Home Lifestyle ಅಪೂರ್ಣ ನಿದ್ರೆಯು ನಿಮ್ಮ ಮೂಡ್​ಅನ್ನು ಮಾತ್ರ ಹಾಳು ಮಾಡಲ್ಲ, ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತೆ

ಅಪೂರ್ಣ ನಿದ್ರೆಯು ನಿಮ್ಮ ಮೂಡ್​ಅನ್ನು ಮಾತ್ರ ಹಾಳು ಮಾಡಲ್ಲ, ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತೆ

by Savi Kannada

ಅಪೂರ್ಣ ನಿದ್ರೆಯು ನಿಮ್ಮ ಮೂಡನ್ನು ಹಾಳುಮಾಡುವುದು ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನು ಕೂಡ ಹದಗೆಡಿಸುತ್ತದೆ. ನೀವು ಮಲಗಿದ ಬಳಿಕ ಪದೇ ಪದೇ ಎಚ್ಚರವಾಗುವುದು ಅಥವಾ ರಾತ್ರಿ ಎಷ್ಟೊತ್ತಾದರೂ ನಿದ್ರೆ ಬಾರದಿರುವುದು ಮರುದಿನ ಇಡೀ ನಿಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ, ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ, ಕಣ್ಣು ಉರಿಯುತ್ತಿರುತ್ತೆ, ನಿಶ್ಯಕ್ತಿ ಭಾವ. ನಿದ್ರಾಹೀನತೆಯು ದೀರ್ಘಕಾಲದ ನಿದ್ರಾಹೀನತೆಯು ಹೃದ್ರೋಗ ಮತ್ತು ಮಧುಮೇಹದಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನಿದ್ರೆ ಕೂಡ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.

ಮೂಡ್ ಮತ್ತು ನಿದ್ರೆಗೆ ಏನು ಸಂಬಂಧ ಸಾಮಾನ್ಯವಾಗಿ ನಾವು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಮಾಡದಿದ್ದರೆ, ಬೆಳಗ್ಗೆ ನಮಗೆ ಚೆನ್ನಾಗಿರುವುದಿಲ್ಲ. ಇದು ಕೋಪ, ಕಿರಿಕಿರಿ, ಏಕಾಗ್ರತೆಗೆ ತೊಂದರೆ ಉಂಟುಮಾಡುತ್ತದೆ. ಚೈತನ್ಯವನ್ನು ಅನುಭವಿಸುವ ಬದಲು, ನಾವು ದಣಿದಂಥಾ ಅನುಭವವಾಗುವುದು. ಕ್ಯೂರಿಯಸ್ ಜರ್ನಲ್ ಆಫ್ ಸ್ಲೀಪ್ ಹೆಲ್ತ್ ಪ್ರಕಾರ, ನಿದ್ರೆ ಮತ್ತು ಮನಸ್ಥಿತಿಗೆ ಸಂಬಂಧವಿದೆ. ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮರುದಿನ ನಾವು ಬೇರೊಬ್ಬರ ಮೇಲೆ ರೇಗಾಡಬಹುದು, ಕೋಪ ತೋರಿಸಬಹುದು. ಕೆಟ್ಟ ಮನಸ್ಥಿತಿಯು ಆತಂಕ, ಒತ್ತಡ, ಖಿನ್ನತೆಯ ಭಾವನೆಗಳನ್ನು ಉಂಟುಮಾಡಬಹುದು. ಮತ್ತೊಂದೆಡೆ, ನಾವು ಕೆಟ್ಟ ಮನಸ್ಥಿತಿಯೊಂದಿಗೆ ಅಥವಾ ಯಾವುದೇ ರೀತಿಯ ಒತ್ತಡವು, ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಮತ್ತಷ್ಟು ಓದಿ:Sleep Cycle: ನಿದ್ರೆಯ ಚಕ್ರ ಎಂದರೇನು? ಆಳವಾದ ನಿದ್ರೆ ಯಾವಾಗ ಮತ್ತು ಲಘು ನಿದ್ರೆ ಯಾವಾಗ ಬರುತ್ತೆ ತಿಳಿಯಿರಿ

ಮಾನಸಿಕ ಅಸ್ವಸ್ಥತೆ ಹೆಚ್ಚಾಗುತ್ತದೆ ದೀರ್ಘಾವಧಿಯ ನಿದ್ರಾಹೀನತೆಯು ಹೃದ್ರೋಗ ಮತ್ತು ಮಧುಮೇಹದಂತಹ ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಮನಸ್ಥಿತಿ ಮೇಲೆ ಭಾರಿ ಪರಿಣಾಮ ಬೀರಬಹುದು. ನಿದ್ರಾಹೀನತೆ ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿಕಟ ಸಂಬಂಧ ಹೊಂದಿವೆ. ಇದು ಎರಡೂ ರೀತಿಯಲ್ಲಿ ಕೆಲಸ ಮಾಡಬಹುದು. ಒಂದೇ ದಿನಚರಿಯನ್ನು ಅನುಸರಿಸಿ : ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಮಲಗಿ, ವಾರಾಂತ್ಯದಲ್ಲೂ ಈ ಅಭ್ಯಾಸವನ್ನು ಬದಲಾಯಿಸಬೇಡಿ. ಪ್ರತಿದಿನ ಬೆಳಗ್ಗೆ ಒಂದೇ ಸಮಯಕ್ಕೆ ಏಳುವುದನ್ನು ರೂಢಿಸಿಕೊಳ್ಳಿ . ಇದು ನಿಮ್ಮ ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಆರಾಮದಾಯಕ ಪರಿಸರ ಮಲಗುವ ಕೋಣೆ ಶಾಂತ, ಕತ್ತಲೆ, ಆರಾಮದಾಯಕವಾಗಿರಬೇಕು. ಮಲಗುವ ಸ್ಥಳದ ತಾಪಮಾನವು ಆರಾಮದಾಯಕವಾಗಿರಬೇಕು. ಅತಿ ಬಿಸಿ ಅಥವಾ ತಣ್ಣನೆಯ ವಾತಾವರಣ ಇರಬಾರದು. ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು ಟಿವಿ, ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಬಳಸುವುದನ್ನು ತಪ್ಪಿಸಿ.

ರಾತ್ರಿ ಲಘು ಆಹಾರವಿರಲಿ ಮಲಗುವ ಮೊದಲು ಭಾರವಾದ ಆಹಾರವನ್ನು ಸೇವಿಸಬೇಡಿ. ಈ ಆಹಾರಗಳು ನಿದ್ರೆಯಲ್ಲಿ ಅಡಚಣೆಗಳನ್ನು ಉಂಟುಮಾಡುತ್ತವೆ.

ಯೋಗ ಮತ್ತು ಧ್ಯಾನ: ಮಲಗುವ ಮುನ್ನ ಅನುಲೋಮ-ವಿಲೋಮದಂತಹ ಉಸಿರಾಟದ ಯೋಗವನ್ನು ಮಾಡಿ. ಮಲಗುವ ಮುನ್ನ 10 ನಿಮಿಷಗಳ ಧ್ಯಾನವು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಹಗಲಿನಲ್ಲಿ ದೈಹಿಕವಾಗಿ ಸಕ್ರಿಯವಾಗಿರುವುದು ರಾತ್ರಿಯಲ್ಲಿ ಹೆಚ್ಚು ಸುಲಭವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.

You may also like