Categories
Sports

ಐಪಿಎಲ್‌ 14ನೇ ಆವೃತ್ತಿ : ವಿಭಿನ್ನ , ವಿಶೇಷ, ವಿಸ್ಮಯ

ವಿಶ್ವದ ಶ್ರೀಮಂತ ಕ್ರಿಕೆಟ್‌ ಕೂಟವಾದ ಐಪಿಎಲ್‌ 14ನೇ ಆವೃತ್ತಿಯತ್ತ ಮುಖ ಮಾಡಿದೆ. ಕೊರೊನಾ ತೀವ್ರತೆಯ ನಡುವೆಯೂ ಎ. 9ರಿಂದ ಮೇ 30ರ ತನಕ ಭಾರತದ ಆತಿಥ್ಯದಲ್ಲೇ ಪಂದ್ಯಗಳು ನಡೆಯಲಿವೆ. ಆದರೆ ಈ ಬಾರಿ ಎಂದಿಗಿಂತ ವಿಭಿನ್ನ ಮಾದರಿಯಲ್ಲಿ ಕೂಟವನ್ನು ಆಯೋಜಿಸಲಾಗುತ್ತಿದೆ. ಜತೆಗೆ ವೀಕ್ಷಕರ ನಿರ್ಬಂಧವೂ ಮುಂದುವರಿಯಲಿದೆ. ಇದನ್ನೆಲ್ಲ ಒಳಗೊಂಡ ಸಮಗ್ರ ಮಾಹಿತಿ ಇಲ್ಲಿದೆ.

1. ಕೊರೊನಾ ನಡುವೆ ಭಾರತದಲ್ಲೇ ಕೂಟ
ಈ ಐಪಿಎಲ್‌ ಕೊರೊನಾ ಕಾಲಘಟ್ಟದ 2ನೇ ಪಂದ್ಯಾವಳಿ. ಕಳೆದ ವರ್ಷ ಕೂಟವನ್ನು ಸಂಪೂರ್ಣವಾಗಿ ಯುಎಇಯಲ್ಲಿ ಆಡ ಲಾಗಿತ್ತು. ಆದರೆ ಈ ಬಾರಿ ಭಾರತದಲ್ಲೇ ನಡೆಸುವ ದಿಟ್ಟ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ. ಇದ್ದಕ್ಕಿದ್ದಂತೆ ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಲು ಶುರುವಾಗಿರುವುದರಿಂದ ಇದೊಂದು ಸವಾಲಿನ ನಿರ್ಧಾರವೇ ಸರಿ. ಈ ಬಾರಿಯೂ ಕೂಟವನ್ನು ವಿದೇಶದಲ್ಲಿ ನಡೆಸುವುದಕ್ಕೆ ಫ್ರಾಂಚೈಸಿಗಳು ಸಿದ್ಧವಿರಲಿಲ್ಲ. ಬಿಸಿಸಿಐಗೂ ಇದು ಲಾಭಕರವಲ್ಲ. ಯುಎಇ, ಶ್ರೀಲಂಕಾದಂತಹ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿ 50 ಕಿ.ಮೀ. ಅಂತರದಲ್ಲಿ ವಿಶ್ವದರ್ಜೆಯ ಮೈದಾನಗಳಿಲ್ಲ. ಇವೆಲ್ಲವೂ ದೇಶದ ಪ್ರಮುಖ ನಗರಗಳಲ್ಲಿ ಹಂಚಿಹೋಗಿವೆ. ಕೊರೊನಾ ಇರುವಾಗಲೂ ಬಿಸಿಸಿಐ ಅತ್ಯುತ್ತಮವಾಗಿ ಯೋಜನೆ ಮಾಡಿ, ಆಯ್ದ 6ನಗರಗಳಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಿದೆ.

2. ಆತಿಥೇಯ ನೆಲದಲ್ಲಿ ಪಂದ್ಯಗಳಿಲ್ಲ!
ಈ ಬಾರಿಯ ಐಪಿಎಲ್‌ ಭಾರತದ ಕೇವಲ 6 ತಾಣಗಳಲ್ಲಿ ನಡೆಯಲಿದೆ. ಇದರಲ್ಲಿ 5 ತಾಣಗಳು ಫ್ರಾಂಚೈಸಿಗಳ ನಂಟನ್ನು ಹೊಂದಿವೆ. ಬೆಂಗಳೂರು, ಹೊಸದಿಲ್ಲಿ, ಮುಂಬಯಿ, ಚೆನ್ನೈ ಮತ್ತು ಕೋಲ್ಕತಾ. ಹೆಚ್ಚುವರಿ ತಾಣವಾದ ಅಹ್ಮದಾಬಾದ್‌ಗೆ ಸಂಬಂಧಿಸಿದ ಯಾವುದೇ ಫ್ರಾಂಚೈಸಿ ಇಲ್ಲ. ಹಾಗೆಯೇ ಹೈದರಾಬಾದ್‌, ರಾಜಸ್ಥಾನ್‌ (ಜೈಪುರ) ಮತ್ತು ಪಂಜಾಬ್‌ (ಮೊಹಾಲಿ) ಫ್ರಾಂಚೈಸಿಗಳಿಗೆ ಸಂಬಂಧಿಸಿದ ಯಾವ ತಾಣಗಳಿಗೂ ಆತಿಥ್ಯದ ಯೋಗವಿಲ್ಲ.
ತಂಡವೊಂದು ಗರಿಷ್ಠ ಮೂರು ಬಾರಿ ಮಾತ್ರ ವಿಮಾನಯಾನ ಮಾಡುವ ರೀತಿಯಲ್ಲಿ ವೇಳಾಪಟ್ಟಿಯನ್ನು ಆಯೋಜಿಸಲಾಗಿದೆ. ಯಾವುದೇ ತಂಡಕ್ಕೂ ತನ್ನದೇ ನೆಲದಲ್ಲಿ ಆಡುವ ಯೋಗವಿಲ್ಲ. ಎಲ್ಲ ಪಂದ್ಯಗಳೂ ತಟಸ್ಥ ತಾಣಗಳಲ್ಲಿ ನಡೆಯುವುದು ವಿಶೇಷ.

3. ಪ್ರೇಕ್ಷಕರಿಗೆ ಕೊರೊನಾ ನಿರ್ಬಂಧ!
ಐಪಿಎಲ್‌ ಕಿಕ್‌ ಇರುವುದೇ ಕಿಕ್ಕಿರಿದು ಜಮಾ ಯಿಸುವ ವೀಕ್ಷಕರಿಂದ. ಟಿ20ಯ ನಿಜವಾದ ಜೋಶ್‌ ಏರಬೇಕಾದರೆ ಪ್ರೇಕ್ಷಕರು ಅನಿವಾರ್ಯ. ಇದರಿಂದ ಆಟಗಾರರಿಗೂ ಹೊಸ ಸ್ಫೂರ್ತಿ. ಆದರೆ ಕೊರೊನಾ ಕಾರಣದಿಂದಾಗಿ ಈ ಸಲವೂ ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ. ಭಾರತದಲ್ಲಿ ವೀಕ್ಷಕರನ್ನು ಹೊರಗಿರಿಸಿ ನಡೆಸುವ ಮೊದಲ ಐಪಿಎಲ್‌ ಪಂದ್ಯಾವಳಿ ಇದಾಗಿದೆ. ಅಷ್ಟರ ಮಟ್ಟಿಗೆ ಐಪಿಎಲ್‌ ಆಕರ್ಷಣೆ ಕಳೆಗುಂದಲಿದೆ. ಕಳೆದ ವರ್ಷ ಯುಎಇ ಕೂಟದ ವೇಳೆಯೂ ವೀಕ್ಷಕರಿಗೆ ನಿಷೇಧ ಹೇರಲಾಗಿತ್ತು. ಪ್ಲೇ ಆಫ್ ಪಂದ್ಯಗಳ ವೇಳೆ ಸೀಮಿತ ಸಂಖ್ಯೆಯ ವೀಕ್ಷಕರಿಗೆ ಅವಕಾಶ ನೀಡುವ ಪ್ರಸ್ತಾವ ಆರಂಭದಲ್ಲಿತ್ತಾದರೂ ಕೊನೆಗೆ ಇದು ನನೆಗುದಿಗೆ ಬಿತ್ತು.

4. ಇನ್ನಿಂಗ್ಸ್‌ಗೆ 90 ನಿಮಿಷ ಗಡುವು
ಐಪಿಎಲ್‌ ಐಸಿಸಿ ವ್ಯಾಪ್ತಿಗೆ ಒಳಪಡದ ಪಂದ್ಯಾವಳಿಯಾದ್ದರಿಂದ ಇದಕ್ಕೆ ನಿರ್ದಿಷ್ಟ ಸಮಯದ ಮಿತಿ ಇಲ್ಲ. ಮಳೆ ಇನ್ನಿತರ ಕಾರಣಗಳಿಂದ ಅಡಚಣೆಯಾದರೆ ಪಂದ್ಯ ಎಷ್ಟೇ ಹೊತ್ತಿನವರೆಗೂ ನಡೆಯಬಹುದು. ರಾತ್ರಿ ಒಂದು ಗಂಟೆಗೂ ಪಂದ್ಯ ಮುಗಿದ ನಿದರ್ಶನವಿದೆ.

ಆದರೆ ಈ ಬಾರಿ ಕಟ್ಟುನಿಟ್ಟಿನ ಸಮಯದ ಮಿತಿಯನ್ನು ವಿಧಿಸಲಾಗಿದೆ. ಒಂದು ತಂಡದ ಬ್ಯಾಟಿಂಗ್‌ 90 ನಿಮಿಷದಲ್ಲಿ ಮುಗಿಯಬೇಕು. ಅಂದರೆ 20 ಓವರ್‌ಗಳನ್ನು ಒಂದೂವರೆ ಗಂಟೆಯಲ್ಲಿ ಹಾಕಿ ಮುಗಿಸಲೇಬೇಕು. 85 ನಿಮಿಷ ಆಟಕ್ಕಾದರೆ, 5 ನಿಮಿಷ ವಿರಾಮ. ಹೀಗೆ ಎರಡು ಇನ್ನಿಂಗ್ಸ್‌ಗಳಿಂದ ಒಟ್ಟು ಹತ್ತು ನಿಮಿಷ ಉಳಿತಾಯವಾಗುತ್ತದೆ. ಪಂದ್ಯ ತಡವಾಗುವುದನ್ನು ತಪ್ಪಿಸಲು, ಬಿಸಿಸಿಐ ಈ ನಿರ್ಧಾರ ಮಾಡಿದೆ.

5.ಟಿ20 ವಿಶ್ವಕಪ್‌ಗೆ ಅತ್ಯುತ್ತಮ ಅಭ್ಯಾಸ
ಈ ಬಾರಿ ಅಕ್ಟೋಬರ್‌ನಲ್ಲಿ ಭಾರತದ ಆತಿಥ್ಯದಲ್ಲೇ ಟಿ20 ವಿಶ್ವಕಪ್‌ ನಡೆಯಲಿದೆ. ಆದ್ದರಿಂದ ವಿಶ್ವದ ಎಲ್ಲ ಪ್ರಮುಖ ತಂಡಗಳು ತಮ್ಮ ಆಟಗಾರರಿಗೆ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿವೆ. ಭಾರತದ ಪಿಚ್‌ಗಳ ಅಧ್ಯಯನ ಮಾಡಿ, ಅದಕ್ಕೆ ಪೂರ್ಣವಾಗಿ ಹೊಂದಿಕೊಳ್ಳಲು ಇದಕ್ಕಿಂತ ಅತ್ಯುತ್ತಮ ಅವಕಾಶ ವಿದೇಶಿಯ ರಿಗೆ ಸಿಗಲಾರದು. ಹೀಗಾಗಿ ಎಲ್ಲರೂ ಈ ಐಪಿಎಲ್‌ ಪಂದ್ಯಾವಳಿಯನ್ನು ಹೆಚ್ಚು ಗಂಭೀರ ವಾಗಿ ತೆಗೆದುಕೊಳ್ಳುವುದು ಖಂಡಿತ.

6.ಪಂದ್ಯದ ಸಮಯದಲ್ಲಿ ಬದಲಾವಣೆ
ಈ ಬಾರಿ ಐಪಿಎಲ್‌ ಪಂದ್ಯಗಳ ಸಮಯದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗಿದೆ. ಎರಡೂ ಪಂದ್ಯಗಳು ಅರ್ಧ ಗಂಟೆ ಬೇಗ ಆರಂಭವಾಗಲಿವೆ. ಅಪರಾಹ್ನದ ಪಂದ್ಯ 4 ಗಂಟೆ ಬದಲು 3.30ಕ್ಕೆ, ರಾತ್ರಿಯ ಪಂದ್ಯ 8 ಗಂಟೆ ಬದಲು
7.30ಕ್ಕೆ ಆರಂಭ ವಾಗುತ್ತದೆ.

7.ಟೀವಿ ವೀಕ್ಷಕರ ಸಂಖ್ಯೆ ಏರಿಕೆ
ಪ್ರೇಕ್ಷಕರಿಗೆ ನಿರ್ಬಂಧ ಇರುವುದರಿಂದ ಹೆಚ್ಚು ಲಾಭವಾಗುವುದು ಪ್ರಸಾರಕರಾದ ಸ್ಟಾರ್‌ ನ್ಪೋರ್ಟ್ಸ್ ನೆಟ್‌ವರ್ಕ್‌ಗೆ. ಕಳೆದ ವರ್ಷ ಎಲ್ಲರೂ ಮನೆಯಲ್ಲೇ ಕುಳಿತು ಪಂದ್ಯಗಳನ್ನು ಸವಿದು ದರಿಂದ ಟೀವಿ ವೀಕ್ಷಕರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿತ್ತು. ಹಾಗೆಯೇ ಜಾಹೀರಾತು ಆದಾಯವೂ. ಈ ಬಾರಿಯೂ ಇದು ಪುನರಾವರ್ತನೆಯಾಗುವುದರಲ್ಲಿ ಅನುಮಾನವಿಲ್ಲ.

8. ಹೆಚ್ಚುವರಿ ಆದಾಯ ಖೋತಾ
ಮೈದಾನಕ್ಕೆ ಪ್ರೇಕ್ಷಕರು ಹಾಜರಾಗದಿರು ವುದರಿಂದ ಪರೋಕ್ಷ ವಾಗಿ ಹಲವು ನಷ್ಟಗಳಾಗಲಿವೆ. ಪ್ರೇಕ್ಷಕರ ಟಿಕೆಟ್‌ ಹಣದ ಮೂಲಕ ಬರುವ ನೂರಾರು ಕೋಟಿ ರೂ. ಆದಾಯ ಕೈತಪ್ಪಲಿದೆ. ಆದರೆ ಈ ಪಂದ್ಯಗಳನ್ನೇ ನಂಬಿಕೊಂಡು ಬದುಕುವವರು ಅನೇಕರಿದ್ದಾರೆ.

ಪಂದ್ಯಗಳ ವೇಳೆ ಧ್ವಜ, ಟೀಶರ್ಟ್‌ ಮಾರುವವರು, ಬಣ್ಣ ಹಚ್ಚುವವರಿಗೆ ಕೆಲಸ ಇರುವುದಿಲ್ಲ. ಬಸ್‌, ಮೆಟ್ರೊ ನಿಲ್ದಾಣಗಳಿಗೆ ಭಾರೀ ಪ್ರಮಾಣದಲ್ಲಿ ಪ್ರಯಾಣಿಕರು ನುಗ್ಗಿ ಬರುವ ಪ್ರಶ್ನೆಯೇ ಇಲ್ಲ. ಹೊಟೇಲ್‌ಗ‌ಳಿಗೆ ವಹಿವಾಟು ತಪ್ಪಿ ಹೋಗುತ್ತದೆ. ಕ್ರೀಡಾಂಗಣಗಳಲ್ಲಿ ಊಟ, ತಿಂಡಿ ಮಾರು ವವರಿಗೆ ಅವಕಾಶವೇ ಇರುವುದಿಲ್ಲ.

ಕ್ರೀಡೆ – Udayavani – ಉದಯವಾಣಿ
Read More

Categories
Cinema

ಏಪ್ರಿಲ್ 13 ರಂದು ಏಕ್ ಲವ್ ಯಾ ಸಿನಿಮಾದ 'ಹೇಳು ಯಾಕೆ' ಸಾಂಗ್ ರಿಲೀಸ್

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಮೊದಲ ಹಾಡು ವ್ಯಾಲೆಂಟೈನ್ ಡೇ ಯಂದು ಬಿಡುಗಡೆಯಾಗಿತ್ತು. ಮತ್ತೊಂದು ಹಾಡು ಏಪ್ರಿಲ್ 13 ರಂದು ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗಲಿದೆ. 

ಈ ಸಂಬಂಧ ನಿರ್ದೇಶಕ ಪ್ರೇಮ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹೇಳು ಯಾಕೆ ಹಾಡು ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 13 ರಂದು ರಿಲೀಸ್ ಆಗಲಿದೆ. ಸದಾ ಪ್ರೀತಿ ಮತ್ತು ಬೆಂಬಲ ತೋರಿಸುತ್ತೀರಿ ಎಂದು ಟ್ವೀಟ್ ಮಾಡಿದ್ದಾರೆ.

ಇದೊಂದು ವಿಶೇಷ ಸಾಂಗ್ ಆಗಿದ್ದು, ರಾಣಾ ನಟನೆಯ ಚೊಚ್ಚಲ ಸಿನಿಮಾ ಇದಾಗಿದೆ.  ಪ್ರೇಮ ವೈಫಲ್ಯದ ಕಥೆಯುಳ್ಳ ಸಿನಿಮಾ ಇದಾಗಿದ್ದು, ನಿರ್ದೇಶಕ ಪ್ರೇಮ್ ಅವರೇ ಹಿನ್ನೆಲೆ ಗಾಯನ ನೀಡಿದ್ದಾರೆ. 

ಅರ್ಜುನ್ ಜನ್ಯ ಸಂಗೀತ ನೀಡಿದ್ದು,  ಈ ಹಾಡಿನ ಸಂಯೋಜನೆಗಾಗಿ  ಸುಮಾರು 18 ಲಕ್ಷ ರು  ಖರ್ಚು ಮಾಡಲಾಗಿದೆ.  ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗಲಿದೆ, ಆದರೆ ಇನ್ನೂ ರಿಲೀಸ್ ಡೇಟ್ ಬಗ್ಗೆ ನಿರ್ಧರಿಸಿಲ್ಲ ಎಂದು ಪ್ರೇಮ್ ಹೇಳಿದ್ದಾರೆ. 

ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಸಂಸ್ಥೆ ಏಕ್ ಲವ್ ಯಾ ಸಿನಿಮಾ ನಿರ್ಮಾಣ ಮಾಡುತ್ತಿದ್ದು,  ರೇಷ್ಮಾ ನಾಣಯ್ಯ ಮತ್ತು ರಚಿತಾ ರಾಮ್ ನಟಿಸಿದ್ದಾರೆ,  ನೈಜ ಕಥೆ ಆಧಾರಿತ ಸಿನಿಮಾ ಇದಾಗಿದ್ದು, ನಟಿ ರಕ್ಷಿತಾ  ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

ತ್ರಿಬಲ್ ರೈಡಿಂಗ್: ಚಂದನ್ ಶೆಟ್ಟಿ ಹಾಡಿಗೆ ಮೂವರು ನಾಯಕಿಯರೊಂದಿಗೆ ಗೋಲ್ಡನ್ ಸ್ಟಾರ್ ಹೆಜ್ಜೆ

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಹಾಗೂ ಸ್ಯಾಂಡಲ್ ವುಡ್ ಹಿರಿಯ ನಟಿ ಪ್ರತಿಮಾದೇವಿ ಶಂಕರ್ ಸಿಂಗ್ ಅವರು ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
 
ಇಂದು ಮಧ್ಯಾಹ್ನ 2:30ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಅಂತಿಮ ವಿಧಿ ವಿಧಾನಗಳು ನಾಳೆ ಮಧ್ಯಾಹ್ನ ಮೈಸೂರಿನಲ್ಲಿ ನೆರವೇರಲಿದೆ ಎಂದು ಅವರ ಪುತ್ರಿ ವಿಜಯಲಕ್ಷ್ಮೀ ಸಿಂಗ್ ಮಾಹಿತಿ ನೀಡಿದ್ದಾರೆ.

ಖ್ಯಾತ ನಿರ್ಮಾಪಕ ಶಂಕರ್ ಸಿಂಗ್ ಅವರ ಪತ್ನಿಯಾಗಿದ್ದ ಪ್ರತಿಮಾದೇವಿ ಅವರಿಗೆ ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜೈರಾಜ್ ಸಿಂಗ್, ನಟಿ ವಿಜಯ ಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ವರು ಮಕ್ಕಳು.

1932 ಏಪ್ರಿಲ್ 9 ರಂದು ಜನಿಸಿದ ಪ್ರತಿಮಾದೇವಿ 1947ರಲ್ಲಿ ಕೃಷ್ಣಲೀಲಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. “ಜಗನ್ಮೋಹಿನಿ” ಚಿತ್ರದ ಪಾತ್ರ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ನಾಗಕನ್ನಿಕ, ರಾಮ ಶ್ಯಾಮ ಭಾಮ ಸೇರಿದಂತೆ ಸುಮಾರು 60 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Cinema

'ಶ್ರೀಕೃಷ್ಣ@Gmail.com' ಸಿನಿಮಾದಲ್ಲಿ ರಿಷಬ್ ಶೆಟ್ಟಿ ವಿಶೇಷ ಪಾತ್ರ!

ನಾಗಶೇಖರ್ ನಿರ್ದೇಶನದ  ಶ್ರೀಕೃಷ್ಣ@Gmail.com ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಲವ್ ಮಾಕ್ಟೇಲ್ ಹೀರೋ ಕೃಷ್ಣ ಮತ್ತು ಭಾವನಾ ಹಾಗೂ ದತ್ತಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

 ಶ್ರೀಕೃಷ್ಣ@Gmail.com ಮತ್ತು  ಮೊಟ್ಟ ಮೊದಲ ಬಾರಿಗೆ ನಾಗಶೇಖರ್ ತೆಲಗು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.  ಕನ್ನಡದ  ಶ್ರೀಕೃಷ್ಣ@Gmail.com ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸುತ್ತಿದ್ದು ಏಪ್ರಿಲ್ 15 ರಂದು ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಇದೊಂದು ರೋಮ್ಯಾಂಟಿಕ್ ಸಿನಿಮಾವಾಗಿದ್ದು ಅತ್ಯದ್ಭುತ ಕಥೆ ಹೊಂದಿದೆ, ಭಾವನಾ ವಕೀಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. 

ಪ್ರಿತಂ ಗುಬ್ಬಿ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

ಸದ್ಯ ರಿಷಬ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಜೂನ್ ತಿಂಗಳಲ್ಲಿ ಬೆಲ್ ಬಾಟಮ್-2 ಸಿನಿಮಾ ಕೂಡ ಶೂಟಿಂಗ್ ಆರಂಭವಾಗಲಿದೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More

Categories
Sports

ಹಾಕಿ: ಭಾರತದ ಗೆಲುವಿನ ಆರಂಭ

ಬ್ಯೂನಸ್‌ ಐರೆಸ್ : ಭಾರತದ ಹಾಕಿ ಪಡೆ ತನ್ನ ಆರ್ಜೆಂಟೀನಾ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಆತಿಥೇಯ ತಂಡವನ್ನು 4-3 ಗೋಲುಗಳಿಂದ ಮಗುಚಿದೆ.

ಭಾರತದ ಪರ ನೀಲಕಂಠ ಶರ್ಮ (16ನೇ ನಿಮಿಷ), ಹರ್ಮನ್‌ಪ್ರೀತ್‌ ಸಿಂಗ್‌ (28ನೇ ನಿಮಿಷ), ರೂಪಿಂದರ್‌ ಪಾಲ್‌ ಸಿಂಗ್‌ (33ನೇ ನಿಮಿಷ) ಮತ್ತು ವರುಣ್‌ ಕುಮಾರ್‌ (47ನೇ ನಿಮಿಷ) ಗೋಲು ಬಾರಿಸಿದರು.

3ನೇ ಕ್ವಾರ್ಟರ್‌ನಲ್ಲಿ ಆರ್ಜೆಂಟೀನಾ ಬಿರುಸಿನ ಆಟಕ್ಕಿಳಿದರೂ ಲಾಭವಾಗಲಿಲ್ಲ.

ಇದನ್ನೂ ಓದಿ :ಸುಬ್ರಹ್ಮಣ್ಯ : ಕೆದಿಲ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ಆತಂಕದಲ್ಲಿ ಸ್ಥಳೀಯರು

ಪಾಕಿಸ್ಥಾನಕ್ಕೆ ಏಕದಿನ ಸರಣಿ
ಸೆಂಚುರಿಯನ್: ದ. ಆಫ್ರಿಕಾವನ್ನು 28 ರನ್ನುಗಳಿಂದ ಮಣಿಸಿದ ಪಾಕಿಸ್ಥಾನ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು. ಫ‌ಕಾರ್‌ ಜಮಾನ್‌ ಅವರ ಸತತ 2ನೇ ಶತಕ (101) ನೆರವಿನಿಂದ ಪಾಕ್‌ 7 ವಿಕೆಟಿಗೆ 320 ರನ್‌ ಪೇರಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 49.3 ಓವರ್‌ಗಳಲ್ಲಿ 292ಕ್ಕೆ ಆಲೌಟ್‌ ಆಯಿತು.

ಕ್ರೀಡೆ – Udayavani – ಉದಯವಾಣಿ
Read More

Categories
Health

ಕಡಿಮೆ ಸಮಯದಲ್ಲಿ ಬೊಜ್ಜು ಕರಗಿಸಲು ಈ ಆಹಾರಗಳನ್ನು ಸೇವಿಸಿ!

ಈಗಿನ ಯುವ ಜನತೆಯ ಒಂದು ಬಹುದೊಡ್ಡ ಸಮಸ್ಯೆ ಅಂದರೆ ಬೊಜ್ಜನ್ನು ಕರಗಿಸಿಕೊಳ್ಳುವುದು. ತಾವು ತುಂಬಾ ದಪ್ಪ ಇದ್ದು ನೋಡುಗರು ನಮ್ಮನ್ನು ನೋಡಿ ಅಣಕಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸಣ್ಣ ಆಗಲು ಬಯಸುತ್ತಾರೆ. ಇದಕ್ಕಾಗಿ ಏನೇನೋ ಚಿಕಿತ್ಸೆಯನ್ನು ಪಡೆಯುತ್ತಾರೆ. ಅಲ್ಲದೆ ಮಾತ್ರೆಗಳನ್ನು ತಿನ್ನುತ್ತಾರೆ. ಆದ್ರೆ ದೇಹ ತೂಕವನ್ನು ನೈಸರ್ಗಿಕವಾಗಿ ಸಿಗುವ ಆಹಾರದಿಂದಲೂ ಕರಗಿಸಬಹುದು ಎಂಬುದನ್ನು ತಿಳಿಯಬೇಕು. ಇನ್ನು ನಮಗೆ ತಿಳಿಯದೇ ನಮ್ಮ ಬೊಜ್ಜು ಹೆಚ್ಚಾಗುವಂತಹ ಆಹಾರಗಳನ್ನು ಸೇವಿಸುತ್ತೇವೆ. ಇವೆಲ್ಲವನ್ನು ಕಡಿಮೆ ಮಾಡಬೇಕು. ಹಾಗಾದ್ರೆ ಯಾವ ನೈಸರ್ಗಿಕ ಆಹಾರ ನಮ್ಮ ದೇಹದ ತೂಕವನ್ನು ಅಥ‍ವಾ ಬೊಜ್ಜನ್ನು ಕರಗಿಸುತ್ತೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಿಹಿ ಆಲೂಗಡ್ಡೆ:

ನಮ್ಮ ದೇಹ ತೂಕವನ್ನು ಕಡಿಮೆ ಮಾಡುವವಲ್ಲಿ ನಾವು ಸೇವಿಸುವ ಕಾರ್ಬೋಹೈಡ್ರೇಟ್ ಗಳ ಪಾತ್ರವೂ ಮುಖ್ಯವಾಗಿರುತ್ತದೆ. ಸಿಹಿ ಆಲೂಗಡ್ಡೆಯಲ್ಲಿ ಹೆಚ್ಚು ಕಾರ್ಬೋಹೈಡ್ರೆಡ್ ಪ್ರಮಾಣ ಮತ್ತು ಫೈಬರ್ ಅಂಶವೂ ಇದೆ. ಅಲ್ಲದೆ ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿದ ತಿನಿಸು ಇದಾಗಿದೆ. ಇನ್ನು ಮೈಕ್ರೋನ್ಯೂಟ್ರೀಷಿಯನ್ ಅಂಶಗಳನ್ನು ಹೊಂದಿದೆ. ಇದ್ರಿಂದ ಆರೋಗ್ಯಕರವಾಗಿ ದೇಹವನ್ನು ಸಣ್ಣ ಮಾಡಲು ಈ ತರಕಾರಿ ಬಹಳ ಸಹಾಯವಾಗುತ್ತದೆ.

ಸೇಬು :

ದೇಹ ಕರಗಿಸಲು ಸೇಬು ಬಹಳ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತದೆ. ತಜ್ಞರು ಹೇಳುವ ಪ್ರಕಾರ ಸೇಬಿನಲ್ಲಿ ಹೆಚ್ಚು ಕಾರ್ಬೋಹೈಡ್ರೆಡ್ ಪ್ರಮಾಣ ಇದ್ದು, ಶೇ 86ರಷ್ಟು ನೀರಿನ ಅಂಶ ಇರುತ್ತದೆ. ಇದರಿಂದ ದೇಹದ ನೀರಿನ ಅಂಶ ಹೆಚ್ಚಿಸಲು ಮತ್ತು ಜೀರ್ಣ ಕ್ರಿಯೆಯನ್ನು ಸುಲಭ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶವು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಓಟ್ಸ್ :

ಸಾಮಾನ್ಯವಾಗಿ ಓಟ್ಸ್ ಅನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ. ಇದು ಕೂಡ ದೇಹ ಸಣ್ಣ ಆಗಲು ತುಂಬಾ ಸಹಾಯ ಮಾಡುತ್ತದೆ. ಕಾರ್ಬೋಹೈಡ್ರೆಡ್ ಪ್ರಮಾಣ ಹೆಚ್ಚಿರುವ ಆಹಾರಗಳ ಪೈಕಿ ಈ ಓಟ್ಸ್ ಕೂಡ ಒಂದು. ಸಕ್ಕರೆ ಅಥವಾ ಉಪ್ಪನ್ನು ಬೆರೆಸಿ ಓಟ್ಸ್ ತಿನ್ನುವ ಅಭ್ಯಾಸ ಜನರಲ್ಲಿ ಇದೆ. ಆದ್ರೆ ತಜ್ಞರು ಹೇಳುವ ಪ್ರಕಾರ, ಇದನ್ನು ಸಕ್ಕರೆ ಇಲ್ಲದೆ ಸೇವನೆ ಮಾಡಿದರೆ ಒಳ್ಳೆಯದು.

ಬ್ರೌನ್ ರೈಸ್ (ಕುಚಲಕ್ಕಿ) :

ಸಾಮಾನ್ಯವಾಗಿ ಕರಾವಳಿ ಪ್ರದೇಶದ ಜನರು ಹೆಚ್ಚು ಬಳಸುವ ಕುಚಲಕ್ಕಿ ಅನ್ನ ಕೂಡ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕಾರಿಯಾಗಿದೆ. ನಿಮಗೆ ಆಶ್ಚರ್ಯ ಆಗಬಹುದು, ಅನ್ನ ತಿಂದರೆ ದಪ್ಪ ಆಗಲ್ವಾ ಅಂತಾ? ಆದ್ರೆ ಈ ಬ್ರೌನ್ ರೈಸ್ ತೂಕ ಇಳಿಸಿದಲು ಉತ್ತಮ ಆಹಾರ. ಜಪಾನಿನಲ್ಲಿ 430 ಜನರ ಮೇಲೆ ಪ್ರಯೋಗ ಮಾಡಿ ತಜ್ಞರು ಅಭಿಪ್ರಾಯಕ್ಕೆ ಬಂದಿದ್ದಾರೆ. ಅಲ್ಲದೆ ಇದರಲ್ಲಿ ಫೈಬರ್ ಅಂಶ ಕೂಡ ಇದೆ.

ಗೋಧಿ ಬ್ರೆಡ್ :

ಗೋಧಿ ಪದಾರ್ಥಗಳು ದೇಹದ ತೂಕ ಇಳಿಸುವಲ್ಲಿ ಸಹಾಯಕವಾಗುವುದರ ಜೊತೆದೆ ದೇಹದ ಕಾರ್ಬ್ರೋಹೈಡ್ರೆಡ್ ಪ್ರಮಾಣ ಹೆಚ್ಚಿಸುತ್ತದೆ. ಇನ್ನು ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗುವ ಬೊಜ್ಜನ್ನು ಕರಗಿಸಲೂ ಈ ಗೋಧಿ ಬ್ರೆಡ್ ತುಂಬಾ ಸಹಾಯವಾಗುತ್ತದೆ.

ಆರೋಗ್ಯ – Udayavani – ಉದಯವಾಣಿ
Read More

Categories
Health

ಹೃದಯದ ಸಮಸ್ಥಿತಿಗೆ ದಾಲ್ಚಿನ್ನಿ ಬೆಸ್ಟ್  

ಪ್ರತಿ ಅಡುಗೆಮನೆಯಲ್ಲಿ ಕಂಡುಬರುವ ಅಡುಗೆ ಪದಾರ್ಥ ದಾಲ್ಚಿನ್ನಿ ಅನೇಕ ಆರೋಗ್ಯ ಪ್ರಯೋಜನ ಗುಣಗಳನ್ನು  ಹೊಂದಿರುತ್ತವೆ.

ಒಣ ದಾಲ್ಚಿನ್ನಿ ಎಲೆಗಳು ಮತ್ತು ತೊಗಟೆ ಮಸಾಲೆಗಳ ರೂಪದಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ದಾಲ್ಚಿನ್ನಿ ಬಳಕೆಯು ರಕ್ತವನ್ನು ಸ್ವಚ್ಛಗೊಳಿಸುತ್ತದೆ, ತೂಕವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅನೇಕ ರೋಗಗಳಿಂದ ದೂರವಿರಿಸುತ್ತದೆ. ಇಷ್ಟೇ ಅಲ್ಲದೆ ಮೈಗ್ರೇನ್​ನಂತಹ ತಲೆನೋವಿಗೂ ಪರಿಹಾರವನ್ನು ನೀಡುತ್ತದೆ. ಇದಲ್ಲದೆ ಇನ್ನೂ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ದಾಲ್ಚಿನ್ನಿ ಮೂಲಕ ಪಡೆಯಬಹುದಾಗಿದೆ.

ಜೀರ್ಣ ಸಮಸ್ಯೆಗೆ ಪರಿಹಾರ ದಾಲ್ಚಿನ್ನಿ :

ಅತಿಯಾದ ಾಹಾರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು ಕಂಡು ಬರುತ್ತಿದ್ದರೆ, ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ತೂಕ ಳಿಸಿಕೊಳ್ಳಲು ದಾಲ್ಚಿನ್ನಿಉ ಬೆಸ್ಟ್ :

ದಾಲ್ಚಿನ್ನಿ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಉಪಾಹಾರಕ್ಕೆ ಅರ್ಧ ಘಂಟೆಯ ಮೊದಲು ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುದಿಸಿ. ನಂತರ ಅದನ್ನು ಒಂದು ಕಪ್‌ ನಲ್ಲಿ ಹಾಕಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದನ್ನು ಕೆಲವು ದಿನಗಳ ಕಾಲ ಅಭ್ಯಾಸ ಮಾಡಿಕೊಂಡಲ್ಲಿ ಹಂತ ಹಂತವಾಗಿ ನಿಮ್ಮ ತೂಕ ಇಳಿಯಲು ಸಹಾಯ ಮಾಡುತ್ತದೆ.

ಹೃದಯದ ಸಮಸ್ಥಿತಿಗೆ ದಾಲ್ಚಿನ್ನಿ ಬಳಸಿ :

ದಾಲ್ಚಿನ್ನಿ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದಕ್ಕಾಗಿ ದಾಲ್ಚಿನ್ನಿ ಪುಡಿ ಮತ್ತು ಜೇನು ಪೇಸ್ಟ್ ತಯಾರಿಸಿ ಅಕ್ಕಿ ರೊಟ್ಟಿ ಜೊತೆ ತಿನ್ನಿರಿ. ಇದು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಾಗೆಯೇ ಇದು ಹೃದಯ ಸಂಬಂಧಿತ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹೃದಯದ ಸಮಸ್ಯೆಗೆ ದಾಲ್ಷಿನ್ನಿ ಅತ್ಯಂತ ಪ್ರಯೋಜನಕಾರಿ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.

ಆರೋಗ್ಯ – Udayavani – ಉದಯವಾಣಿ
Read More

Categories
Health

ಕಸ ಎಂದು ಎಸೆಯಬೇಡಿ : ಈರುಳ್ಳಿ ಸಿಪ್ಪೆಯಲ್ಲಿದೆ ಆರೋಗ್ಯದ ಗುಟ್ಟು

ಪ್ರತಿನಿತ್ಯ ಅಡುಗೆಗೆ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಇಲ್ಲದಿದ್ದರೆ ರುಚಿಯಾದ ತಿಂಡಿ ಪದಾರ್ಥಗಳನ್ನು ಸಿದ್ಧಪಡಿಸುವುದು ಕಷ್ಟ. ರುಚಿಯಾದ, ಸ್ವಾದಿಷ್ಟವಾದ ಅಡುಗೆ ತಯಾರಾಗಬೇಕಾದರೆ ಈರುಳ್ಳಿ ಬಹುಮುಖ್ಯ.

ಮಾರುಕಟ್ಟೆಯಿಂದ ತರುವ ಈರುಳ್ಳಿ ಕಟ್ ಮಾಡೋವಾಗ ಅದರ ಸಿಪ್ಪೆ ತೆಗೆದು ಹೊರಗೆ ಎಸೆಯುತ್ತೇವೆ. ಉಪಯೋಗಕ್ಕೆ ಬಾರದ ಕಸ ಎಂದು ಪರಿಗಣಿಸುತ್ತೇವೆ. ಆದರೆ, ಯಾವುದಕ್ಕೂ ಪ್ರಯೋನಕ್ಕಿಲ್ಲ ಎಂದು ನಾವು ಭಾವಿಸುವ ಈರುಳ್ಳಿ ಸಿಪ್ಪೆಯಲ್ಲಿಯೂ ಕೂಡ ಕೆಲವು ಆರೋಗ್ಯಕಾರಿ ಗುಣಗಳಿವೆ.

ಹೌದು, ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ನಾವು ಅಡುಗೆಗೆ ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ನಾವು ಎಸೆಯುತ್ತೇವೆ. ಆದರೆ ಈ ಸಿಪ್ಪೆಗಳಿಂದಲೂ ಕೂಡ ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಯಾವುದಕ್ಕೆಲ್ಲ ಉಪಯೋಗ ?

ಗಂಟಲು ನೋವು ನಿವಾರಣೆ :

ನಿಮಗೆ ಗಂಟಲು ನೋವು ಕಾಡುತ್ತಿದ್ದರೆ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಸೇವನೆ ಮಾಡಿ. ಇದರಲ್ಲಿ ಉರಿಯೂತ ಶಮನ ಮಾಡುವ ಗುಣಗಳಿರುವುದರಿಂದ ಗಂಟಲು ನೋವು ಬೇಗ ಮಾಯವಾಗುತ್ತದೆ.

ತಲೆಕೂದಲು ಹೊಟ್ಟು ನಿವಾರಣೆ :

ಕೂದಲನ್ನು ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿದ ನೀರಿನಲ್ಲಿ ತೊಳೆಯಿರಿ. ಇದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯುವಂತೆ ಸಹಕರಿಸುತ್ತದೆ.

ಸ್ನಾಯು ಸೆಳೆತ ಮಾಯ :

ಕಾಲು ನೋವು ಮತ್ತು ಸ್ನಾಯುಗಳಲ್ಲಿ ನೋವಿದ್ದರೆ ರಾತ್ರಿ ಮಲಗುವ ಮುನ್ನ ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿಯಿರಿ. ಇದನ್ನು ಒಂದು ವಾರ ಮಾಡಿ ಖಂಡಿತವಾಗಿಯೂ ಕಾಲು ನೋವು ಹಾಗೂ ಸ್ನಾಯು ಸೆಳೆತಳಿದ್ದರೆ ನಿವಾರಣೆಯಾಗುತ್ತವೆ.

ಆರೋಗ್ಯ – Udayavani – ಉದಯವಾಣಿ
Read More

Categories
Tech

ಶವೋಮಿಯ ‘Mi Band 6’ ಸ್ಮಾರ್ಟ್ ವಾಚ್ : ಇದರ ವಿಶೇಷತೆ ಏನು ?  

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಶವೋಮಿ ಇದೀಗ ಮತ್ತೊಂದು ಹೊಸ ಪ್ರಾಡಕ್ಟ್ ಪರಿಚಯಿಸಿದೆ. ಶವೋಮಿ ಇದೀಗ ಲೆಟೆಸ್ಟ್ ಫೀಚರ್ ಹೊಂದಿರುವ ಎಂಐ ಸ್ಮಾರ್ಟ್ ಬ್ಯಾಂಡ್ 6 ( ಸ್ಮಾರ್ಟ್ ವಾಚ್ ) ಸಿದ್ಧಪಡಿಸಿದೆ. ಮಾರ್ಚ್ 29 ರಂದು ಚೀನಾದಲ್ಲಿ ಸ್ಮಾರ್ಟ್ ಬ್ಯಾಂಡ್ 6 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಏಪ್ರಿಲ್ ಮೊದಲ ವಾರದ ಅವಧಿಯಲ್ಲಿ ಭಾರತದ ಮಾರುಕಟ್ಟೆಗೂ ಸ್ಮಾರ್ಟ್ ಬ್ಯಾಂಡ್ 6 ಆಗಮಿಸುವ ಸಾಧ್ಯತೆ ಇದೆ.

ಎಂಐ ಸ್ಮಾರ್ಟ್ ಬ್ಯಾಂಡ್ 6 ವಿಶೇಷತೆ ಏನು ?

ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‍ ಗಳ ಸ್ಟಾರ್ಟ್ ವಾಚ್‍ ಗಳು ಲಭ್ಯ ಇವೆ. ಆದರೆ, ಎಂಐ ಪರಿಚಯಿಸಿರುವ ಸ್ಮಾರ್ಟ್ ಬ್ಯಾಂಡ್ ಇವೆಲ್ಲವುಗಳಿಗಿಂತ ವಿಭಿನ್ನವಾಗಿದೆ ಎಂದು ಶವೋಮಿ ಹೇಳಿಕೊಂಡಿದೆ.

ಈ ಬ್ಯಾಂಡ್ ಫಿಟ್‌ನೆಸ್ ಟ್ರ್ಯಾಕರ್ ಹೊಸ ವೈಶಿಷ್ಟ್ಯಗಳು ಮತ್ತು ಅಪ್ಡೇಟ್ ಗಳನ್ನು ಒಳಗೊಂಡಿದೆ. ಎಂಐ ಬ್ಯಾಂಡ್ ಫಿಟ್ ಆ್ಯಪ್ ಹೊಂದಿದೆ. ಇದು ವಾಚ್ ಧರಿಸಿದ ವ್ಯಕ್ತಿಯ ನಿದ್ದೆ ಸಮಯದಲ್ಲಿಯ ಉಸಿರಾಟದ ಏರಿಳಿತ ಹಾಗೂ ಅದರ ಸಂಖ್ಯೆಯನ್ನು ತಿಳಿಸಲಿದೆ. ಅಂದರೆ ನಿದ್ರಾವಸ್ಥೆಯಲ್ಲಿ ನೀವು ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತೀರಿ ಎನ್ನುವ ಮಾಹಿತಿ ಸಂಗ್ರಹಿಸಲಿದೆ. ಅದೇ ರೀತಿ ನಿಮ್ಮ ಹೃದಯ ಬಡಿತದ ದರವನ್ನು ತಿಳಿಸಲಿದೆ. ಈ ವಾಚ್‍ನಲ್ಲಿ ಬ್ಯಾಂಡ್ 5 ರಂತೆ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಬಲ್ ಇರಲಿದೆ .

ಇದು ಉತ್ತಮ ಟ್ರ್ಯಾಕಿಂಗ್ ಸೌಲಭ್ಯವನ್ನು ಹೊಂದಿದೆ. ಮತ್ತೊಂದು ವಿಶೇಷವೆಂದರೆ Mi Band 6 ರಲ್ಲಿ SOP 2 ಮಾನಿಟರಿಂಗ್ ಒಳಗೊಂಡಿದೆ.

ಬೆಲೆ ಎಷ್ಟು ?

ಇನ್ನು ಚೀನಾದಲ್ಲಿ ಎಂಐ ಬ್ಯಾಂಡ್ 6 ಬೆಲೆ 2500 ರೂ. ಇದೆ. ಭಾರತದಲ್ಲಿ ಇದರ ಬೆಲೆ ಎಷ್ಟಿರಬಹುದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

 

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Categories
Health

ಪಲಾವ್ ಎಲೆ ಸೇವನೆಯಿಂದಾಗುವ ಪ್ರಯೋಜನಗಳೇನು ?

ಪಲಾವ್ ಎಲೆಗಳು ಪರಿಮಳ ಹೆಚ್ಚಿಸುತ್ತದೆ. ಈ ಉದ್ದೇಶದಿಂದಲೇ ಪಲಾವ್ ಮಾಡಲು ಈ ಎಲೆಗಳು ಬೇಕೇ ಬೇಕು. ಮತ್ತೊಂದು ಮಹತ್ವದ ವಿಷಯ ಏನಂದರೆ ಪರಿಮಳಕ್ಕಾಗಿ ಬಳಸುವ ಪಲಾವ್ ಎಲೆಗಳಲ್ಲಿ ಸಾಕಷ್ಟು ಔಷಧಿಯ ಗುಣಗಳು ಇವೆ.

ಹೌದು, ಪಲಾವ್ ಎಲೆಗಳ ಸೇವನೆಯಿಂದ ಬಹುಪ್ರಯೋಜನಗಳಿವೆ. ಮುಖ್ಯವಾಗಿ ಮೈಗ್ರೇನ್ ಸಮಸ್ಯೆ ನಿವಾರಣೆಯಾಗುತ್ತದೆ. ಮಧುಮೇಹ, ತಲೆನೋವು, ಮೂಗಿನಲ್ಲಾದ ಅಲರ್ಜಿ, ನೆಗಡಿ, ಕೆಮ್ಮು, ಬ್ಯಾಕ್ಟೀರಿಯಾ, ವೈರಸ್ ಸೋಂಕು ಬಹಳಷ್ಟು ಸಮಸ್ಯೆ ದೂರವಾಗುತ್ತದೆ.

ಪಲಾವ್ ಎಲೆ ಸೇವನೆಯಿಂದಾಗು ಆರೋಗ್ಯಗಾರಿ ಪ್ರಯೋಜನಗಳು ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕ್ಯಾನ್ಸರ್ ಕೋಶಗಳನ್ನು ನಾಶ ಪಡಿಸುತ್ತದೆ :

ಪಲಾವ್ ಎಲೆಗಳಲ್ಲಿ ಇರುವಂತಹ ಔಷಧಿ ಗುಣ ಕ್ಯಾನ್ಸರ್ ಬರಲು ಕಾರಣವಾಗುವ ಕೋಶಗಳನ್ನು ನಾಶ ಮಾಡುತ್ತದೆ.

ಸಕ್ಕರೆ ಕಾಯಿಲೆ ಶಮನ :

ತಜ್ಞರ ಅಧ್ಯಯನದ ಪ್ರಕಾರ 1 ರಿಂದ 3 ಗ್ರಾಂ ಪಲಾವ್ ಎಲೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಕಂಟ್ರೋಲ್‍ ನಲ್ಲಿರುತ್ತದೆಯಂತೆ.

ಗಾಯ ಮಾಯ :

ಪಲಾವ್‍ ಗೆ ಬಳಸುವ ಎಲೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ನೋವು ನಿವಾರಕ ಗುಣಗಳು ನಿಮ್ಮ ದೇಹದ ಮೇಲಾಗಿರುವ ಗಾಯವನ್ನು ನಿವಾರಿಸುತ್ತದೆ.

ಕಿಡ್ನಿ ಸ್ಟೋನ್‍ಗೆ ಮದ್ದು :

ಪಲಾವ್ ಎಲೆಯಲ್ಲಿರುವ ಸತ್ವ ಮೂತ್ರಪಿಂಡದಲ್ಲಿ ಕಲ್ಲು ( ಕಿಡ್ನಿ ಸ್ಟೋನ್) ಉಂಟಾಗದಂತೆ ತಡೆಯುತ್ತದೆ.

ಮಿದುಳು ಸಂಬಂಧಿ ಸಮಸ್ಯೆ ನಿವಾರಣೆ :

ನಿಮ್ಮ ಮಿದುಳಿನ ಸಮಸ್ಯೆ ಅಥವಾ ನಿಮ್ಮ ಮೂಡ್ ಸರಿಯಾಗಿ ಇಲ್ಲದಿದ್ದರೆ ಪಲಾವ್ ಎಲೆಯನ್ನು ಸ್ವಲ್ಪ ಸುಟ್ಟು ಅದರ ಹೊಗೆಯನ್ನು ಮನೆಯಲ್ಲ ಹರಡಿಸುವುದರಿಂದ ನಿಮ್ಮ ಮೂಡ್ ಸರಿಯಾಗುವುದರ ಜತೆಗೆ ನಿಮ್ಮ ಮಿದುಳಿನ ಯಾವುದೇ ಸಮಸ್ಯೆ ನಿವಾರಣೆಯಾಗಲಿದೆ.

ಇನ್ನು ಪಲಾವ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೇವಿಸಿ. ಇದರಲ್ಲಿ ಖನಿಜಗಳು, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಹೇರಳವಾಗಿದೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಿ ½ ಚಮಚ ಅಥವಾ ½ ಎಲೆಗಿಂತ ಅಧಿಕವಾಗಿ ಸೇವಿಸಿದರೆ ಅತಿಸಾರ ಅಥವಾ ವಾಂತಿಗೆ ಕಾರಣವಾಗಬಹುದು. ಹಾಗೇ ಗರ್ಭಿಣಿಯರು, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಇದನ್ನು ತಪ್ಪಿಸಬೇಕು.

ಆರೋಗ್ಯ – Udayavani – ಉದಯವಾಣಿ
Read More