೋಟಿ ಹಣ ಬಾಚಿ ನುಂಗಿ ನೀರು ಕುಡಿದಿರುವ ಭ್ರಷ್ಟರ ಲೆಕ್ಕವನ್ನ ಎಸಿಬಿ ಇಂಚಿಂಚಾಗಿ ಕೌಂಟಿಂಗ್ ಮಾಡಿದೆ. ಸದ್ಯ ಕಲಬುರಗಿ ಜಿಲ್ಲೆ ಜೇವರ್ಗಿ PWD ಕಚೇರಿ ಜೆಇ ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇಂದು ಮತ್ತಷ್ಟು ಬ್ಯಾಂಕ್ ಖಾತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ದುಬೈನಿಂದ ಚಿನ್ನದ ಗಟ್ಟಿ ಖರೀದಿ ಮಾಡಿ ತಂದಿರುವ ರಶೀದಿ ಕೂಡ ಪತ್ತೆಯಾಗಿದೆ. ಕೋಟಿ […]
-
ಹೊಸ ರೂಪದಲ್ಲಿ ಬರಲು ಸಜ್ಜಾದ ಕೋವಿಡ್
ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ ಅಲರ್ಟ್ ಆದ ಕೇಂದ್ರ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ತಳಿಯ ಕೊರೊನಾ ಬಗ್ಗೆ ಎಚ್ಚರ ವಹಿಸುವಂತೆ ಪತ್ರ ಬರೆದಿದ್ದಾರೆ. ಸದ್ಯ ಸೌತ್ ಆಫ್ರಿಕಾ, ಹಾಂಗ್ ಕಾಂಗ್ ಮತ್ತು ಬೋಟ್ಸಾನ್ವಾ ದೇಶಗಳಲ್ಲಿ ಕೊರೊನಾ B.1.1529 ಹೊಸ ತಳಿ ಪತ್ತೆಯಾಗಿದ್ದು ಭೀತಿ ಹುಟ್ಟಿಸಿದೆ. ಹೀಗಾಗಿ ಈ ದೇಶಗಳಿಂದ ಭಾರತಕ್ಕೆ […]
-
Viral Video: ಸಂಗೀತ ವಾದ್ಯ ನುಡಿಸುತ್ತಾ ಮನಿಕೆ ಮಗೆ ಹಿತೆ ಹಾಡು ಹಾಡಿದ 10 ವರ್ಷದ ಪುಟ್ಟ ಬಾಲಕ; ವಿಡಿಯೊ ನೋಡಿ | 10 years old boy sigs manike mage hithe song with ukulele video goes viral in social media
ಸಂಗೀತ ವಾದ್ಯ ನುಡಿಸುತ್ತಾ ಮನಿಕೆ ಮಗೆ ಹಿತೆ ಹಾಡು ಹೇಳುತ್ತಿರುವ ಬಾಲಕ ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮನಿಕೆ ಮಗೆ ಹಿತೆ ಹಾಡು ಹಲವಾರು ಜನರ ಮನಸ್ಸು ಗೆದ್ದಿದೆ. ಜನರು ಹೆಚ್ಚು ಇಷ್ಟಪಟ್ಟಿದ್ದು ತಾವೂ ಸಹ ಹಾಡನ್ನು ಹಾಡುವ ಮೂಲಕ ವಿಡಿಯೊ ಪೋಸ್ಟ್ ಮಾಡುತ್ತಿದ್ದಾರೆ. ಮನಿಕೆ ಮಗೆ ಹಿತೆ ಹಾಡಿಗೆ (Manike mage hithe song) ಸಕತ್ ಸ್ಟೆಪ್ ಹಾಕುತ್ತಾ ನೃತ್ಯ (Dance) ಮಾಡುವ ವಿಡಿಯೊಗಳನ್ನೂ ಸಹ ಕೆಲವರು ಈ ಹಿಂದೆ […]
-
ದೇಶದಲ್ಲಿ ಉತ್ತಮ ವಾಯುಗುಣಮಟ್ಟದ ನಗರಗಳಲ್ಲಿ ಮಂಜಿನ ನಗರಿ ಮಡಿಕೇರಿಗೆ ಅಗ್ರಸ್ಥಾನ
ಮಡಿಕೇರಿ: ವಿಶ್ವದ ಅತಿ ಮಾಲಿನ್ಯ ನಗರಿಗಳಲ್ಲಿ ರಾಷ್ಟ್ರ ರಾಜ್ಯಧಾನಿ ನಂಬರ ಒನ್ ಸ್ಥಾನದಲ್ಲಿದೆ. ದೇಶದ ಇತರ ನಗರಿಗಳು ಕೂಡ ದೆಹಲಿಯನ್ನೇ ಅನುಕರಿಸುತ್ತಿವೆ. ಇಂತ ಕೆಟ್ಟ ಸುದ್ದಿಯ ಮಧ್ಯೆ ಖುಷಿ ಕೊಡುವಂತಹ ಸುದ್ದಿಯೊಂದಿದೆ. ಅದೇನೆಂದರೆ ನಮ್ಮ ರಾಜ್ಯದ ಮಂಜಿನ ನಗರಿ ಮಡಿಕೇರಿ ದೇಶದಲ್ಲೇ ಅತಿ ಕಡಿಮೆ ವಾಯು ಮಾಲಿನ್ಯವಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಸಿರ ಪ್ರಕೃತಿಯ ತವರು, ಬೆಟ್ಟ ಗುಡ್ಡ ರಮಣೀಯ ವಿಹಂಗಮ ನೋಟದ ತಾಣ ಕೊಡಗು ಜಿಲ್ಲೆ. ಬೆಟ್ಟ ಗುಡ್ಡಗಳ ಹಸಿರನ್ನೇ ಮುಕುಟವಾಗಿಸಿಕೊಂಡಿರೋ ಕೊಡಗು ಪ್ರವಾಸಿಗರ […]
-
26/11 Mumbai Attack: 26/11ಕ್ಕೆ ಮುಂಬೈನಲ್ಲಿ ಏನೇನಾಯ್ತು?; ಇಲ್ಲಿದೆ ಕರಾಳ ಘಟನೆಯ ವಿವರ | Mumbai Terror attack what happened on 26 11 here is pictorial recall
ತಾಜ್ ಹೋಟೆಲ್ ಮೇಲೆ ದಾಳಿಯ ಸಂದರ್ಭದ ದೃಶ್ಯ (Image: Reuters) ಮುಂಬೈ: ನವೆಂಬರ್ 26, 2008- ಭಾರತೀಯರು ಎಂದೂ ಮರೆಯಲಾರದ ಕರಾಳ ದಿನದ ಘಟನೆ ನಡೆದು ಇಂದಿಗೆ 13 ವರ್ಷಗಳಾಗಿವೆ. ಅಂದು ಮುಂಬೈನಲ್ಲಿ ಸರಣಿ ಭಯೋತ್ಪಾದಕ ದಾಳಿಗಳು ನಡೆದವು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಹತ್ತು ಉಗ್ರರು ಮುಂಬೈನಾದ್ಯಂತ ನಾಲ್ಕು ದಿನಗಳ ಕಾಲ 12 ಕಡೆ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳನ್ನು ನಡೆಸಿದರು. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಮಹಲ್ […]
-
ದೇವಿಗೆ ಕೈಮುಗಿದು ನಿಂತಿದ್ದವ ಅರ್ಚಕ ಹೊರಹೋದ ಬಳಿಕ ಮಾಡಿದ್ದೇನು ಗೊತ್ತಾ?
ಮಂಡ್ಯ: ಭಕ್ತರ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ದೇವಿಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಮದ್ದೂರಿನ ಹೊಳೆ ಬೀದಿಯ ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇಗುಲದಲ್ಲಿ ನಡೆದಿದೆ. ಅರ್ಚಕರು ದೇವಾಲಯದಿಂದ ಹೊರದೋಗುತ್ತಿದ್ದಂತೆ ಕೈಚಳಕ ತೋರಿದ ಕಳ್ಳ 6 ಗ್ರಾಂ ಚಿನ್ನದ ತಾಳಿಯನ್ನು ಕದ್ದು ಪರಾರಿಯಾಗಿದ್ದಾನೆ. ಖದೀಮ ದೇವಿಗೆ ಕೈಮುಗಿದು ಬಳಿಕ ಗರ್ಭ ಗುಡಿಗೆ ನುಗ್ಗಿ ತಾಳಿ ಕದ್ದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಘಟನೆ ಸಂಬಂಧಿಸಿ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. […]
-
Shreyas Iyer: ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದ ಶ್ರೇಯಸ್ ಅಯ್ಯರ್ | Shreyas Iyer slammed a hundred on his Test debut for India and joins elite list
Shreyas Iyer century ಶ್ರೇಯಸ್ಯ ಅಯ್ಯರ್ (Shreyas Iyer) ತಮ್ಮ ಟೆಸ್ಟ್ ಕ್ರಿಕೆಟ್ ಕೆರಿಯರ್ ಅನ್ನು ಅದ್ಭುತವಾಗಿ ಆರಂಭಸಿದ್ದಾರೆ. ಕಾನ್ಪುರದ (Kanpur Test) ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ (India vs New Zealand 1st Test) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಶತಕ ಸಿಡಿಸಿ ವಿಶೇಷ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಜಾಗದಲ್ಲಿ ಸ್ಥಾನ ಪಡೆದಿರುವ ಅಯ್ಯರ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡಿಸಿದ್ದಾರೆ. […]
-
Constitution Day: ಸಂಸತ್ನಲ್ಲಿ ಸಂವಿಧಾನ ದಿನಾಚರಣೆ; ಪ್ರಧಾನಿ ಮೋದಿ ಭಾಷಣ ಬಹಿಷ್ಕಾರಕ್ಕೆ ವಿಪಕ್ಷಗಳ ನಿರ್ಧಾರ | Constitution Day: Congress TMC in Opposition boycott of Constitution Day event in Parliament PM Narendra Modi Speech
ನವದೆಹಲಿ: ಸಂಸತ್ ಭವನದಲ್ಲಿ ಇಂದು ಸಂವಿಧಾನ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಭಾಷಣವನ್ನು ಬಹಿಷ್ಕರಿಸಲು 14 ವಿಪಕ್ಷಗಳು ನಿರ್ಧಾರ ಮಾಡಿವೆ. ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿ ಭಾಷಣ ಮಾಡಲಿದ್ದು, ಕಾಂಗ್ರೆಸ್, ಟಿಎಂಸಿ, ಶಿವಸೇನೆ, ಎನ್ಸಿಪಿ, ಎಸ್ಪಿ, ಡಿಎಂಕೆ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಸಂಸತ್ ಭವನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ […]
-
ಆಶಿಕಾ ರಂಗನಾಥ್ ಮುದ್ದಾಗಿ ಕಾಣೋಕೆ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಕಾರಣ; ಏನಿದು ಸಮಾಚಾರ? | Raymo actress Ashika Ranganath talks about director Pawan Wadeyar wife Apeksha Purohit
‘ರೇಮೋ’ ಸಿನಿಮಾದಲ್ಲಿ (Raymo Movie) ಮೋಹನಾ ಎಂಬ ಪಾತ್ರವನ್ನು ಆಶಿಕಾ ರಂಗನಾಥ್ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಇಶಾನ್ ಹೀರೋ. ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ನೋಡಿದ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿರುವುದು ಆಶಿಕಾ ರಂಗನಾಥ್ (Ashika Ranganath) ಅವರಿಗೆ ಖುಷಿ ನೀಡಿದೆ. ಚಿತ್ರದಲ್ಲಿ ಅವರು ಸಖತ್ ಮುದ್ದಾಗಿ ಕಾಣುತ್ತಿದ್ದಾರೆ. ಅದಕ್ಕೆ ನಿರ್ದೇಶಕ ಪವನ್ ಒಡೆಯರ್ (Pawan Wadeyar) ಅವರ ಪತ್ನಿ ಅಪೇಕ್ಷಾ ಪುರೋಹಿತ್ (Apeksha Purohit) ಕಾರಣ! […]
-
ಪಾದಾರ್ಪಣೆ ಪಂದ್ಯದಲ್ಲೇ ದಾಖಲೆಯ ಶತಕದ ‘ಶ್ರೇಯಸ್ಸು’ -ದಿಗ್ಗಜರ ಪಟ್ಟಿಗೆ ಸೇರ್ಪಡೆ
ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ದಾಖಲೆಯ ಟೆಸ್ಟ್ ಶತಕ ಸಿಡಿಸಿದ್ದಾರೆ. ಪದಾರ್ಪಣೆ ಮಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 16ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 157 ಎಸೆತಗಳನ್ನ ಎದುರಿಸಿ 100ರ ಗಡಿ ದಾಟಿದ ಅಯ್ಯರ್ ಅವರ ಈ ಇನ್ನಿಂಗ್ಸ್ನಲ್ಲಿ 12 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದಾರೆ. 💯 A debut to remember for @ShreyasIyer15 as he brings up his maiden Test century 👏👏 […]
-
ಪೈಪ್ ಮಾಸ್ಟರ್ ಶಾಂತಗೌಡ ಬಿರಾದರ್ನ 14 ಎಕರೆ ಫಾರ್ಮ್ಹೌಸ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ | ACB Raid culprit shanthagouda biradar farmhouse inside video
ಕಲಬುರಗಿ: ಲೋಕೋಪಯೋಗಿ ಜೆಇ ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ನಡೆಸಿದ ಅಕ್ರಮ ಬೇಟೆಯಲ್ಲಿ ಸಾಕಷ್ಟು ಭ್ರಷ್ಟ ಅಧಿಕಾರಿಗಳ ಅಸಲಿಯತ್ತು ಬಯಲಾಗಿದೆ. ಕಲಬುರಗಿಯ ಹಂಗರಗಾ ಗ್ರಾಮದಲ್ಲಿರುವ ಶಾಂತಗೌಡ ಬಿರಾದರ್ ಅವರ ಫಾರ್ಮ್ಹೌಸ್ ಕೂಡ ಸಾಕಷ್ಟು ಅಕ್ರಮಗಳನ್ನೇ ಹೊತ್ತು ನಿಂತಿದೆ. ಈ ಬಗ್ಗೆ ನಮ್ಮ ಟಿವಿ9 ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ. ಎಸಿಬಿ ದಾಳಿ ವೇಳೆ ಶಾಂತಗೌಡ ಪೈಪ್ನಲ್ಲಿ ಬಚ್ಚಿಟ್ಟಿದ್ದ ಹಣವೂ ಪತ್ತೆಯಾಗಿದೆ. ಶಾಂತಗೌಡ ಮತ್ತು ಮಗ ಎಂಥಾ ಖತರ್ನಾಕ್‌ಗಳು ಅಂದ್ರೆ, ಎಸಿಬಿ ಅಧಿಕಾರಿಗಳು ಬರ್ತಿದ್ದಂತೆ […]
-
65 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಫಾಸ್ಟ್ ಬೌಲರ್ ಕ್ಯಾಪ್ಟನ್
ಆ್ಯಷಸ್ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ನೂತನ ನಾಯಕ ಮತ್ತು ಉಪ ನಾಯಕನನ್ನ ನೇಮಿಸಿದೆ. ಟೆಸ್ಟ್ ತಂಡದ ನೂತನ ನಾಯಕನಾಗಿ ವೇಗಿ ಪ್ಯಾಟ್ ಕಮಿನ್ಸ್ ನೇಮಕಗೊಂಡಿದ್ದರೆ, ಉಪನಾಯಕನಾಗಿ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದಾರೆ. ಹಾಗೇ 47ನೇ ಟೆಸ್ಟ್ ನಾಯಕನಾಗಿ ಆಯ್ಕೆಯಾಗುವ ಮೂಲಕ ಕಮಿನ್ಸ್ ಸಾಧನೆಯೊಂದನ್ನೂ ಮಾಡಿದ್ದಾರೆ. 65 ವರ್ಷಗಳ ನಂತರ ವೇಗಿಯೊಬ್ಬ ಟೆಸ್ಟ್ ತಂಡವನ್ನ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದು, ವೇಗಿ ರಿಚಿ ಬೆನಾಡ್ ನಂತರ ಟೆಸ್ಟ್ ಮುನ್ನಡೆಸಿದ ಮೊದಲ ಬೌಲರ್ ಆಗಿದ್ದಾರೆ. ಲೈಂಗಿಕ ಹಗರಣದ ನಂತರ ಟಿಮ್ ಪೈನ್ […]
-
ಗಾಜನೂರಿನ ಎಲ್ಲೆಡೆ ಹರಡಿದೆ ಅಪ್ಪು ನೆನಪಿನ ಕಂಪು; ಪುನೀತ್ ಬಾಲ್ಯದ ಗೆಳೆಯ ಕುಳ್ಳ ನಾಗರಾಜ್ ತೆರೆದಿಟ್ಟ ಅಪ್ಪು ಕಥೆ | Puneeth Rajkumar childhood friend Kulla Nagaraj special interview with tv9 he tells about Appu favorite places and things
ಪುನೀತ್ ರಾಜ್ಕುಮಾರ್ ಗಾಜನೂರು: ಪುನೀತ್ಗೆ ಪುನೀತ್ ಅವರೇ ಸಾಟಿ. ಅಪ್ಪು ನಮ್ಮನ್ನು ಅಗಲಿದರು ಅವರ ನೆನಪು ಮಾತ್ರ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಒಂದಲ್ಲ ಒಂದು ವಿಚಾರ ಅಗಲಿದ ಪುನೀತ್ ನೆನಪನ್ನು ತರಿಸುತ್ತದೆ. ಅದರಲ್ಲೂ ತಮಿಳುನಾಡಿನ ತಾಳವಾಡಿಯ ದೊಡ್ಡ ಗಾಜನೂರು ಗ್ರಾಮದ (Gajanuru) ಪ್ರತಿ ವಸ್ತುಗಳು, ಸ್ಥಳಗಳು ಅಪ್ಪುವನ್ನು ನೆನಪಿಸುತ್ತವೆ. ಅಲ್ಲದೇ ಪ್ರತಿಯೊಂದೂ ಅಪ್ಪುವಿನ ದಾರಿಯನ್ನು ಕಾಯುವಂತೆ ಭಾಸವಾಗುತ್ತದೆ. ಪುನೀತ್ಗೆ (Puneeth Rajkumar) ಪ್ರಿಯವಾದ ಜಾಗಗಳಾದ ಅಣ್ಣಾವ್ರು ಹುಟ್ಟಿದ ಹೆಂಚಿನ ಮನೆ, ಅಪ್ಪುವಿನ ಫೇವರಿಟ್ ದೊಡ್ಡಮನೆ, ದೊಡ್ಡ […]
-
ಹೈವೇನಲ್ಲಿ ತಲ್ವಾರ್ ಹಿಡಿದು ವೀಲ್ಹಿಂಗ್ ಮಾಡಿದ ಪುಂಡರು: ವಿಡಿಯೋ ವೈರಲ್
ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡ ಯುವಕರ ವೀಲ್ಹಿಂಗ್ ಕ್ರೇಜ್ ಮಿತಿಮೀರಿದ್ದು ಕೈಯಲ್ಲಿ ತಲ್ವಾರ್ ಹಿಡಿದು ಯುವಕರ ಗುಂಪು ವೀಲ್ಹಿಂಗ್ ಮಾಡಿದೆ. ಯುವಕರ ಡೆಡ್ಲಿ ವೀಲ್ಹಿಂಗ್ಗೆ ಪ್ರತಿನಿತ್ಯ ಚನ್ನರಾಯಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದಾರೆ. ಮೂರು ಬೈಕ್ನಲ್ಲಿ ವೀಲ್ಹಿಂಗ್ ಮಾಡಿದ ಯುವಕರು ಕೈಯಲ್ಲಿ ತಲ್ವಾರ್ ಜಳಪಿಸಿ ಮೆರೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಇದ್ದರು ಕ್ಯಾರೆ ಎನ್ನದ ಪೋಲಿ ಬಾಯ್ಸ್ ಪುಂಡಾಟಕ್ಕೆ, ಇತರ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಹೋಗುವ ಪರಿಸ್ಥಿತಿ ಎದುರಾಗಿದೆ. ಸದ್ಯ […]
-
ಮತ್ತೆ ಕೊರೊನಾ ಆತಂಕ ಶುರು; ಬೆಂಗಳೂರಿನ ಖಾಸಗಿ ಶಾಲೆಯಲ್ಲಿ 37 ಜನರಿಗೆ ಸೋಂಕು, ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ ಕೊರೊನಾ ಸ್ಫೋಟ | Thirty seven tested positive for coronavirus in Bengaluru private school
ಸಾಂದರ್ಭಿಕ ಚಿತ್ರ ಬೆಂಗಳೂರು: ಮಹಾಮಾರಿ ಕೊರೊನಾ ಮತ್ತೆ ತನ್ನ ಆಟ ಶುರು ಮಾಡಿದೆ. ನಿನ್ನೆ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈಗ ಬೆಂಗಳೂರಿನ ಮಹದೇವಪುರ ವಲಯದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ನಗರದ ಸರ್ಜಾಪುರ ರಸ್ತೆಯಲ್ಲಿರುವ ದೊಡ್ಡಸಂದ್ರದ ಖಾಸಗಿ ಶಾಲೆಯಲ್ಲಿ 37 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 13 ರಿಂದ 15 ವರ್ಷದ 33 ವಿದ್ಯಾರ್ಥಿಗಳು, ನಾಲ್ವರು ಶಾಲಾ ಸಿಬ್ಬಂದಿಗೆ ಕೊರೊನಾ […]
-
Viral Video: ಬಾಯಾರಿಕೆ ತಡೆಯಲಾಗದೇ ಹ್ಯಾಂಡಲ್ ಪಂಪ್ ಒತ್ತಿ ನೀರು ಕುಡಿದ ಎಮ್ಮೆ; ವಿಡಿಯೊ ನೋಡಿ | Buffalo using hand pump and drinking water video goes viral
ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿದ ಎಮ್ಮೆ ಪ್ರಾಣಿಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತವೆ. ಕೆಲವು ತಮಾಷೆಯ ದೃಶ್ಯಗಳು ಮನಸ್ಸಿಗೆ ಭಾರೀ ಇಷ್ಟವಾಗುತ್ತವೆ. ಇನ್ನು ಕೆಲವು ಪ್ರಾಣಿಗಳ ತುಂಟಾಟ, ಮೋಜು ಮಸ್ತಿಯಿಂದ ಕೂಡಿದ್ದು ಮನಸ್ಸಿಗೆ ಮುದ ನೀಡುತ್ತವೆ. ಅವುಗಳಲ್ಲಿ ಕೆಲವು ಎಲ್ಲರೂ ಬೆರಗಾಗಿ ನೋಡುವಂತಿರುತ್ತದೆ. ಇದೀಗ ವೈರಲ್ ಆದ ವಿಡಿಯೊ ಕೂಡಾ ಅಂಥದ್ದೇ! ಎಮ್ಮೆಯೊಂದು ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿಯುತ್ತಿದೆ. ಎಮ್ಮೆಯ ಚತುರತೆಗೆ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಬುದ್ದಿವಂತ ಎಮ್ಮೆ ಎಂದು […]
-
ಬಾಕ್ಸ್ ಆಫೀಸ್ನಲ್ಲಿ ಸ್ಟಾರ್ ಸಿನಿಮಾಗಳ ಪೈಪೋಟಿ; ಈ ವಾರ ಬಾಲಿವುಡ್ ಮಂದಿ ಎದುರು ‘ಸಖತ್’ ಮುಖಾಮುಖಿ | Sakath Antim The Final Truth Satyameva Jayate 2 movies Box office clash
ಸತ್ಯಮೇವ ಜಯತೆ 2, ಸಖತ್, ಅಂತಿಮ್: ದಿ ಫೈನಲ್ ಟ್ರುತ್ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಚಿತ್ರರಂಗ ಈಗ ಮತ್ತೆ ಹಳೇ ಚಾರ್ಮ್ ಪಡೆದುಕೊಂಡಿದೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಬಿಡುಗಡೆಗಾಗಿ ಕಾದು ಕುಳಿತಿದ್ದ ಅನೇಕ ಚಿತ್ರಗಳ ನಡುವೆ ಈಗ ಕ್ಲ್ಯಾಶ್ ಕೂಡ ಆಗುತ್ತಿದೆ. ಇದರಿಂದ ಬಾಕ್ಸ್ ಆಫೀಸ್ನಲ್ಲಿ ಸ್ಟಾರ್ ನಟರ ನಡುವೆ ಭಾರಿ ಪೈಪೋಟಿ ಏರ್ಪಡುತ್ತಿದೆ. ಯಾವ ಚಿತ್ರ ಎಷ್ಟು ಚಿತ್ರಮಂದಿರ ಪಡೆದುಕೊಂಡಿದೆ ಎಂಬುದು ಕೂಡ ಮುಖ್ಯವಾಗುತ್ತದೆ. ಥಿಯೇಟರ್ಗಾಗಿ ಸ್ಟಾರ್ ನಟರ ನಡುವೆ […]
-
ಮೊದಲ ಪಂದ್ಯದಲ್ಲೇ ಮಿಂಚಿದ ಶ್ರೇಯಸ್ ‘ಈ’ ಎಕ್ಸ್ಪೀರಿಯನ್ಸ್ ಪ್ಲೇಯರ್ಗಳ ಸ್ಥಾನಕ್ಕೆ ಕುತ್ತು ತರ್ತಾರಾ?
ಮೊದಲ ಇನ್ನಿಂಗ್ಸ್ನಲ್ಲಿ ಅನುಭವಿಗಳು ಕೈಕೊಟ್ಟಾಗ ಟೀಮ್ ಇಂಡಿಯಾದ ಕೈ ಹಿಡಿದಿದ್ದು, ಶ್ರೇಯಸ್ ಅಯ್ಯರ್. ಪಾದರ್ಪಣೆಯ ಪಂದ್ಯದಲ್ಲಿ ಕ್ಲಾಸ್ ಇನ್ನಿಂಗ್ಸ್ ಆಡಿದ ಅಯ್ಯರ್, ಈಗ ಇಬ್ಬರು ಎಕ್ಸ್ಪೀರಿಯನ್ಸ್ ಪ್ಲೇಯರ್ಗಳನ್ನ ಆತಂಕಕ್ಕೆ ದೂಡಿದ್ದಾನೆ. ಶ್ರೇಯಸ್ ಅಯ್ಯರ್, ಟೀಮ್ ಇಂಡಿಯಾದ ಡೆಬ್ಯು ಸ್ಟಾರ್. ಮೊದಲ ಪಂದ್ಯದಲ್ಲೇ ಡಾಮಿನೇಟಿಂಗ್ ಪರ್ಫಾಮೆನ್ಸ್ ನೀಡಿರುವ ಮುಂಬೈಕರ್, ಟೆಸ್ಟ್ ಕ್ರಿಕೆಟ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಆಪದ್ಭಾಂದವ ಎನಿಸಿಕೊಂಡ ಶ್ರೇಯಸ್, ಈಗ ಇಬ್ಬರು ಅಪದ್ಭಾಂದವರನ್ನ ಒತ್ತಡಕ್ಕೆ ಸಿಲುಕಿದ್ದಾರೆ. ಜಡ್ಡು ಜೊತೆ ಶ್ರೇಯಸ್ ಶತಕದ ಜೊತೆಯಾಟ106 ರನ್ಗಳಿಗೆ […]
-
ಮಂಡ್ಯ: ಭಕ್ತನ ಸೋಗಿನಲ್ಲಿ ದೇವಾಲಯದಲ್ಲಿ ಕಳ್ಳತನ; ಯಲ್ಲಮ್ಮ ತಾಯಿಯ ತಾಳಿ ಕದ್ದು ಪರಾರಿ | Man theft goddess gold chain in renuka yellamma temple at mandya
ಗರ್ಭಗುಡಿಗೆ ನುಗ್ಗಿ ಚಿನ್ನದ ತಾಳಿ ಕಿತ್ತುಕೊಂಡು ಪರಾರಿ ಮಂಡ್ಯ: ಭಕ್ತನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ದೇವಿಯ ತಾಳಿ ಕದ್ದು ಪರಾರಿಯಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇವಾಲಯದಲ್ಲಿ ನಡೆದಿದೆ. 6 ಗ್ರಾಂ ಚಿನ್ನದ ತಾಳಿ ಕಿತ್ತುಕೊಂಡು ಕಳ್ಳ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಭಕ್ತನಂತೆ ಬಂದು ದೇವಿಗೆ ಕೈಮುಗಿದು ಬಳಿಕ ಕೃತ್ಯ ಎಸಗಿದ್ದಾನೆ. ಅರ್ಚಕರು ದೇವಾಲಯದಿಂದ ಹೊರದೋಗುತ್ತಿದ್ದಂತೆ ಕಳ್ಳ ತನ್ನ ಕೈಚಳ ತೋರಿದ್ದು, ಗರ್ಭಗುಡಿಗೆ ನುಗ್ಗಿ ದೇವಿ ವಿಗ್ರಹದಲ್ಲಿದ್ದ ತಾಳಿ ಕಿತ್ತು […]
-
Ind vs NZ: ಜಿದ್ದಾಜಿದ್ದಿಯ ಕಣದಲ್ಲಿ ಎಡವಿದ ಅನುಭವಿಗಳು: ಸಿಕ್ಕ ಅವಕಾಶ ಕೈಚೆಲ್ಲಿದ್ರಾ ಕನ್ನಡಿಗ?
ಕಿವೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಟೀಮ್ ಇಂಡಿಯಾ ವಿಫಲವಾಗಿದೆ. ಇದರ ನೇರ ಹೊಣೆ ಈ ಮೂವರು ಆಟಗಾರರದ್ದು. ಆ ಆಟಗಾರರು ಯಾರು.? ಅವರು ಮಾತ್ರ ಯಾಕೆ ಹೊಣೆಗಾರರು.? ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸುವಲ್ಲಿ ಭಾರತ ಎಡವಿದೆ. ಟಾಸ್ ಗೆಲುವು ತಂಡಕ್ಕೆ ಮುನ್ನಡೆ ತಂದುಕೊಟ್ಟರೂ ಬ್ಯಾಟಿಂಗ್ನಲ್ಲಿ ಎಡವಿದ್ದು, ತಂಡಕ್ಕೆ ಹಿನ್ನಡೆಯಾಗಿದೆ. ಇದೀಗ ಈ ಹಿನ್ನೆಡೆಯ ನೇರ ಹೊಣೆಯನ್ನ ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ನಾಯಕ […]
-
ತಿಂಗಳ ಹಿಂದೆಯೇ ಮನೆ ಬಾಡಿಗೆ ಕೇಳುವ ನೆಪದಲ್ಲಿ ‘ಲಂಚ ಕೃಷಿಕ’ ರುದ್ರೇಶಪ್ಪ ಮನೆ ಕದ ತಟ್ಟಿದ್ದ ಎಸಿಬಿ ಅಧಿಕಾರಿಗಳು! ಆಗ ಏನಾಯಿತು? | ACB officials visits Rudreshappa residence one month before the ride to gather information of his bribe in shivamogga
ಎಸಿಬಿ (ಸಾಂದರ್ಭಿಕ ಚಿತ್ರ) ಶಿವಮೊಗ್ಗ: ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕನಾಗಿರುವ ಟಿ.ಎಸ್.ರುದ್ರೇಶಪ್ಪನ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಈತನ ನಿವಾಸದಲ್ಲಿರುವ ಸುಮಾರು 6,65,03,782 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ನಿವೇಶನ, ಕಟ್ಟಡ, ಭೂಮಿ, ಬ್ಯಾಂಕ್ ಠೇವಣಿ, ಹಣ ಪತ್ತೆ ಹಚ್ಚಿದೆ. ರುದ್ರೇಶಪ್ಪ ಆದಾಯಕ್ಕಿಂತಲೂ ಶೇ. 400ರಷ್ಟು ಅಕ್ರಮ ಆಸ್ತಿ ಇರೋದು ಪತ್ತೆ ಮಾಡಿದೆ. ಆದ್ರೆ ಈ ಸಂಬಂಧ ಮತ್ತೊಂದು ಮಾಹಿತಿ ಬಯಲಾಗಿದೆ. ಎಸಿಬಿ ಅಧಿಕಾರಿಗಳು ಟಿ.ಎಸ್.ರುದ್ರೇಶಪ್ಪನ ಬೇಟೆಯಾಡಿದ ರೋಚಕ ಸಂಗತಿ ಬಯಲಾಗಿದೆ. […]
-
ವಿಜಯ್ ದೇವರಕೊಂಡ ಭೇಟಿ ಮಾಡಲು ಅಮೆರಿಕದ ವಿಮಾನ ಹತ್ತಿದ್ರಾ ನಟಿ ರಶ್ಮಿಕಾ ಮಂದಣ್ಣ? | Pushpa actress Rashmika Mandanna reportedly went to America to meet Liger star Vijay Deverakonda
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೈಯಲ್ಲಿ ಹಲವು ಸಿನಿಮಾಗಳಿವೆ. ಅಲ್ಲು ಅರ್ಜುನ್ ಜೊತೆ ನಟಿಸಿರುವ ‘ಪುಷ್ಪ’ ಚಿತ್ರ (Pushpa Movie) ಡಿಸೆಂಬರ್ 17ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ಶ್ರೀವಲ್ಲಿ ಎಂಬ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಶ್ರೀವಲ್ಲಿ ಪಾತ್ರದ ಪೋಸ್ಟರ್ ಮತ್ತು ಸಾಂಗ್ ಬಿಡುಗಡೆ ಆಗಿತ್ತು. ‘ಪುಷ್ಪ’ ಚಿತ್ರದಿಂದ ರಶ್ಮಿಕಾ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಸಿಗುವ ನಿರೀಕ್ಷೆ ಇದೆ. ಅತ್ತ ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಜೊತೆ ‘ಗುಡ್ಬೈ’ ಹಾಗೂ […]
-
ಕೊಪ್ಪಳ; ಆನೆಗುಂದಿ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ
ಕೊಪ್ಪಳ: ಆನೆಗುಂದಿಯ ಸರ್ಕಲ್ಗೆ ನಟ ಪುನೀತ್ರಾಜ್ಕುಮಾರ್ ಹೆಸರು ನಾಮಕರಣ ಮಾಡಲಾಯಿತು. ಆನೆಗೊಂದಿಯ ವಿರುಪಾಪರುಗಡ್ಡಿಗೆ ತೆರಳುವ ಮಾರ್ಗದ ವೃತ್ತಕ್ಕೆ ಅಪ್ಪು ಹೆಸರಿಟ್ಟ ಗ್ರಾಮಸ್ಥರು, ನಾಮಫಲಕಕ್ಕೆ ಪೂಜೆ ಸಲ್ಲಿಸಿ ಅನಾವರಣಗೊಳಿಸಿದ್ರು. ಈ ನೂತನ ವೃತ್ತದ ನಾಮಕರಣದ ವೇಳೆ ಗ್ರಾಮಸ್ಥರು, ಶಾಲಾ ಮಕ್ಕಳು, ಮಹಿಳೆಯರೆಲ್ಲರೂ ಸೇರಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ರು. ಇನ್ನು ಇದೇ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ ಪುನೀತ್ರಾಜ್ಕುಮಾರ್ಗೆ ಜೈಕಾರ ಘೋಷಣೆ ಕೂಗಿ ನಮನ ಸಲ್ಲಿಸಿದ್ರು. News First Live Kannada
-
4 ನಾಯಿ ಮರಿಗಳ ಕತ್ತು ಕೊಯ್ದು ಹತ್ಯೆ: ನಟಿ ಅಮೂಲ್ಯ ಪತಿ ಜಗದೀಶ್ ಆಕ್ರೋಶ, ಪಶುಸಂಗೋಪನೆ ಇಲಾಖೆ ಸ್ಪಂದನೆ | Actress amulya husband jagdish demands bbmp and Animal Husbandry Department to take action on baby dogs death in bengaluru
4 ನಾಯಿ ಮರಿಗಳ ಕತ್ತು ಕೊಯ್ದು ಹತ್ಯೆ: ನಟಿ ಅಮೂಲ್ಯ ಪತಿ ಜಗದೀಶ್ ಆಕ್ರೋಶ, ಪಶುಸಂಗೋಪನೆ ಇಲಾಖೆ ಸ್ಪಂದನೆ ಬೆಂಗಳೂರು: ಸ್ಯಾಂಡಲ್ವುಡ್ ನಟಿ ಅಮೂಲ್ಯ ಪತಿ ಜಗದೀಶ್ ಈಗಾಗಲೇ ಅನೇಕ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಸದ್ಯ ಈಗ ಪುಟ್ಟಾಣಿ ನಾಯಿ ಮರಿಗಳನ್ನು ಸಾಯಿಸಲಾಗಿದೆ ಎಂದು ನಾಯಿ ಮರಿಗಳು ಮೃತಪಟ್ಟ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಪಶುಸಂಗೋಪನೆ ಇಲಾಖೆ ಸ್ಪಂದಿಸಿದ್ದು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದೆ. ನಗರದ ಆರ್. ಆರ್. ನಗರದ […]
-
ಟೆಸ್ಟ್ ಸ್ಪೆಷಲಿಸ್ಟ್ಗಳ ವೈಫಲ್ಯ -ಮೊದಲ ದಿನದಾಟದ ಅಂತ್ಯಕ್ಕೆ ಭಾರತ 258ಕ್ಕೆ 4
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದ ನಡುವೆಯೇ ಭಾರತ ಕಮ್ಬ್ಯಾಕ್ ಮಾಡಿದೆ. ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಿವೀಸ್ ವೇಗಿ ಕೈಲ್ ಜೆಮಿಸನ್ ನಡೆಸಿದ ಮಾರಕ ದಾಳಿಗೆ ರಹಾನೆ ಪಡೆ ತತ್ತರಿಸಿತು. ಆದರೆ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅಮೋಘ ಅರ್ಧಶತಕ ಸಿಡಿಸಿ ಇಕ್ಕಟ್ಟಿನಲ್ಲಿದ್ದ ತಂಡಕ್ಕೆ ಸಂಜೀವಿನಿಯಾದರು. ಮೊದಲ ಸೆಷನ್ನಲ್ಲಿ ಟೀಮ್ ಇಂಡಿಯಾಗೆ ‘ಶುಭ್’ಆರಂಭಶುಭ್ಮನ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್, ಆರಂಭದಲ್ಲಿ […]
-
Tax Relief: ಟಿಡಿಎಸ್, ಟಿಸಿಎಸ್ ನಿಯಮದಲ್ಲಿ ಉದ್ಯಮಗಳಿಗೆ ನಿರಾಳ ನೀಡಿದ ಸಿಬಿಡಿಟಿ | TDS And TCS Rules Changed By CBDT To Give Relax To Business
ಸಾಂದರ್ಭಿಕ ಚಿತ್ರ ಉದ್ಯಮಗಳಿಗೆ ನಿರಾಳ ಆಗುವಂಥ ಸುದ್ದಿಯೊಂದು ಇಲ್ಲಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (CBDT) ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮೂಲದಲ್ಲಿ ತೆರಿಗೆ (TCS, TDS) ಕಡ್ಡಾಯ ಸಂಗ್ರಹ ಅಥವಾ ಕಡಿತಕ್ಕೆ ಸಂಬಂಧಿಸಿದ ನಿಬಂಧನೆಗಳ ಮೇಲೆ ವ್ಯವಹಾರಗಳಿಗೆ ನಿರಾಳವನ್ನು ನೀಡಿದೆ. ಈ ವಿಚಾರವು ಗುರುವಾರದಂದು ಬಂದಿರುವ ಅಧಿಕೃತ ಆದೇಶದಿಂದ ತಿಳಿದಿದೆ. ಆ ಆದೇಶದ ಪ್ರಕಾರ, ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ನಡೆಸುವ ಇ-ಹರಾಜು ಸೇವೆಗಳು ಇ-ಕಾಮರ್ಸ್ ಆಪರೇಟರ್‌ಗಳಿಗೆ ಅನ್ವಯವಾಗುವ ಟಿಡಿಎಸ್ ನಿಬಂಧನೆಗೆ ಒಳಪಡುವುದಿಲ್ಲ. ಕೇವಲ ಬೆಲೆಯನ್ನು ತಿಳಿದುಕೊಳ್ಳುವುದಕ್ಕೆ ಮಾತ್ರ […]
-
ಫಸ್ಟ್ ಟೈಮ್ ಅಂಧನ ಪಾತ್ರದಲ್ಲಿ ಗೋಲ್ಡನ್ ಸ್ಟಾರ್- ‘ಸಖತ್’ ಆಗಿ ‘ಚಮಕ್’ ಕೊಡಲಿದ್ದಾನೆ ‘ಬಾಲು’
ಸಖತ್ ಸಖತ್ ಸಖತ್.. ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕಂತೂ ಸಖತ್ ಸಿನಿಮಾದ ಬಗ್ಗೆನೇ ಸಿಹಿ ಸಹಿ ಸಮಾಚಾರ.. ಒಂದೊಳ್ಳೆ ಕಾಮಿಡಿ ಎಂಟರ್ಟೈನರ್ಗಾಗಿ ಕಾದಿರುವ ಸಿನಿ ಪ್ರೇಕ್ಷಕರಿಗೆ ಸಖತ್ ಹೋಳಿಗೆ ಊಟವನ್ನೇ ನೀಡಲು ಸಜ್ಜಾಗಿದೆ.. ಇಂದು ಪ್ರೇಕ್ಷಕರ ಮುಂದೆ ಬರಲಿರುವ ಸಖತ್ ಸಿನಿಮಾದ ಸಖತ್ ಸಮಾಚಾರ ನಿಮಗಾಗಿ.. ಇಂದು ತೆರೆ ಮೇಲೆ ಸಖತ್ ಸಿನಿಮಾದೊಂದಿಗೆ ಸಖತ್ತಾಗಿ ಬಂದು ಸಿನಿ ಪ್ರೇಕ್ಷಕರಿಗೆ ಸಖತ್ ರಂಜನೆ ನೀಡೋಕೆ ಮುಂದಾಗಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಪೋಸ್ಟರ್ , ಟೀಸರ್ , ಮೇಕಿಂಗ್ ಹಾಗೂ ಸಾಂಗ್ಸ್ನಿಂದ ಸಖತ್ […]
-
ವಿಷ್ಣು ಪ್ರಿಯ, ಅತ್ಯಂತ ಮಹತ್ವವಿರುವ ಉತ್ಪನ್ನ ಏಕಾದಶಿ ಕಥೆ ಏನು? ಇಲ್ಲಿದೆ ಉತ್ಪನ್ನ ಏಕಾದಶಿ ಶುಭ ಮುಹೂರ್ತ ಮತ್ತು ಪೂಜಾ ವಿಧಾನ | Utpanna Ekadashi 2021 know when is utpanna Ekadashi and interesting story behind this day
ವಿಷ್ಣು ಹಿಂದೂ ಕ್ಯಾಲೆಂಡರ್ ಪ್ರಕಾರ, ಒಂದು ತಿಂಗಳಲ್ಲಿ ಎರಡು ಏಕಾದಶಿ ಉಪವಾಸಗಳಿವೆ. ಒಂದು ಶುಕ್ಲ ಪಕ್ಷದಲ್ಲಿ ಮತ್ತು ಇನ್ನೊಂದು ಕೃಷ್ಣ ಪಕ್ಷದಲ್ಲಿ. ಕಾರ್ತಿಕ ಪೂರ್ಣಿಮೆಯ ನಂತರ ಕೃಷ್ಣ ಪಕ್ಷದಲ್ಲಿ ಬರುವ ಏಕಾದಶಿಯಂದು ಉತ್ಪನ್ನ ಏಕಾದಶಿಯ ಉಪವಾಸವನ್ನು ಆಚರಿಸಲಾಗುತ್ತೆ. ಉತ್ಪನ್ನ ಏಕಾದಶಿ ಪ್ರಮುಖ ಏಕಾದಶಿಗಳಲ್ಲಿ ಒಂದಾಗಿದೆ. ವಾರ್ಷಿಕ ಉಪವಾಸವನ್ನು ಆಚರಿಸಲು ಪ್ರತಿಜ್ಞೆ ಮಾಡುವ ಭಕ್ತರು ಏಕಾದಶಿ ಉಪವಾಸವನ್ನು ಉತ್ಪನ್ನ ಏಕಾದಶಿಯಿಂದ ಪ್ರಾರಂಭಿಸುತ್ತಾರೆ. ಈ ವರ್ಷ ಉತ್ಪನ್ನ ಏಕಾದಶಿಯು ಮಂಗಳವಾರ, ನವೆಂಬರ್ 30, 2021 ರಂದಿದೆ. ಉತ್ಪನ್ನ ಏಕಾದಶಿ 2021 […]
-
ಅದ್ಧೂರಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕುತ್ತ ಸರ್ಕಾರ? -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್
1. ಅದ್ಧೂರಿ ಹೊಸ ವರ್ಷ ಆಚರಣೆಗೆ ಸರ್ಕಾರ ಬ್ರೇಕ್? ಅದ್ಧೂರಿ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಕೂಡ ಕೊರೊನಾ 3ನೇ ಅಲೆಯ ಆತಂಕ ದೂರವಾಗಿಲ್ಲವಾದ್ದರಿಂದ ಹೆಚ್ಚು ಜನ ಸೇರುವುದನ್ನ ತಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಹೊಸ ವರ್ಷದ ಸಾರ್ವಜನಿಕ ಸಂಭ್ರಮಾಚರಣೆಗೆ ನಿಷೇಧ ಹೇರಲು ಸರ್ಕಾರ ಮುಂದಾಗಿದೆ. ಇದ್ರಿಂದ ಈ ಬಾರಿಯಾದ್ರೂ ಅದ್ಧೂರಿಯಾಗಿ ಹೊಸ ವರ್ಷವನ್ನ ಬರಮಾಡಿಕೊಳ್ಳೋಣ ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ. 2. ಇಂದು ಹೆದ್ದಾರಿ ಬಂದ್ಗೆ ರೈತ ಸಂಘಟನೆ […]
-
Gold Price Today: ಬೆಂಗಳೂರಿನಲ್ಲಿ ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಇಂದು ಸ್ಥಿರ, ಬೆಳ್ಳಿ ಬೆಲೆಯಲ್ಲಿ ಏರಿಕೆ | Gold Price today on 2021 november 26 check silver price in bangalore mumbai delhi and major city
ಸಂಗ್ರಹ ಚಿತ್ರ ಬೆಂಗಳೂರು: ಚಿನ್ನ ಖರೀದಿಸಬೇಕು ಅಂದುಕೊಂಡಾಗಲೆಲ್ಲಾ ಬೆಲೆ ಇಳಿಕೆಯತ್ತ ಸಾಗಿದೆಯೇನೋ ಎಂಬ ಕುತೂಹಲ ಕೆರಳುವುದು ಮಾಮೂಲಿ. ದರ ಇಳಿಕೆಯತ್ತ ಸಾಗಿದ್ದಾಗ ಚಿನ್ನ (Gold Price), ಬೆಳ್ಳಿ ಕೊಳ್ಳುವ ನಿರೀಕ್ಷೆ ಇರುವುದೂ ತಪ್ಪಲ್ಲ. ಅಷ್ಟು ದೊಡ್ಡ ಮೌಲ್ಯದ ಆಭರಣಗಳನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದರೆ ಇಂದು ಶುಕ್ರವಾರ (ನವೆಂಬರ್ 26) ಚಿನ್ನ, ಬೆಳ್ಳಿ ದರ (Silver Price) ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಬೆಂಗಳೂರಿನಲ್ಲಿ ಇಂದು ಸ್ಥಿರವಾಗಿದೆ. ಬೆಳ್ಳಿ ಬೆಲೆಯಲ್ಲಿ […]
-
ಮತ್ತೊಂದು ರೂಪದಲ್ಲಿ ಎಂಟ್ರಿ ಕೊಟ್ಟ ಹೆಮ್ಮಾರಿ ಕೊರೊನಾ
ಜಗತ್ತು ಈಗಷ್ಟೇ ಕೋವಿಡ್ ಹೊಡೆತದಿಂದ ಸ್ವಲ್ಪ ಸ್ವಲ್ಪ ಸುಧಾರಿಸಿಕೊಳ್ತಿದೆ. ಹೀಗಿರುವಾಗ ಹೋದಿಯಾ ಪಿಶಾಚಿ ಅಂದ್ರೆ ಮತ್ತೆ ಬಂದೆ ಗವಾಕ್ಷಿ ಎಂಬಂತೆ, ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ರೂಪಾಂತರಿ ಪತ್ತೆಯಾಗಿದೆ. ಇದು ದೇಶಕ್ಕೂ ಎಂಟ್ರಿಯಾಗೋ ಭೀತಿ ಶುರುವಾಗಿದ್ದು, ಭಾರತಕ್ಕೆ ನೋ ಎಂಟ್ರಿ ಹೇಳೋಕೆ ಕೇಂದ್ರ ಸಕಲ ಸಿದ್ಧತೆ ಮಾಡಿಕೊಳ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಮತ್ತೊಂದು ರೂಪಯೆಸ್, ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೊಸ ಕೋವಿಡ್ ರೂಪಾಂತರವನ್ನು ಪತ್ತೆ ಮಾಡಿದ್ದಾರೆ. ಇದು ಈಗಷ್ಟೇ ಕೋವಿಡ್ ಹೊಡೆತದಿಂದ ಚೇತರಿಸಿಕೊಳ್ತಿರೋ ವಿಶ್ವಕ್ಕೆ […]
-
Ajinkya Rahane: ಮುಂದುವರೆದ ಅಜಿಂಕ್ಯಾ ರಹಾನೆ ಕಳಪೆ ಆಟ: ವಿವಿಎಸ್ ಲಕ್ಷ್ಮಣ್ರಿಂದ ಮಹತ್ವದ ಹೇಳಿಕೆ | India vs New Zealand 1st Test VVS Laxman questioned Ajinkya Rahanes shot selection after out for 35
Ajinkya Rahane and VVS Laxman ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಿಂದ ಭಾರತದ (India vs New Zealand 1st Test) ಖಾಯಂ ನಾಯಕ ವಿರಾಟ್ ಕೊಹ್ಲಿ (Virat Kohli) ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ ಅಜಿಂಕ್ಯಾ ರಹಾನೆ (Ajinkya Rahane) ತಂಡವನ್ನು ಮುನ್ನಡೆಸುತ್ತಿದ್ದಾರೆ. ನಾಯಕತ್ವದ ಜವಾಬ್ದಾರಿ ಹೊತ್ತಮೇಲೆಯೂ ರಹಾನೆ ಕಳಪೆ ಆಟ ಮುಂದುವರೆದಿದೆ. ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ನ ಮೊದಲ ದಿನವೇ ರಹಾನೆ 63 ಎಸೆತಗಳಲ್ಲಿ ಕೇವಲ 35 ರನ್ ಗಳಿಸಿ ಕೈಲ್ ಜೆಮಿಸನ್ […]
-
ಕಳೆದುಕೊಂಡ ಹಾಸನ ಕ್ಷೇತ್ರ ವಶಕ್ಕೆ ದಳಪತಿ ಪ್ಲಾನ್ -ಹಾಸನ ಶಾಸಕ ಪ್ರೀತಂ ಗೌಡಗೆ ಅಷ್ಟ ದಿಗ್ಬಂಧನ
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ದಳಪತಿಗಳು ಭರ್ಜರಿ ಸಿದ್ಧತೆ ನಡೆಸ್ತಿದ್ದಾರೆ. ಅದರಲ್ಲೂ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗೌಡರ ಕುಟುಂಬ ಬಿಜೆಪಿಗೆ ಅಷ್ಟದಿಗ್ಬಂಧನ ಹಾಕಲು ತಯಾರಿ ನಡೆಸಿದೆ. ಹಾಸನ ಕ್ಷೇತ್ರದಲ್ಲಿ ಆಳ್ತಿರೋ ಕೇಸರಿ ಕಲಿಗೆ ತಕ್ಕಪಾಠ ಕಲಿಸಲು ದೊಡ್ಡ ಗೌಡರ ಸೊಸೆಯೇ ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಪರಿಷತ್ ಮಿನಿ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಮೇಲ್ಮನೆಯಲ್ಲಿ ಮೋಡಿ ಮಾಡಲು ಮೂರು ಪಕ್ಷಗಳು ಅಬ್ಬರದ ಪ್ರಚಾರ ನಡೆಸ್ತಿವೆ. ಅದೇ ರೀತಿ ದಳಪತಿಗಳು ತಾವು ಸ್ಪರ್ಧಿಸಿರೋ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಗ್ […]
-
ಸಂವಿಧಾನವೇ ನಮ್ಮ ರಾಷ್ಟ್ರಧರ್ಮ; ನಾಡಿನ ಜನತೆಗೆ ಸಂವಿಧಾನ ದಿನದ ಶುಭಕಾಮನೆ ತಿಳಿಸಿದ ಸಿಎಂ ಬೊಮ್ಮಾಯಿ, ಬಿಎಸ್ವೈ | CM Basavaraj bommai and bs yediyurappa wishes for constitution day in twitter
ಸಂವಿಧಾನ ದಿನದ ಶುಭಾಶಯಗಳು ಬೆಂಗಳೂರು: ಇಂದು ನಾಡಿನಲ್ಲಿ ಸಂವಿಧಾನ ದಿನವನ್ನು(Constitution Day) ಆಚರಿಸಲಾಗುತ್ತಿದೆ. 1949ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನೆಪಿಗಾಗಿ ದೇಶ ಈ ದಿನವನ್ನು ಆಚರಿಸುತ್ತೆ. 2015ರಿಂದ ಸಂವಿಧಾನ ದಿನ ಆಚರಣೆ ಆರಂಭವಾಯ್ತು. ಈ ಐತಿಹಾಸಿಕ ದಿನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಸಮಸ್ತ ಭಾರತೀಯರಿಗೆ ಸಂವಿಧಾನ ದಿನದ ಶುಭಾಶಯ ತಿಳಿಸಿದ್ದಾರೆ. ಟ್ವೀಟ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಸ್ತ ಭಾರತೀಯರಿಗೆ ಸಂವಿಧಾನ ದಿನದ […]
-
ವ್ಯಾಯಾಮದ ಸಮಯದಲ್ಲಿ ನಿಮ್ಮ ಮಗುವಿಗೆ ಎದೆ ನೋವು ಕಾಣಿಸಿಕೊಳ್ಳುತ್ತಿದೆಯೇ? ಕಾರಣಗಳೇನು ತಿಳಿಯಿರಿ | Know about these tips for child chest pain during exercising
Exercise ನಿಮ್ಮ ಮಗು ಎಂದಾದರೂ ಎದೆ ನೋವು ಎಂದು ಹೇಳುತ್ತಿರುವುದನ್ನು ನೀವು ಗಮನಿಸಿದ್ದೀರಾ? ಮಕ್ಕಳಿಗೆ ಎದೆ ನೋವು ಕಾಣಿಸಿಕೊಂಡಾಗ ಅವರು ಅಳಲು ಪ್ರಾರಂಭಿಸುತ್ತಾರೆ. ಅಂತಹ ಸಮಯದ ಪೋಷಕರಲ್ಲಿ ಭಯವನ್ನು, ಆತಂಕವನ್ನು ಉಂಟು ಮಾಡುತ್ತದೆ. ಅಂತಹ ಸಮಯವನ್ನು ನಿಭಾಯಿಸಲು ಪೋಷಕರು ತಿಳಿದಿರಬೇಕಾದ ಒಂದಿಷ್ಟು ಮಾಹಿತಿಯನ್ನು ಮುಂಬೈನ ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ ವೈಸ್ ಚೇರ್ಮನ್, ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ವೈದ್ಯರಾದ ಡಾ. ರಮಾಕಾಂತ ಪಾಂಡಾ ಅವರು ನೀಡಿರುವ ಸಲಹೆಗಳನ್ನು ಇಂಡಿಯಾ ಟೈಮ್ಸ್ನಲ್ಲಿ ಉಲ್ಲೇಖಿಸಲಾಗಿದೆ. ಬುಹುತೇಕ ಸಮಯದಲ್ಲಿ ಎದೆ ನೋವು ಸೌಮ್ಯವಾಗಿರುತ್ತದೆ. […]
-
ಸುಮಲತಾರನ್ನ ಭೇಟಿಯಾಗಿ ಬೆಂಬಲ ಕೋರಿದ ಬಿಜೆಪಿ ಅಭ್ಯರ್ಥಿ
ಮಂಡ್ಯ: ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಮಂಡ್ಯದಿಂದ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರು ಇಂದು ಮಂಡ್ಯ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿ ಮನವಿ ಮಾಡಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ನಿವಾಸಕ್ಕೆ ಭೇಟಿ ನೀಡಿದ್ದ ಬೂಕಹಳ್ಳಿ ಮಂಜು ಅವರಿಗೆ ಸಚಿವ ಕೆ.ಸಿ.ನಾರಾಯಣ್ ಗೌಡ ಹಾಗೂ ಬಿಜೆಪಿ ಮುಖಂಡರು ಸಾಥ್ ನೀಡಿದ್ದರು. ಈ ವೇಳೆ ಪರಿಷತ್ ಚುನಾವಣೆಯಲ್ಲಿ ಬೆಂಬಲಿಸುವಂತೆ ಸಂಸದೆಗೆ ಮನವಿ ಮಾಡಿದರು. ಈ ವೇಳೆ ಸುಮಲತಾ […]