SSLC ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿಕೊಟ್ಟ ಸರ್ಕಾರ.. ಊರುಗಳಲ್ಲೇ ಪರೀಕ್ಷೆ

ಬೆಂಗಳೂರು: ಪರೀಕ್ಷೆ ಬರೆಯುವ ಟೆನ್ಷನ್​​ನಲ್ಲಿರುವ SSLC ವಿದ್ಯಾರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರ ಊರುಗಳಲ್ಲೇ ಪರೀಕ್ಷೆ ಬರೆಯಲು ಎಸ್​ಎಸ್​ಎಲ್​​ಸಿ ಬೋರ್ಡ್ ಅವಕಾಶ ಮಾಡಿಕೊಟ್ಟಿದೆ.

ವಿದ್ಯಾರ್ಥಿಗಳೇ ಆಯ್ಕೆ ಮಾಡುವ ಕೇಂದ್ರ, ಆಸನದ ವ್ಯವಸ್ಥೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ರಾಜ್ಯ ಶಿಕ್ಷಣ ಇಲಾಖೆ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪರೀಕ್ಷೆ ಬರೆಸಲು ನಿರ್ಧರಿಸಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೇರೆ ಬೇರೆ ಕೇಂದ್ರಗಳಿಗೆ ಹೋಗಿ ಪರೀಕ್ಷೆಗಳನ್ನ ಬರೆಯೋದು ವಿದ್ಯಾರ್ಥಿಗಳಿಗೆ ಕಷ್ಟವಾಗಿತ್ತು. ಕೊರೊನಾ ಭಯದ ನಡುವೆ ಹೆಂಗಪ್ಪಾ ಪರೀಕ್ಷೆ ಬರೆಯೋದು ಅಂತಾ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು. ಇದೀಗ ವಿದ್ಯಾರ್ಥಿಗಳ ಟೆನ್ಷನ್​​ಗೆ ಸರ್ಕಾರ ಮುಕ್ತಿ ಹಾಡಿದೆ.

ಇದನ್ನೂ ಓದಿ: SSLC ಪರೀಕ್ಷಾ ವಿಧಾನದ ಬಗ್ಗೆ ಗೈಡ್​ಲೈನ್ಸ್​ ಪ್ರಕಟ; ಹೇಗೆ ನಡೆಯುತ್ತೆ ಎಕ್ಸಾಂ? 

The post SSLC ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿಕೊಟ್ಟ ಸರ್ಕಾರ.. ಊರುಗಳಲ್ಲೇ ಪರೀಕ್ಷೆ appeared first on News First Kannada.

Source: newsfirstlive.com

Source link

ಹೈಕೋರ್ಟ್ ನೋಟಿಸ್ ಪಡೆಯದ ರಮೇಶ್ ಜಾರಕಿಹೊಳಿ – ವಿಚಾರಣೆ ಬಳಿಕ ನೋಟಿಸ್ ರಿಸೀವ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿ ಎಸ್‍ಐಟಿ ಬದ್ಧತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿ ಶ್ರೀ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

ಹೈಕೋರ್ಟ್ ನಿಂದ ನೋಟಿಸ್ ಪಡೆದು ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ಹಾಜರಾಗಿದ್ದರು. ಆದ್ರೆ ಹೈಕೋರ್ಟ್ ನೋಟಿಸ್ ಈವರೆಗೂ ರಮೇಶ್ ಜಾರಕಿಹೊಳಿ ಪಡೆದಿಲ್ಲ. ಹೈಕೋರ್ಟ್ ಜಾರಿ ಮಾಡಿದ ಹ್ಯಾಂಡ್ ಸಮನ್ಸ್ ಪಡೆಯಲು ರಮೇಶ್ ಜಾರಕಿಹೊಳಿ ನಿರಾಕರಿಸಿದ ವಿಷಯದೆಡೆ ನ್ಯಾಯಾಲಯದ ಗಮನ ಸೆಳೆದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ರಮೇಶ್ ಜಾರಕಿಹೊಳಿ ಅವರ ಪರವಾಗಿ ಕಾಲಾವಕಾಶ ಕೇಳಿದ ಎಸ್‍ಐಟಿ ಪರ ನ್ಯಾಯವಾದಿ ಪ್ರಸನ್ನಕುಮಾರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಎಸ್‍ಐಟಿ ಪರ ನ್ಯಾಯವಾದಿಗಳು ರಮೇಶ್ ಜಾರಕಿಹೊಳಿ ಪರವಲ್ಲ ಎಂದು ಪ್ರಸನ್ನಕುಮಾರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತೆ ಪರ ವಕೀಲ ಸಂಕೇತ್ ಏಣಗಿ, ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ರಚಿತವಾದ ವಿಶೇಷ ಪೀಠಕ್ಕೆ ಈ ಪ್ರಕರಣವನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ರು.

ಸಂತ್ರಸ್ತೆ ಪರ ವಕೀಲ ಸಂಕೇತ ಏಣಗಿ ಮನವಿ ಪುರಸ್ಕರಿಸಿ, ಪ್ರಕರಣವನ್ನು ವಿಶೇಷ ಪೀಠಕ್ಕೆ ವರ್ಗಾವಣೆ ಮಾಡಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ರವರ ಏಕ ಸದಸ್ಯ ಪೀಠ, ಪ್ರಕರಣ ವಿಚಾರಣೆಯನ್ನು ಇದೇ ತಿಂಗಳು 23ನೇ ದಿನಾಂಕದಂದು ನಿಗದಿ ಮಾಡಿ ವಿಚಾರಣೆ ಮುಂದೂಡಿದರು.

ಏಕಸದಸ್ಯ ಪೀಠದಲ್ಲಿ ವಿಚಾರಣೆ ಮುಗಿದ ನಂತರ ಧಿಡೀರ್ ಆಗಿ ರಮೇಶ್ ಜಾರಕಿಹೊಳಿ ಕುಟುಂಬ ನೋಟಿಸ್ ಸ್ವೀಕರಿಸಿದೆ. ಜೂನ್ 23ಕ್ಕೆ ಸಂತ್ರಸ್ತೆಯ ಮದ್ಯಂತರ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯಪೀಠದಲ್ಲಿ ನಡೆಯಲಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಕೇಸ್‍ಗೆ ಸಿಕ್ಕಿಲ್ಲ ಮುಕ್ತಿ

The post ಹೈಕೋರ್ಟ್ ನೋಟಿಸ್ ಪಡೆಯದ ರಮೇಶ್ ಜಾರಕಿಹೊಳಿ – ವಿಚಾರಣೆ ಬಳಿಕ ನೋಟಿಸ್ ರಿಸೀವ್ appeared first on Public TV.

Source: publictv.in

Source link

ಶಿವಣ್ಣ ಫ್ಯಾನ್ಸ್​ಗೆ ಇಲ್ಲಿದೆ ಸೂಪರ್​​ ಸುದ್ದಿ​; ಭಜರಂಗಿ-2 ರಿಲೀಸ್​​​ ಯಾವಾಗ ಗೊತ್ತಾ?

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಭಜರಂಗಿ-2. ಲಾಕ್ ಡೌನ್ ಆಗದೆ ಇದ್ದಿದ್ರೇ ಇಷ್ಟೊತ್ತಿಗಾಗಲೇ ಎರಡನೇ ಭಜರಂಗಿ ಸಿನಿಮಾ ಪ್ರೇಕ್ಷಕರ ಮನೆ-ಮನ ತಲುಪಿ ಆಗಿರುತ್ತಿತ್ತು. ಆದ್ರೆ ಲಾಕ್ ಡೌನ್ ಆದ ಕಾರಣ ಭಜರಂಗಿ ಎಡಿಟಿಂಗ್ ಟೇಬಲ್​​ನಲ್ಲೆ ಬೆಚ್ಚಗೆ ಕುಳಿತು ಬಿಟ್ಟಿದೆ.​

ಹಾಗಾದ್ರೆ ಶಿವಣ್ಣನ ನಿರೀಕ್ಷಿತ ಭಜರಂಗಿ-2 ಸಿನಿಮಾದ ಕೆಲಸ ಕಾರ್ಯಗಳು ಎಷ್ಟರ ಮಟ್ಟಿಗೆ ಬಾಕಿ ಇವೆ ಅನ್ನೋದನ್ನ ಕ್ಲಿಯರ್ ಕಟ್​​ಆಗಿ ಹೇಳ್ತಿವಿ ಕೇಳಿ.

ಭಜರಂಗಿ-2 ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಆದ್ರೆ ಗಾಂಧಿನಗರದಲ್ಲಿ ಇನ್ನು 40 ಪರ್ಸೆಂಟ್ ಬಾಕಿ ಇದೆ ಅನ್ನೋ ಟಾಕ್ ಕೇಳಿಬಂದಿತ್ತು. ಆದ್ರೆ ಈ ಬಗ್ಗೆ ನಿರ್ದೇಶಕ ಎ.ಹರ್ಷ ನ್ಯೂಸ್ ಫಸ್ಟ್​ಗೆ ಮಾಹಿತಿ ಕೊಟ್ಟಿದ್ದು ಭಜರಂಗಿ 2 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಪೊಸ್ಟ್ ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದ್ದು 40 ಪರ್ಸೆಂಟ್ ಕೆಲಸ ಬಾಕಿ ಇದೆ. ಮ್ಯಾಜಿಕಲ್​ ಕಂಪೋಸರ್​​ ಅರ್ಜುನ್ ಜನ್ಯ ಸಾರಥ್ಯದಲ್ಲಿ ಡಿಟಿಎಸ್, ರಿರೆಕಾರ್ಡಿಂಗ್ ನಡೆಯುತ್ತಿದೆ.

ಹಾಗಾದ್ರೆ ಯಾವಾಗ ಎರಡನೇ ಭಜರಂಗಿಯ ದರ್ಶನ ಅನ್ನೋ ಪ್ರಶ್ನೆಗೆ ಉತ್ತರ ಆಗಸ್ಟ್ ತಿಂಗಳು. ಶೇಖಡ 100 ಪರಸೆಂಟ್​​ ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಆಗಸ್ಟ್ ತಿಂಗಳನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹನುಮ ಭಕ್ತ ನಿರ್ದೇಶಕ ಎ.ಹರ್ಷ ಮಾಹಿತಿ ಕೊಟ್ಟಿದ್ದಾರೆ. ಶಿವಣ್ಣ, ಭಾವನ, ಶೃತಿ, ಲೋಕಿ ಮುಂತಾದ ಪ್ರತಿಭವಂತ ಕಲಾವಿದರುಳ್ಳ ಭಜರಂಗಿ-2 ಟೀಸರ್​​ ಈಗಾಗಲೇ ನೋಡುಗರನ್ನ ಇಂಪ್ರೇಸ್ ಮಾಡಿದೆ. ಇನೇನಿದ್ರು ಸಿನಿಮಾ ರಿಲೀಸ್ ಆಗಬೇಕು ಜನ-ಮನ ನೋಡಿ ಮೆಚ್ಚಿಕೊಳ್ಳೊದೊಂದೆ ಬಾಕಿ.

The post ಶಿವಣ್ಣ ಫ್ಯಾನ್ಸ್​ಗೆ ಇಲ್ಲಿದೆ ಸೂಪರ್​​ ಸುದ್ದಿ​; ಭಜರಂಗಿ-2 ರಿಲೀಸ್​​​ ಯಾವಾಗ ಗೊತ್ತಾ? appeared first on News First Kannada.

Source: newsfirstlive.com

Source link

ಕಾದು ನಿಂತು ರೈತ ಗೀತೆ ಹಾಡಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಹಕಾರ ಇಲಾಖೆಯ ಸಾಲ ವಿತರಣೆ ಕಾರ್ಯಕ್ರಮದಲ್ಲಿ ರೈತ ಗೀತೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕಾದು ನಿಂತ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಭಾಷಣಕ್ಕೆ ಮುಂದಾದ ಸಿಎಂ ಯಡಿಯೂರಪ್ಪ ಡಯಸ್‍ಗೆ ನಡೆದುಕೊಂಡು ಬರುತ್ತಿದ್ದಂತೆ ರೈತ ಗೀತೆ ಹಾಡ್ತೀರೇನಪ್ಪ ಎಂದು ಹಾಡುಗಾರರನ್ನ ಕೇಳಿದರು.ಮುಖ್ಯಮಂತ್ರಿಗಳ ಅನಿರೀಕ್ಷಿತ ಪ್ರೆಶ್ನೆಯಿಂದ ತಬ್ಬಿಬ್ಬಾದ ಹಾಡುಗಾರರು ಹಾಡ್ತೀವಿ ಸಾರ್ ಎಂದು ಹಾಡಲು ಮುಂದಾದರು. ಇದನ್ನೂ ಓದಿ:ಗಾಳಿ-ಮಳೆಗೆ ಉರುಳುತ್ತಿರುವ ಮರಗಳ ರಕ್ಷಣೆಗೆ ಸರ್ಕಾರದ ಹೊಸ ಪ್ಲ್ಯಾನ್

ಮ್ಯೂಸಿಕ್ ಕಂಪೋಸ್ ತಡವಾದ ಕಾರಣ ಹಾಡಲು ತಡ ಮಾಡಿದರು. ಆಗ ಮತ್ತೆ ಮಾತನಾಡಿದ ಸಿಎಂ ಯಡಿಯೂರಪ್ಪ ಹಾಗೆ ಹಾಡಿ ಪರವಾಗಿಲ್ಲ ಎಂದು ಮ್ಯೂಸಿಕ್ ಇಲ್ಲದೆ ಹಾಡಲು ಸೂಚಿಸಿದರು.

ತಮ್ಮ ಭಾಷಣ ಆರಂಭಿಸಿದೆ ನಿಂತುಕೊಂಡು ರೈತ ಗೀತೆ ಹಾಡಿಸಿದ ಸಿಎಂ ನಿಂತಲ್ಲೆ ರೈತ ಗೀತೆಯನ್ನ ಕೇಳಿಸಿಕೊಂಡರು. ರೈತ ಗೀತೆ ಮುಗಿದ ನಂತರ ತಮ್ಮ ಭಾಷಣವನ್ನ ಸಿಎಂ ಯಡಿಯೂರಪ್ಪ ಆರಂಭಿಸಿದರು.

The post ಕಾದು ನಿಂತು ರೈತ ಗೀತೆ ಹಾಡಿಸಿದ ಸಿಎಂ ಯಡಿಯೂರಪ್ಪ appeared first on Public TV.

Source: publictv.in

Source link

ಬ್ಲಾಕ್ ಮೇಲ್ ದೂರು ರದ್ದತಿಗೆ ಕೋರಿದ್ದ ಅರ್ಜಿ; ನೋಟಿಸ್ ಸ್ವೀಕರಿಸಿದ ರಮೇಶ್ ಜಾರಕಿಹೊಳಿ

ಬೆಂಗಳೂರು: ಮಾಜಿ ಸಚಿವರ ಖಾಸಗಿ CD ಬಹಿರಂಗ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ನೀಡಿರುವ ಬ್ಲಾಕ್ ಮೇಲ್ ದೂರು ರದ್ದತಿಗೆ ಕೋರಿದ್ದ ಅರ್ಜಿಯ ವಿಚಾರಣೆಯನ್ನ ಹೈಕೋರ್ಟ್​ ಜೂನ್ 23ಕ್ಕೆ ಮುಂದೂಡಿಕೆ ಮಾಡಿದೆ.

ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆಯಿತು. ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಪೀಠಕ್ಕೆ ಅರ್ಜಿ ಬಂದಿತ್ತು. ಈ ಅರ್ಜಿ ಜನಪ್ರತಿನಿಧಗಳ ವಿರುದ್ಧದ ಪೀಠ, ನ್ಯಾ.ಸುನಿಲ್ ದತ್ ಯಾದವ್ ಪೀಠಕ್ಕೆ ಬರಬೇಕಿತ್ತು. ಹೀಗಾಗಿ ಜನಪ್ರತಿನಿಧಿಗಳ ವಿರುದ್ಧದ ಪೀಠಕ್ಕೆ ಅರ್ಜಿಯನ್ನ ಕೋರ್ಟ್​ ವರ್ಗಾಯಿಸಿತು.

ರಮೇಶ್ ಜಾರಕಿಹೊಳಿ ಕೊಟ್ಟ ದೂರು ರದ್ದು ಅರ್ಜಿ ವಿಚಾರ ಸಂಬಂಧಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಇಂದು ನೋಟಿಸ್ ಸ್ವೀಕಾರ ಮಾಡಿದ್ದಾರೆ. ಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸದಾಶಿವ ನಗರ ಮನೆಯಲ್ಲಿ ನೋಟಿಸ್ ಸ್ವೀಕಾರ ಮಾಡಿದ್ದಾರೆ. ಕಳೆದ ವಿಚಾರಣೆ ಸುನಿಲ್ ದತ್ ಯಾದವ್ ಪೀಠದಲ್ಲಿ ವಿಚಾರಣೆ ನಡೆದಿತ್ತು. ಈ ವೇಳೆ ಬೈ ಹ್ಯಾಂಡ್ ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಿತ್ತು. ಇದನ್ನ ರಮೇಶ್ ಸ್ವೀಕಾರ ‌ಮಾಡಿಲ್ಲವೆಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು ಅಂತಾ ನ್ಯೂಸ್​ಫಸ್ಟ್​ಗೆ ಅರ್ಜಿದಾರರ ಪರ ವಕೀಲ ಸಂಕೇತ ಏಣಗಿ ಮಾಹಿತಿ ನೀಡಿದ್ದಾರೆ.

The post ಬ್ಲಾಕ್ ಮೇಲ್ ದೂರು ರದ್ದತಿಗೆ ಕೋರಿದ್ದ ಅರ್ಜಿ; ನೋಟಿಸ್ ಸ್ವೀಕರಿಸಿದ ರಮೇಶ್ ಜಾರಕಿಹೊಳಿ appeared first on News First Kannada.

Source: newsfirstlive.com

Source link

ತಜ್ಞರ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ; 3ನೇ ಅಲೆ ಎದುರಿಸಲು ಕಸರತ್ತು ಹೇಗಿದೆ?

ಬೆಂಗಳೂರು: ಕೋವಿಡ್​ ಮೂರನೇ ಅಲೆ ಎದುರಿಸಲು ಬಿಬಿಎಂಪಿ ತಯಾರಿ ನಡೆಸಿದ್ದು, ತಜ್ಞರ ವರದಿಯನ್ನ ಗಂಭೀರವಾಗಿ ಪರಿಗಣಿಸಿದೆ.

ಬೆಂಗಳೂರಲ್ಲಿ ಕೋವಿಡ್ 2ನೇ ಅಲೆ ಅಬ್ಬರ ಸದ್ಯ ಕಡಿಮೆಯಾಗಿದೆ. ನಗರದಲ್ಲಿನ ಹೊಸ ಪ್ರಕರಣಗಳ ಸಂಖ್ಯೆ ನಿತ್ಯ 1000ಕ್ಕಿಂತ ಕಡಿಮೆ ಬರ್ತಿದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹರಡುವ ಬಗ್ಗೆ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ಹೀಗಾಗಿ 3ನೇ ಅಲೆ ತಡೆಗೆ ಅಗತ್ಯ ಕ್ರಮಗಳಿಗೆ ಬಿಬಿಎಂಪಿ ಮುಂದಾಗಿದೆ.

ಕೋವಿಡ್ 3ನೇ ಅಲೆ ಎದುರಿಸಲು ನಗರದಲ್ಲಿ 4,500 ಐಸಿಯು ಬೆಡ್‌ಗಳ ಸಿದ್ಧತೆಗೆ ಪಾಲಿಕೆ ಮುಂದಾಗಿದೆ. ಕಾರ್ಪೊರೇಟ್​​ ಕಂಪನಿಗಳ ಸಹಭಾಗಿತ್ವದಲ್ಲಿ 4500 ಬೆಡ್​ಗಳ ತಯಾರಿ ಮಾಡಲಾಗಿದೆ. ಸಿಎಸ್​ಆರ್​​ ನಡಿ ಕಾರ್ಪೊರೇಟ್​ ಕಂಪನಿಗಳಿಂದ ಐಸಿಯು ಬೆಡ್​ಗಳ ಹೆಚ್ಚಳಕ್ಕೆ ಮುಂದಾಗಿದೆ.

ಇನ್ನು ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಮಕ್ಕಳಿಗೆ ಬೆಡ್ ಹಾಗೂ ವೆಂಟಿಲೇಟರ್​ ವ್ಯವಸ್ಥೆ ಮಾಡಿಕೊಳ್ತಿದೆ. ಎರಡನೇ ಅಲೆಯಲ್ಲಾದ ಸಾವು ನೋವುಗಳು ಮೂರನೇ ಅಲೆಯಲ್ಲಿ ಪುನರಾವರ್ತನೆಯಾಗದಂತೆ ಕ್ರಮಕ್ಕೆ ಮುಂದಾಗಿದ್ದು, ಆಗಸ್ಟ್ ಒಳಗೆ ಐಸಿಯು ಬೆಡ್​ಗಳ ಸಂಖ್ಯೆ ಹೆಚ್ಚಳ ಮಾಡಲು ಬಿಬಿಎಂಪಿ ನಿರ್ಧಾರ ಮಾಡಿದೆ. ಇದಕ್ಕಾಗಿ ಕಾರ್ಪೊರೇಟ್ ಕಂಪನಿಗಳು, ಖಾಸಗೀ ಆಸ್ಪತ್ರೆಗಳ ಸಹಕಾರವನ್ನ ಬಿಬಿಎಂಪಿ ಕೋರಿದೆ.

The post ತಜ್ಞರ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ; 3ನೇ ಅಲೆ ಎದುರಿಸಲು ಕಸರತ್ತು ಹೇಗಿದೆ? appeared first on News First Kannada.

Source: newsfirstlive.com

Source link

ಬಜಾಲ್, ಜಲ್ಲಿಗುಡ್ಡೆಯಲ್ಲಿ ಐವನ್ ಡಿಸೋಜ ನೇತೃತ್ವದಲ್ಲಿ ದಿನಸಿ, ಅಕ್ಕಿ ಕಿಟ್ ವಿತರಣೆ

ಮಂಗಳೂರು: ಬಜಾಲ್, ಜಲ್ಲಿಗುಡ್ಡೆ ಪ್ರದೇಶದಲ್ಲಿ ಕೊರೊನಾ ಪೀಡಿತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಸುಮಾರು 50 ಕುಟುಂಬಗಳಿಗೆ ದಿನಸಿ ಅಕ್ಕಿ ಕಿಟ್ ವಿತರಿಸಲಾಯಿತು. ಮಾಜಿ ಶಾಸಕ ಐವನ್‌ ಡಿಸೋಜ ಅವರ ನೇತೃತ್ವದಲ್ಲಿ ಈ ಹಂಚಿಕೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿಸೋಜ ಅವರು, ಕೊರೊನಾ ತಡೆಗಟ್ಟಲು ಪ್ರತಿಯೊಬ್ಬರೂ ತನ್ನದೇ ಅದ ಕೊಡುಗೆಯನ್ನು ನೀಡಬೇಕು. ಅಂತರವನ್ನು ಕಾಪಾಡಬೇಕು. ಸರ್ಕಾರ ಕೊಟ್ಟಿರುವ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಅದನ್ನು ಪಡೆಯುವ ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಮಂಗಳೂರಿನ ಕುಪ್ಪೆಪದವಿನಲ್ಲಿ ಗುಡ್ಡ ಕುಸಿತ- ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

ಅಸಂಘಟಿತ ಕಾರ್ಮಿಕರಿಗೆ ಕೊರೊನಾ ಲಸಿಕೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ದೃಷ್ಟಿಯಲ್ಲಿ ಆರೋಗ್ಯ ಇಲಾಖೆಯನ್ನು ಈಗಾಗಲೇ ಒತ್ತಾಯಿಸಲಾಗಿದೆ ಎಂದರು. ‌

ಕಾರ್ಯಕ್ರಮದಲ್ಲಿ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಎ ಸಿ.ಜಯರಾಜ್, ಜ್ಯೋತಿ ಪಡೀಲ್, ದೀಕ್ಷಿತ್ ಅತ್ತಾವರ, ಮೀನಾ ತೆಲ್ಲಿಸ್, ಅಭಿಬಲ್ಲ ಕಣ್ಣೂರು, ಭಾಜಿಲ್, ಸ್ಥಳೀಯ ವಾರ್ಡ್ ಅಧ್ಯಕ್ಷ ಆನಂದ ಬಜಾಲ್, ಮೇಜಿ ಡಿ ಸೋಜ ಮುಂತಾದವರು ಉಪಸ್ಥಿತರಿದ್ದರು.

The post ಬಜಾಲ್, ಜಲ್ಲಿಗುಡ್ಡೆಯಲ್ಲಿ ಐವನ್ ಡಿಸೋಜ ನೇತೃತ್ವದಲ್ಲಿ ದಿನಸಿ, ಅಕ್ಕಿ ಕಿಟ್ ವಿತರಣೆ appeared first on Public TV.

Source: publictv.in

Source link

ಮೃಗಾಲಯದಲ್ಲಿದ್ದ ಸಿಂಹಗಳಿಗೆ ಡೆಲ್ಟಾ ಕೊರೊನಾ ವೈರಸ್ ತಗುಲಿದ್ದು ಹೇಗೆ?

ಮನುಕುಲವನ್ನು ಬಿಡದೇ ಕಾಡುತ್ತಿರುವ ಡೆಡ್ಲಿ ಕೊರೊನಾ ಪ್ರಾಣಿಸಂಕುಲವನ್ನು ಕಾಡತೊಡಗಿದೆ. ಈ ಹಿಂದೆಯೂ ಸಿಂಹ-ಆನೆಗಳಿಗೆ ಕೊರೊನಾ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿದ್ದವು. ಈಗ ಮತ್ತಷ್ಟು ಇಂತಾದ್ದೇ ಪ್ರಕರಣಗಳು ವರದಿಯಾಗ್ತಾ ಇದೆ.

ಇಷ್ಟು ದಿನ ಕೊರೊನಾ ಮನುಷ್ಯರನ್ನು ಮಾತ್ರ ಕಾಡ್ತಾ ಇವೆ ಅಂದುಕೊಂಡ್ರೆ ಈಗ ಪ್ರಾಣಿಸಂಕುಲದ ಮೇಲೂ ಅಟ್ಯಾಕ್ ಮಾಡುತ್ತಿದೆ ವೈರಸ್. ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಕೊರೊನಾ ಈಗ ಕಾಡು ಪ್ರಾಣಿಗಳಲ್ಲೂ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕ ತಂದಿದೆ. ಹಿಂದೆ ಚೆನ್ನೈನ ಅರಿಗ್ನಾರ್ ಪಾರ್ಕ್ ನಲ್ಲಿ ಸಿಂಹ ಮತ್ತು ಆನೆಗಳಿಗೆ ಕೊರೊನಾ ತಗುಲಿದೆ ಎಂಬ ಸುದ್ದಿ ಬಂದಿತ್ತು. ಇದರಿಂದ ಎಲ್ಲಾ ರಾಜ್ಯಗಳಲ್ಲಿರುವ ಅಭಯಾರಣ್ಯ ಮತ್ತು ಮೃಗಾಲಯಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಸಂದೇಶ ರವಾನಿಸಲಾಗಿತ್ತು. ಆದರೆ, ಎಲ್ಲಾ ಮುನ್ನೆಚ್ಚೆರಿಕೆಯ ಹೊರತಾಗಿಯೂ ವನ್ಯಜೀವಿಗಳಲ್ಲಿ ಕೊರೊನಾ ಹರಡ್ತಾನೇ ಇದೆ. ಇದನ್ನೆಲ್ಲ ನೋಡ್ತಾ ಇದ್ರೆ ಮುಂದೊಮ್ಮೆ ಕೊರೊನಾ ಸಕಲ ಜೀವರಾಶಿಗಳಿಗೆ ಆಪತ್ತು ತಂದು ಬಿಡುತ್ತಾ ಅನ್ನೋ ಆತಂಕ ಶುರುವಾಗೋದು ಸಹಜ.

ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸಿಕೊಂಡಿರುವ ಪ್ರಾಣಿಗಳಿಗೆ ಯಾವುದೇ ತೊಂದರೆ ಇಲ್ಲ. ಆದ್ರೆ ಮೃಗಾಲಯಗಳಲ್ಲಿ, ಉದ್ಯಾನವನಗಳಲ್ಲಿ ಬಂಧಿಯಾಗಿರುವ ವನ್ಯಜೀವಿಗಳಲ್ಲಿ ಕೊರೊನಾ ಕಂಡು ಬರ್ತಿದೆ. ಬಹುಶಃ ಹೀಗೆ ಬಂಧಿಯಾಗಿರುವ ಪ್ರಾಣಿಗಳಿಗೆ ಕೊರೊನಾದಿಂದ ಬಿಡುಗಡೆಯ ಭಾಗ್ಯ ಸಿಕ್ಕರೂ ಸಿಗಬಹುದು. ಆದ್ರೆ ಈ ಪ್ರಾಣಿಗಳ ಸಂತತಿಯನ್ನು ಉಳಿಸಿ ಬೆಳೆಸಲೆಂದೇ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ ಕಲ್ಪನೆಯಡಿ ಇವುಗಳನ್ನು ಸಂರಕ್ಷಣೆ ಮಾಡಲಾಗ್ತಾ ಇದೆ. ಇವು ಸಹಜವಾಗಿ ಮನುಷ್ಯರ ಸಂಪರ್ಕಕ್ಕೆ ಬರೋದ್ರಿಂದ ಇವುಗಳಿಗೂ ಕೊರೊನಾ ಹರಡ್ತ ಇದೆ. ಈಗ ಭಾರತ ಮತ್ತು ಶ್ರೀಲಂಕಾದಲ್ಲಿ ಕಾಡಿನ ರಾಜ ಸಿಂಹನಿಗೆ ಕೊರೊನಾ ದೃಢಪಟ್ಟಿದೆ.

ವನ್ಯಜೀವಿಗಳಲ್ಲಿ ಕೊರೊನಾ ಪತ್ತೆ ಹಚ್ಚೋದು ಒಂದು ಕಷ್ಟವಾದ್ರೆ ಇನ್ನು ಇವುಗಳಿಗೆ ಚಿಕಿತ್ಸೆ ಕೊಡೋದು ಇನ್ನೊಂದು ಸವಾಲು. ಹೀಗಾಗಿ ಮೃಗಾಲಯ ಮತ್ತು ರಾಷ್ಟ್ರೀಯ ಉದ್ಯಾನವನದಲ್ಲಿರುವ ಪ್ರಾಣಿಗಳಿಗೆ ಕೊರೊನಾ ಹರಡ್ತಾ ಹೋದ್ರೆ ಮುಂದೆ ಇದೇ ದೊಡ್ಡ ಸವಾಲಾಗಿ ಬಿಡುತ್ತೆ.

ಇಷ್ಟು ದಿನ ಹೊರಾಂಗಣದಲ್ಲಿ ಅಷ್ಟಾಗಿ ಕೊರೊನಾ ಹರಡಲ್ಲ ಅಂತಾನೇ ಹೇಳಲಾಗ್ತಾ ಇತ್ತು. ಆದ್ರೆ ಬಯಲಲ್ಲಿರುವ ಸಿಂಹಕ್ಕೆ ಕೊರೊನಾ ಹೇಗೆ ಬಂತು. ಅದರಲ್ಲು ಮೃಗಾಲಯದ ಸಿಬ್ಬಂದಿ ಇವುಗಳ ಸಂಪರ್ಕಕ್ಕೆ ಬರುತ್ತಾರಾದರೂ ತೀರ ಹತ್ತಿರದಲ್ಲೇ ಹೆಚ್ಚು ಸಮಯ ಕಳೆಯೋದಿಲ್ಲ. ಇಷ್ಟಾದರೂ ಈ ಸಿಂಹಗಳಿಗೆ ಹೇಗೆ ತಗುಲಿತು ಕೊರೊನಾ? ಅಂತ ಕೇಳಿದ್ರೆ ಉತ್ತರ ಸ್ಪಷ್ಟವಾಗಿ ಸಿಗ್ತಾ ಇಲ್ಲ. ಕೊರೊನಾ ಮನುಷ್ಯನಿಗೆ ಮಾತ್ರ ಅಪಾಯ ತರ್ತಾ ಇದೆ ಅಂದುಕೊಂಡ್ರೆ ಇದು ಈಗ ಪ್ರಾಣಿಗಳಿಗೂ ಗಂಡಾಂತರಕಾರಿಯಾಗ್ತಾ ಇದೆ.  ಒಂದು ಕಡೆ ಬಣ್ಣ ಬಣ್ಣಗಳ ಫಂಗಸ್ ಕಾಟ ಎದುರಾದ್ರೆ ಮತ್ತೊಂದು ಕಡೆ ಕೊರೊನಾ ರೂಪಾಂತರಿ ತಳಿ ಡೆಲ್ಟಾ ಎಲ್ಲಾ ಲೆಕ್ಕಾಚಾರವನ್ನ ಉಲ್ಟಾ ಮಾಡ್ತಿದೆ. ವಿಶ್ವದ ಹಲವು ಭಾಗಗಳಲ್ಲಿ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿರುವ ಕೊರೊನಾದ ರೂಪಾಂತರಿ ತಳಿ ಡೆಲ್ಟಾ ಮಾನವನನ್ನು ಮಾತ್ರವಲ್ಲದೇ ಪ್ರಾಣಿಗಳನ್ನು ಕೂಡ ಕಾಡಲು ಶುರು ಮಾಡ್ಕೊಂಡಿದೆ.

ಕೊರೊನಾ ಹೋಯ್ತು ಎನ್ನುವಷ್ಟರಲ್ಲಿ ಅದು ವೇಷ ಬದಲಿಸಿ, ಬಣ್ಣ ಬದಲಿಸಿ ಜನರ ಮೇಲೆ ಅಟ್ಯಾಕ್ ಮಾಡ್ತಿದೆ. ಆದ್ರೆ ಕೊರೊನಾಗೆ ಮೂಗುದಾರ ಹಾಕಿದ್ರೆ ಅದು ಸೂಜಿಯಷ್ಟು ಜಾಗದಲ್ಲಿ ನುಸುಳಿಕೊಳ್ತಿದೆ. ವೇಷ ಬದಲಿಸುವ ಮೂಲಕ ಮತ್ತೆ ಮತ್ತೆ ಅಟ್ಯಾಕ್ ಮಾಡ್ತಾನೇ ಇದೆ. ಇದೀಗ ಕೊರೊನಾದ ರೂಪಾಂತರ ತಳಿ ಡೆಲ್ಟಾ ಸರ್ಕಾರದ ಎಲ್ಲಾ ಲೆಕ್ಕಚಾರಗಳನ್ನು ಉಲ್ಟಾ ಮಾಡ್ತಿದೆ. ವಿಶ್ವದ ಹಲವು ದೇಶಗಳಲ್ಲಿ ಇದೇ ರೂಪಾಂತರಿ ತಳಿಯ ಕಾಟ ಹೆಚ್ಚಾಗಿದೆ. ಮನುಕುಲವನ್ನೇ ಅಲುಗಾಡಿಸಿರುವ ಈ ಡೆಲ್ಟಾ ವೈರಸ್ ಇದೀಗ ಮೂಕ ಪ್ರಾಣಿಗಳನ್ನು ಕೂಡ ಇನ್ನಿಲ್ಲದೆ ಕಾಡ್ತಾ ಇದೆ.

ವನ್ಯಜೀವಿಗಳನ್ನೂ ಬಿಡದ ಕರುಣೆಯಿಲ್ಲದ ಕೊರೊನಾ
ಚೈನ್ನೈನ ಉದ್ಯಾನವನದ 4 ಸಿಂಹಗಳಿಗೆ ಡೆಲ್ಟಾ ಅಟ್ಯಾಕ್
ಕಾಡಿನ ರಾಜನ ಮೇಲೂ ರೂಪಾಂತರಿ ತಳಿಯ ವಕ್ರದೃಷ್ಟಿ

ಕಾಡಿನಲ್ಲಿ ಆಡಿದ್ದ ಆಟ, ನಡೆದಿದ್ದೆ ದಾರಿ ಎಂಬಂತಿದ್ದ ಕಾಡಿನ ರಾಜನನ್ನು ಇದೀಗ ಅಗೋಚರ ವೈರಸ್ ಕಾಡಲು ಶುರು ಮಾಡಿದೆ. ಗಾಂಭೀರ್ಯದ ನಡೆ, ತೀಕ್ಷ್ಣ ನೋಟ, ಅಂಜದ ಗಂಡಿನ ಗುಂಡಿಗೆಯನ್ನು ತನ್ನ ಘರ್ಜನೆಯ ಮೂಲಕ ನಡುಗಿಸುತ್ತಿದ್ದ ಸಿಂಹಗಳಿಗೆ ಇದೀಗ ಅಗೋಚರ ವೈರಸ್ ದಾಳಿ ಮಾಡುವ ಭಯ ಶುರುವಾಗಿದೆ. ಅಭಯಾರಣ್ಯದಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಸೊಬಗಿನ ನೋಟ ಬೀರುತ್ತಿದ್ದ ಸಿಂಹಗಳನ್ನು ಕೂಡ ಇದೀಗ ಕೊರೊನಾದ ರೂಪಾಂತರಿ ತಳಿ ಕಾಡಲು ಶುರು ಮಾಡಿದೆ.

ನಿಮಗೆಲ್ಲಾ ಗೊತ್ತೆ ಇರುತ್ತೆ. ಸಿಂಹ ಹುಲ್ಲುಗಾವಲುಗಳ ನಡುವೆ ನಿಂತು ತೆರೆಮರೆಯಲ್ಲಿಯೇ ಕೂತು ಹೇಗೆ ಹೊಂಚು ಹಾಕಿ ಬೇಟೆಯಾಡುತ್ತೆ ಅಂತ. ಹೀಗೆ ಹೊಂಚು ಹಾಕಿ ಬೇಟೆಯಾಡುತ್ತಿದ್ದ ಸಿಂಹಗಳಿಗೆ ಇದೀಗ ಅಗೋಚರ ವೈರಸ್ ಬೇಟೆ ಶುರು ಮಾಡಿದೆ. ಸಿಂಹಕ್ಕೆ ಅರಿವೇ ಇಲ್ಲದಂತೆ ಅಟ್ಯಾಕ್ ಮಾಡ್ಬಿಟ್ಟಿದೆ. ಮನುಷ್ಯನ ಮೂಲಕ ಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲುತ್ತದೆ ಎಂದು ವನ್ಯಜೀವಿ ತಜ್ಞರು ಈಗಾಗಲೇ ಹಲವು ಬಾರಿ ಎಚ್ಚರಿಸಿದ್ದರು. ಇದೀಗ ಮೂಕ ಪ್ರಾಣಿಗಳಲ್ಲೂ ಕೊರೊನಾದ ರೂಪಾಂತರಿ ತಳಿ ಕಾಣಿಸಿಕೊಂಡಿವೆ.

ಚೈನ್ನೈನ ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನವನದಲ್ಲಿ ಕಳೆದ ವಾರ ಸಿಂಹವೊಂದು ಕೊರೊನಾದಿಂದ ಮೃತಪಟ್ಟಿತ್ತು. ಇದಾದ ಬೆನ್ನಲ್ಲೇ ಕೆಲ ಸಿಂಹಗಳಿಗಳಲ್ಲಿ ಕೊರೊನಾ ಸೋಂಕು ಕೂಡ ಕಾಣಿಸಿಕೊಂಡಿತ್ತು. ಆದ್ರೆ ಇದೀಗ ಅದೇ ಉದ್ಯಾನವನದಿಂದ ಮತ್ತೊಂದು ಆಘಾತಕಾರಿ ವಿಷ್ಯ ಬಂದಿದೆ. ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನವನದ ನಾಲ್ಕು ಸಿಂಹಗಳಿಗೆ ಕೊರೊನಾ ರೂಪಾಂತರಿ ತಳಿ ಡೆಲ್ಟಾ ಅಟ್ಯಾಕ್ ಆಗಿರುವುದು ಪರೀಕ್ಷೆಯೆ ವೇಳೆ ದೃಢಪಟ್ಟಿದೆ. ಕಳೆದ ವಾರ ಸಿಂಹಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದರಿಂದ ಸಿಂಹಗಳ ಚಲನವಲನಗಳ ಮೇಲೆ ಉದ್ಯಾನವನದಲ್ಲಿರುವ ಸಿಬ್ಬಂದಿ ನಿಗಾ ಇಟ್ಟಿದ್ರು. ಬಳಿಕ ಸಿಂಹಗಳಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಹೀಗಾಗಿ ಅವುಗಳನ್ನ ಪರೀಕ್ಷೆಗೆ ಒಳಪಡಿಸಿಲಾಗಿತ್ತು. ಇದೀಗ ಟೆಸ್ಟ್ ರಿಪೋರ್ಟ್ ಬಂದಿದ್ದು, ಸಿಂಹಗಳಿಗೆ ರೂಪಾಂತರಿ ತಳಿ ಡೆಲ್ಟಾ ಅಟ್ಯಾಕ್ ಆಗಿರುವುದು ಕನ್ಫರ್ಮ್ ಆಗಿದೆ.

ಉದ್ಯಾನವನದಲ್ಲಿದ್ದ ಸಿಂಹಗಳಿಗೆ ಡೆಲ್ಟಾ ವೈರಸ್ ತಗುಲಿದ್ದೇಗೆ?
ಮಾನವನಿಂದ ಈ ಪ್ರಾಣಿಗಳಿಗೂ ಹರಡಿತಾ ಡೆಲ್ಟಾ ವೈರಸ್ ?
ಗಾಳಿಯ ಮೂಲಕ ಸಿಂಹಗಳಿಗೆ ತಗುಲಿತಾ ರೂಪಾಂತರಿ ತಳಿ?

ಹೆಚ್ಚು ಜನಸಂದಣಿರುವ ಕಡೆ, ಹೊರಗಡೆ ಓಡಾಡಿದ ಸಂದರ್ಭದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಕೊರೊನಾ ಹರಡೋದು ಕಾಮನ್. ಆದ್ರೆ ಉದ್ಯಾನವನದಲ್ಲಿ ಸೀಮಿತ ಚೌಕಟ್ಟಿನ ಒಳಗೆ ಬಂಧಿಯಾಗಿರುವ ಸಿಂಹಗಳಲ್ಲೂ ಇದೀಗ ಕೊರೊನಾದ ರೂಪಾಂತರಿ ತಳಿ ಕಾಣಿಸಿಕೊಂಡಿದ್ದು, ಕಳವಳಕ್ಕೆ ಕಾರಣವಾಗಿದೆ. ಯಾಕಂದ್ರೆ ಜನರು ಸಿಂಹದ ಹತ್ತಿರ ಹೋಗೊದು ಬಿಡಿ ಅದ್ರ ಹೆಸರು ಕೇಳಿದ್ರು ಹಲವರ ಹೃದಯ ಬಡಿತ ಹೆಚ್ಚಾಗುತ್ತೆ. ಒಂದು ಸಿಂಹ ದೂರದಲ್ಲಿ ನಿಂತು ಘರ್ಜಿಸುತ್ತಿದೆ ಎಂದರೇನೇ ಎದೆಯಲ್ಲಿ ನಡುಕ ಹುಟ್ಟುತ್ತೆ. ಅಂಥದ್ರಲ್ಲಿ ಹೊರಗಿನ ಜನರಿಂದ ಸಿಂಹಗಳಿಗೆ ಕೊರೊನಾ ಹರಡಿರುವ ಸಾಧ್ಯತೆ ಕಡಿಮೆ. ಹಾಗಾದ್ರೆ ಸಿಂಹಗಳಿಗೆ ಕೊರೊನಾ, ಕೊರೊನಾದ ತಳಿಗಳು ಅಟ್ಯಾಕಾಗಿದ್ದೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡ ತೊಡಗಿದೆ.

ಉದ್ಯಾವನದಲ್ಲಿರುವ ಸಿಂಬಂದಿಯಿಂದಲೇ ಸಿಂಹಗಳಿಗೂ ಕೊರೊನಾ ವೈರಸ್ ಹರಡಿರುವ ಸಾಧ್ಯತೆ ಇದೆ. ಉದ್ಯಾವನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಡೆಲ್ಟಾ ಸೋಂಕು ತಗುಲಿರುವ ಸಿಂಹಗಳಿಂದ ಇತರೆ ಪ್ರಾಣಿಗಳಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಯಾವ್ಯಾವ ಪ್ರಾಣಿಗಳಿಗೆ ಡೆಲ್ಟಾ ಅಟ್ಯಾಕ್ ಆಗಿದೆ ಎನ್ನುವುದನ್ನು ಪತ್ತೆ ಹಚ್ಚುವುದೇ ಇದೀಗ ಉದ್ಯಾನವನದ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಭಾರತದಲ್ಲಿ ಮಾತ್ರವಲ್ಲ ಶ್ರೀಲಂಕಾ ಸಿಂಹಗಳಿಗೂ ವೈರಸ್
ಕೊಲಂಬೋ ಮೃಗಾಲಯದಲ್ಲಿರುವ ಸಿಂಹಕ್ಕೆ ಕೊರೊನಾ
11 ವರ್ಷದ ಥಾರ್ ಹೆಸರಿನ ಸಿಂಹಕ್ಕೆ ಕೊರೊನಾ ದೃಢ

ಭಾರತದಲ್ಲಿ ಮಾತ್ರವಲ್ಲ, ಶ್ರೀಲಂಕಾದ ಸಿಂಹಕ್ಕೂ ಕೊರೊನಾ ಬಂದಿದೆ. ಕೊಲಂಬೋ ಮೃಗಾಲಯದಲ್ಲಿ ಸಿಂಹದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಶ್ರೀಲಂಕಾದ ಅಧಿಕಾರಿಗಳು ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ‘ಥಾರ್’ ಎಂಬ 11 ವರ್ಷದ ಸಿಂಹಕ್ಕೆ ಚಿಕಿತ್ಸೆ ನೀಡಲು ಭಾರತದ ಕೇಂದ್ರ ಮೃಗಾಲಯ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಅಂತ ಕೊಲಂಬೊ ರಾಷ್ಟ್ರೀಯ ಪ್ರಾಣಿಶಾಸ್ತ್ರದ ಉದ್ಯಾನದ ಮುಖ್ಯಸ್ಥರು ತಿಳಿಸಿದ್ದಾರೆ. ನಾವು ಕೇಂದ್ರ ಮೃಗಾಲಯ ಪ್ರಾಧಿಕಾರದೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ. ಮೃಗಾಲಯದಲ್ಲಿರುವ ಸಿಬ್ಬಂದಿ ಮತ್ತು ಇತರ ಪ್ರಾಣಿಗಳಿಗೆ ಸೋಂಕು ತಗುಲದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಅವರ ಸೂಚನೆಗಳನ್ನು ಅನುಸರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಸಿಂಹವನ್ನು ಪ್ರತ್ಯೇಕವಾಗಿರಿಸಿಕೊಂಡು ನಾವು ಚಿಕಿತ್ಸೆ ನೀಡುತ್ತೇವೆ ಎಂದು ಮಹಾನಿರ್ದೇಶಕ ಇಶಿನಿ ವಿಕ್ರಮ ಸಿಂಘೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದ್ವೀಪ ರಾಷ್ಟ್ರದ ಮೃಗಾಲಯದ ಇನ್ನಷ್ಟು ಪ್ರಾಣಿಗಳಿಗೆ ಸೋಂಕು ಹರಡದಂತೆ ಇಲ್ಲಿಯೂ ಎಚ್ಚರಿಕೆ ವಹಿಸಲಾಗಿದೆ.

ಒಟ್ಟಿನಲ್ಲಿ ಮಾನವರಲ್ಲಿ ಮಾತ್ರವಲ್ಲದೇ ಪ್ರಾಣಿಗಳಲ್ಲೂ ಇದೀಗ ಕೊರೊನಾದ ರೂಪಾಂತರಿ ತಳಿ ಕಾಣಿಸಿಕೊಂಡಿರುವುದು ನಿಜಕ್ಕೂ ಆಂತಕಕ್ಕೆ ಕಾರಣವಾಗಿದೆ. ಮುಂದೆ ಇನ್ಯಾವ ಪ್ರಾಣಿಗಳಿಗೆ ಕೊರೊನಾ ಅಟ್ಯಾಕ್ ಮಾಡುತ್ತೊ ಗೊತ್ತಾಗ್ತಾ ಇಲ್ಲ. ಮನುಷ್ಯರಿಗೆ ಕೊರೊನಾ ಟೆಸ್ಟ್ ಮಾಡಿಸಿದಂತೆ ಪ್ರಾಣಿಗಳಿಗೆ ಕೊರೊನಾ ಟೆಸ್ಟ್ ಮಾಡ್ಸೋದು ಸುಲಭವಲ್ಲ . ಒಟ್ಟಿನಲ್ಲಿ ಪ್ರಾಣಿಗಳಿಗೆ ಕೊರೊನಾ ಸೋಂಕು ಹರಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಪ್ರಾಣಿಗಳಿಗೆ ಸೋಂಕು ಹಚ್ಚಿದ್ರೆ ಅವುಗಳನ್ನು ಪತ್ತೆ ಹಚ್ಚುವುದು ನಿಜಕ್ಕೂ ಕಠಿಣವಾದ ಸವಾಲು.

The post ಮೃಗಾಲಯದಲ್ಲಿದ್ದ ಸಿಂಹಗಳಿಗೆ ಡೆಲ್ಟಾ ಕೊರೊನಾ ವೈರಸ್ ತಗುಲಿದ್ದು ಹೇಗೆ? appeared first on News First Kannada.

Source: newsfirstlive.com

Source link

ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ

ರವಿಚಂದ್ರನ್​ ಅಶ್ವಿನ್.. ಟೀಮ್​ ಇಂಡಿಯಾ ಟೆಸ್ಟ್​ ತಂಡದ ಕೀ ಪ್ಲೇಯರ್​​. ಟೆಸ್ಟ್​ ತಂಡದ ಅವಿಭಾಜ್ಯ ಅಂಗವಾಗಿರುವ ಅಶ್ವಿನ್​, ಅದೆಷ್ಟೋ ಪಂದ್ಯಗಳ ಗೆಲುವಿನ ರೂವಾರಿ. ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ..?

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಅರ್ಧದಾರಿ ಕ್ರಮಿಸಿದೆ. 3 ದಿನಗಳಾಟ ಮುಗಿದಿದ್ದು, ಎದುರಾಳಿ ಕಿವೀಸ್​​​ ಎದುರು ಟೀಮ್​ ಇಂಡಿಯಾ ಹೋರಾಟ ನಡೆಸ್ತಿದೆ. ಬ್ಯಾಟಿಂಗ್​ನಲ್ಲಿ ಸಾಧಾರಣ ಮೊತ್ತ ಕಲೆ ಹಾಕಿರುವ ಭಾರತ, ಗೆಲುವಿಗಾಗಿ ಈಗ ಬೌಲಿಂಗ್​ ವಿಭಾಗದ ಮೇಲೆ ಅವಲಂಬಿತವಾಗಿದೆ. ಅದರಲ್ಲೂ ಅನುಭವಿ ಆರ್​.ಅಶ್ವಿನ್​ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಅಶ್ವಿನ್​ ಮೇಲೆ ಟೀಮ್​ ಇಂಡಿಯಾದ ಭರವಸೆ
ಸೌತ್​ಹ್ಯಾಂಪ್ಟನ್​ ಮೈದಾನದಲ್ಲಿ ವೇಗಿಗಳು ಮೆರೆದಾಡ್ತಿದ್ರೂ ಸ್ಪಿನ್ನರ್​ ಅಶ್ವಿನ್​ ಮೇಲೆ ಭಾರತದ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಪಿಚ್​ ಕ್ಯುರೇಟರ್​​ 3 ದಿನಗಳ ಬಳಿಕ ಸ್ಪಿನ್​ಗೆ ಪಿಚ್​ ಸಹಾಯಕವಾಗಲಿದೆ ಅನ್ನೋದು ಮಾತ್ರ ಕಾರಣವಲ್ಲ. ರವಿಚಂದ್ರನ್​ ಅಶ್ವಿನ್​ರಲ್ಲಿರೋ ಫೈಟಿಂಗ್​ ಸ್ಪಿರಿಟ್​​​​ ಹಾಗೂ ಪ್ರಯೋಗಗಳನ್ನ ಕರಗತ ಮಾಡಿಕೊಳ್ಳುವ ಕಲೆ, ಮ್ಯಾನೇಜ್​ಮೆಂಟ್​ ಭರವಸೆಯನ್ನ ದುಪ್ಪಟ್ಟಾಗುವಂತೆ ಮಾಡಿದೆ.

​ಸದಾ ಹೊಸ ಪ್ರಯೋಗಗಳಿಗೆ ಮುಂದಾಗುವ ಆ್ಯಷ್​​, ಕಂಫರ್ಟ್​​ ಝೋನ್​ನಲ್ಲಿ ಇರದೆ, ತನ್ನ ಕೌಶಲ್ಯಗಳನ್ನ ಹೆಚ್ಚಿಸಿಕೊಳ್ಳುವ ಯತ್ನದಲ್ಲಿ ಅಶ್ವಿನ್​ ಇರ್ತಾರೆ. ಇದೇ ಆತನನ್ನ ವಿಶೇಷ ಆಟಗಾರನನ್ನಾಗಿ ಮಾಡಿರೋದು. ಇವು ವಿಶ್ವಟೆಸ್ಟ್​​​ ಚಾಂಪಿಯನ್​ಶಿಪ್​ ಫೈನಲ್​ಗೂ ಮುನ್ನ ಟೀಮ್​ ಇಂಡಿಯಾ ಬೌಲಿಂಗ್​ ಕೋಚ್​​ ಭರತ್​ ಅರುಣ್​ ಹೇಳಿದ ಭರವಸೆಯ ಮಾತುಗಳು. ಕೇವಲ ಭರತ್​​ ಅರುಣ್​ ಮಾತು ಮಾತ್ರವಲ್ಲ. ಇಡೀ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಅಶ್ವಿನ್​ ಮೇಲೆ ಅಷ್ಟೇ ಭರವಸೆಯನ್ನಿಟ್ಟಿದೆ.

ಆರಂಭಿಕ ದಿನಗಳಲ್ಲಿ ಕೇವಲ ಸ್ಪಿನ್ನರ್​​ ಆಗಿದ್ದ ಅಶ್ವಿನ್​, ಈಗ ಆಲ್​​ರೌಂಡರ್​ ಆಗಿ ಬದಲಾಗಿದ್ದಾರೆ. ಬಾಲ್​ ಹಾಗೂ ಬ್ಯಾಟ್​​ ಎರಡರಲ್ಲೂ ಪರಾಕ್ರಮ ಮೆರೆಯೋ ಸಾಮರ್ಥವಿರೋದು ಕೂಡ ಅಶ್ವಿನ್​ರನ್ನ ಸ್ಪೆಷಲ್​ ಪ್ಲೇಯರ್​​ನನ್ನಾಗಿ ಮಾಡಿದೆ. ಟೆಸ್ಟ್​ ಕ್ರಿಕೆಟ್​​ನಲ್ಲಿ 5 ಶತಕ, 11 ಅರ್ಧಶತಕ ಸಹಿತ 2,678 ರನ್​ಗಳು, 409 ವಿಕೆಟ್​​ಗಳಂದ್ರೆ ಅದು ಸಾಮಾನ್ಯವಲ್ಲ. ಹೀಗಾಗಿಯೇ ವಿಶ್ವ ಕ್ರಿಕೆಟ್​​ ಲೋಕವೇ ಅಶ್ವಿನ್​ರನ್ನ ಶ್ರೇಷ್ಠ ಪ್ಲೇಯರ್​​ ಎಂದು ಕರೆಯೋದು. ಆದ್ರೂ ಟೀಕೆಗಳು ಅಶ್ವಿನ್​ರನ್ನೂ ಬಿಟ್ಟಿಲ್ಲ.

ಟೀಕೆಗಳಿಗೆ ಪರೋಕ್ಷ ತಿರುಗೇಟು ನೀಡಿದ ಅಶ್ವಿನ್​..!
ಯಶಸ್ಸಿಗೆ ಇದೇ ಕಾರಣ ಎಂದ ಆಫ್​​ ಸ್ಪಿನ್ನರ್​​..!

ಇತ್ತಿಚೇಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​​ ಅಶ್ವಿನ್​ ಗ್ರೇಟೆಸ್ಟ್​ ಕ್ರಿಕೆಟರ್​​ ಅಲ್ಲ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ರು. ಇದು ಭಾರೀ ಚರ್ಚೆಗೂ ಕಾರಣವಾಗಿತ್ತು. ಇದೀಗ ಈ ಬಗ್ಗೆ ಪರೋಕ್ಷವಾಗಿ ಸ್ವತಃ ಅಶ್ವಿನ್​ ತುಟಿ ಬಿಚ್ಚಿದ್ದಾರೆ. ಈ ಬಗ್ಗೆ ಮಾತಾಡಿರುವ ಅಶ್ವಿನ್, ನನಗೆ ನಾನು ಏನು ಮಾಡುತ್ತೇನೆ ಎಂಬುದರ ಮೇಲೆ ನಂಬಿಕೆಯಿದೆ. ನಾನು ವಿವಾದಗಳನ್ನ ಹೆಚ್ಚು ಎಂಜಾಯ್​ ಮಾಡ್ತೀನಿ. ಅದು ನನ್ನನ್ನ ಫೈಟ್​​ಬ್ಯಾಕ್​ ಮಾಡುವಂತೆ ಪ್ರೇರೆಪಿಸುತ್ತೆ. ಹಾಗಿಯೇ ನಾನಿಲ್ಲಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.


ಯಾರನ್ನೋ ಮೆಚ್ಚಿಸಲಿಕ್ಕೆ ನಾನು ಆಡಲ್ಲ. ನನ್ನ ಜೀವನಕ್ಕೆ ಈ ಕ್ರೀಡೆ ಒಂದು ಅರ್ಥ ಕೊಟ್ಟಿದೆ. ನನಗೆ ಟೀಕಾಕಾರರಿಗೆ ಉತ್ತರ ಕೊಡಲು ಸಮಯವೂ ಇಲ್ಲ ಎಂದು ಅಶ್ವಿನ್​ ಖಡಕ್​ ಮಾತುಗಳನ್ನಾಡಿದ್ದಾರೆ. ಜೊತೆಗೆ ನನ್ನ ಯಶಸ್ಸಿಗೆ ಕಾರಣವಾಗಿರೋದು ಕೂಡ ಇದೇ ಅಂಶ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಟೀಕಾಕಾರರಿಗೆ ಪರೋಕ್ಷವಾಗಿಯೇ ತಿರುಗೇಟು ನೀಡಿರುವ ಅಶ್ವಿನ್​, ತನ್ನ ಯಶ್ಸಿಸಿನ ಸಿಕ್ರೇಟ್​​ ಅನ್ನ ಬಿಚ್ಚಿಟ್ಟಿದ್ದಾರೆ. ಇದೀಗ ಚಾಂಪಿಯನ್​​ ಶಿಪ್​ ಫೈನಲ್​ನಲ್ಲಿ ತಂಡವನ್ನೂ ಯಶಸ್ಸಿನೆಡೆಗೆ ಕೊಂಡೊಯ್ಯಲಿ ಅನ್ನೋದೇ ಅಭಿಮಾನಿಗಳ ಆಶಯ.

The post ಅಶ್ವಿನ್​ ವಿಶ್ವದ ಶ್ರೇಷ್ಠ ಸ್ಪಿನ್​ ಆಲ್​ರೌಂಡರ್​​ ಆಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ appeared first on News First Kannada.

Source: newsfirstlive.com

Source link

ಮೋದಿಯಿಂದಾಗಿ ಯೋಗಕ್ಕೆ ವಿಶ್ವಮನ್ನಣೆ – ಕರಂದ್ಲಾಜೆ

ಉಡುಪಿ: ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಔಷಧಿ ಮಾತ್ರೆಗಳ ಹಿಂದೆ ಹೋಗಿ ನಾವೆಲ್ಲಾ ಯೋಗ ಮರೆತೆವು. ಪ್ರಧಾನಿ ಮೋದಿಯಿಂದ ಯೋಗ ವಿಶ್ವಕ್ಕೆ ಪುನರಪಿ ಪರಿಚಯವಾಯ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಯೋಗ ದಿನದ ಅಂಗವಾಗಿ ಉಡುಪಿಯಲ್ಲಿ ಶೋಭಾ ಕರಂದ್ಲಾಜೆಯಿಂದ ಯೋಗಭ್ಯಾಸ ಮಾಡಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಕಟ್ಟದಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದ್ದು, ವೈದ್ಯರೊಂದಿಗೆ ಯೋಗಾಸನದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಒಂದು ಮಾಡಿದ ಅಭಿಯಾನ -ರಘುಪತಿ ಭಟ್, ಪ್ರಮೋದ್‍ರಿಂದ ಹಡಿಲು ಗದ್ದೆ ಬೇಸಾಯ

ಸುಮಾರು ಒಂದು ಗಂಟೆ ಯೋಗ, ಪ್ರಾಣಾಯಾಮದಲ್ಲಿ ಶೋಭಾ ಕರಂದ್ಲಾಜೆ ತಲ್ಲೀನರಾದರು. ಆಯುಷ್ ಇಲಾಖೆ ಆನ್ಲೈನ್ ಮೂಲಕ ತಮ್ಮ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಯೋಗ ಶಿಬಿರವನ್ನು ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಯುಷ್ ವೈದ್ಯರು, ಆಸ್ಪತ್ರೆ ಸಿಬ್ಬಂದಿಯ ಜೊತೆ ಯೋಗಾಸನದ ವಿವಿಧ ಭಂಗಿಗಳನ್ನು ಮಾಡಿದರು.

ಯೋಗಭ್ಯಾಸದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಔಷಧಿ ಮಾತ್ರೆಗಳ ಹಿಂದೆ ಹೋಗಿ ನಾವೆಲ್ಲಾ ಯೋಗ ಮರೆತೆವು. ಆಧುನಿಕ ಔಷಧಿಯಿಂದ ಹಲವಾರು ಅಡ್ಡಪರಿಣಾಮಗಳು ಇವೆ. ನಮ್ಮ ದೇಶಕ್ಕೆ ಇದರಿಂದ ಹಲವು ಸಮಸ್ಯೆ ಆಗಿವೆ. ಯೋಗ ಮನಸ್ಸು ಆತ್ಮವನ್ನು ಜೋಡಿಸುವ ಒಂದು ಕಲೆ. ಪ್ರಧಾನಿ ಮೋದಿಯಿಂದ ಯೋಗ ವಿಶ್ವಕ್ಕೆ ಪುನರಪಿ ಪರಿಚಯವಾಗಿ ಭಾರೀ ಜನಮನ್ನಣೆ ಪಡೆಯಿತು ಎಂದರು.

ಕೋಟ್ಯಂತರ ಜನ ಭಾರತದ ಯೋಗಕ್ಕೆ ಮಾರುಹೋಗಿದ್ದಾರೆ. ಪ್ರಪಂಚದಾದ್ಯಂತ ಎಲ್ಲಾ ದೇಶಗಳ ಜನ ಯೋಗ ಅಭ್ಯಾಸ ಮಾಡಿ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಯೋಗ ಅಧ್ಯಯನಕ್ಕೆ ಯೋಗ ಅಭ್ಯಾಸಕ್ಕೆ ಲಕ್ಷಾಂತರ ವಿದೇಶಿಗರು ಭಾರತಕ್ಕೆ ಬರುತ್ತಿದ್ದಾರೆ. ಕೊರೊನಾ ಕಾಲದಲ್ಲಿ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಯೋಗ ಪ್ರಯೋಜನಕಾರಿಯಾಗಿದೆ. ಯೋಗಾಭ್ಯಾಸ ಯೋಗ ದಿನಕ್ಕೆ ಮಾತ್ರ ಸಿಮಿತವಾಗುವುದು ಬೇಡ. ಪ್ರತಿದಿನ ಯೋಗಾಭ್ಯಾಸ ಮಾಡಿ. ಕೊರೊನಾ ಕಾಲದಲ್ಲಿ ಯೋಗಾಭ್ಯಾಸ ಮಾಡುವವರ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಕಲಿತ ವಿದ್ಯೆ, ಪಾಠ ಜೀವನದುದ್ದಕ್ಕೂ ಮುಂದುವರೆಯ ಬೇಕು ಎಂದು ಸಲಹೆ ನೀಡಿದರು.

The post ಮೋದಿಯಿಂದಾಗಿ ಯೋಗಕ್ಕೆ ವಿಶ್ವಮನ್ನಣೆ – ಕರಂದ್ಲಾಜೆ appeared first on Public TV.

Source: publictv.in

Source link